17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ
ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಪತ್ರಿಕಾಗೋಷ್ಠಿ ಸಂಘದ ಕಚೇರಿಯಲ್ಲಿ ನಡೆಯಿತು.
ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡುತ್ತ ಏಪ್ರಿಲ್ 17ರಂದು ಉದ್ಯೋಗ ಮೇಳವನ್ನು ಕೊಟ್ಟೂರೇಶ್ವರ ಕ್ಯಾಂಪಸ್ ನಲ್ಲಿ ಯೋಜಿಸಲಾಗಿದೆ. ನಿರುದ್ಯೋಗಿ ಯುವಜನರು ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಿ ಎಂದು ಕರೆ ನೀಡಿದರು.
ಉದ್ಯೋಗ ಮೇಳದ ಪ್ರಮುಖ ವಿವರಗಳು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ - ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯ ಕಲ್ಕರ ಶ್ರೀ ಚನ್ನಬಸವೇಶ್ವರ ಸ್ವಾಮಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಸಹಯೋಗದಲ್ಲಿ ನಡೆಯಲಿದೆ
ದಿನಾಂಕ: 17 ಏಪ್ರಿಲ್ 2025 ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 ವರೆಗೆ
ಸ್ಥಳ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕ್ಯಾಂಪಸ್ ಗಂಗಾವತಿನಲ್ಲಿ
ಭಾಗವಹಿಸುವ ಕಂಪನಿಗಳು: ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಬಳ್ಳಾರಿ, ಹಾಸನ, ಶಿವಮೊಗ್ಗ ಮುಂತಾದ ಪ್ರದೇಶಗಳ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.
ಅರ್ಹತೆ:- ಶೈಕ್ಷಣಿಕ: ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೊಮಾ, ಪದವೀಧರರು, ಕಂಪ್ಯೂಟರ್ ತರಬೇತಿ ಪಡೆದವರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ವಯೋಮಿತಿ: 18 ರಿಂದ 35 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ವಿಶೇಷ ಸೌಲಭ್ಯವಿದೆ ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗ ಅಭಿವೃದ್ಧಿ ನಿರ್ವಾಹಕ ಹನುಮೇಶ್, ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶರಣೇಗೌಡ ,
ಹೆಚ್.ಎಂ. ಮಂಜುನಾಥ್,
ಸುರೇಶ ಸಿಂಗನಾಳ,
ಲಿಂಗಪ್ಪ ಹಿರಾಳ ಕಮತಗಿ,
ಪ್ರಾಚಾರ್ಯರಾದ ಬಸವರಾಜ ಅಯೋಧ್ಯ
ಮತ್ತು ಮುಂತಾದ ಗಣ್ಯರು ಉಪಸ್ಥಿತರಿದ್ದರು.
Comments
Post a Comment