Posts

Showing posts from July, 2024

ಬೃಹತ್ ಶಿಲಾಯುಗದ ನೆಲೆಯಲ್ಲಿ ಹೆರಿಟೇಜ್ ವಾಕ್

Image
  ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಹಿನ್ನೆಲೆ ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮ -- ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ‌ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರಿಂದ ಹಿರೇಬೆಣಕಲ್ ನಲ್ಲಿ ಪಾರಂಪರಿಕ ನಡಿಗೆ ----- ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ ....................................... ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿ ಬೃಹತ್ ಶಿಲಾಯುಗದ ನೆಲೆಯಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನಲ್ಲಿ ಪಾರಂಪರಿಕೆ ನಡಿಗೆ (ಹೆರಿಟೇಜ್ ವಾಕ್) ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮವು ಜುಲೈ 25ರಂದು ನಡೆಯಿತು. ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಬೆಂಗಳೂರು ಕಚೇರಿ ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಎ.ಎಸ್.ಐ ಹಂಪಿ ವೃತ್ತ, ಕಿಷ್ಕಿಂದ ಯುತ್ ಟ್ರೆಕ್ಕಿಂಗ್ ಕ್ಲಬ್ & ಲೈವ್ ವಿತ್ ಹ್ಯೂಮ್ಯಾನಿಟಿ ಟ್ರಸ್ಟ್ ಇವರ ಸಹಯೋಗದಲ್ಲಿ ಶಿಲಾಯುಗದ ನೆಲೆಯಲ್ಲಿ ನಡೆದ ಹೆರಿಟೇಜ್ ವಾಕ್ ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಚಾಲನೆ ನೀಡಿದರು. ಬೃಹತ್ ಶಿಲಾಯುಗದ ಸ್ಮಾರಕಗಳ ವೀಕ್ಷಣೆ: ಹೆರಿಟೇಜ್ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ಬೆಟ್ಟದಲ್ಲಿ ಹೆಜ್ಜೆ ಹಾಕಿ, ಬೃಹತ್ ಶಿಲಾಯುಗದ ನೆಲೆ ಹಿರೇಬೆಣಕಲ್ ಸ್ಮಾರಕಗಳಾದ ಮೋರೇರ ಬೆಟ್ಟ...