ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*
ಕಿಷ್ಕಿಂದ ಪ್ರಭಸುದ್ದಿ ಗಂಗಾವತಿ, [ 29 ಏಪ್ರಿಲ್ 2025 ]:** ಇಂದು ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ ನಿರಪರಾಧಿ ಜೀವಗಳನ್ನು ಸ್ಮರಿಸಿ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಗಾಣಿಗರ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್ ಅವರ ನೇತೃತ್ವಲ್ಲಿ ಎರಡು ನಿಮಿಷಗಳ ಮೌನಾಚರಣೆ ನಡೆಯಿತು
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ್, ಉಪಾಧ್ಯಕ್ಷ ಪ್ರಕಾಶ್ ಎಂ. ಕುಸುಬಿ, ಪ್ರಧಾನ ಕಾರ್ಯದರ್ಶಿ ಎಚ್.ಎ. ಮಂಜುನಾಥ್, ಜಂಟಿ ಕಾರ್ಯದರ್ಶಿ ಅರುಣ್ ಆರ್. ಜಿ., ಮತ್ತು ಕಾರ್ಯಕಾರಿ ಸದಸ್ಯರು ಹನುಮಂತಪ್ಪ ಆಳ್ವಿ, ನಾಗರಾಜ್ ನಾಯಕ್ ಹಾಗೂ ಹಿರಿಯ ವಕೀಲರು ಬಿ. ಮಲ್ಲಪ್ಪ, ಎಸ್.ಕೆ. ದಂಡಿನ್, ವಿ.ಎನ್. ಪಾಟೀಲ್, ಸೈಯದ್ ಅಶ್ಮುದ್ದೀನ್, ಜಾಜಿ ಮಲ್ಲಿಕಾರ್ಜುನ, ಪರಸಪ್ಪ ನಾಯಕ್, ಸಂತೋಷ್ ಬಾಳಂಕರ, ಪ್ರವೀಣ್ ಹೂಗಾರ್, ಮಾರುತಿ ಮೆತುಗಲ್ಲು, ಚಂದ್ರಶೇಖರ್, ಟಿ. ಮಂಜುನಾಥ್, ವೀರೇಶ್ ಕಮಲಾಪುರ್, ಪಿ.ವಿ. ಪಾಟೀಲ್, ಎಸ್.ಎಂ. ಸಜ್ಜಿಹೋಳ್, ವಿಜಯಲಕ್ಷ್ಮಿ, ನೂರ್ಜಹಾನ್, ರೋಜಾ ಮುಂತಾದವರು ಉಪಸ್ಥಿತರಿದ್ದರು.
ಭಯೋತ್ಪಾದನೆಯ ವಿರುದ್ಧ ಏಕತೆಯ ಸಂದೇಶ ನೀಡುವ ಈ ಕಾರ್ಯಕ್ರಮದಲ್ಲಿ ನ್ಯಾಯಾಲಯದ ಎಲ್ಲ ಸದಸ್ಯರು ಮೌನವಾಗಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಘಟನೆಯು ದೇಶದ ಶಾಂತಿ ಮತ್ತು ಸುರಕ್ಷತೆಗೆ ಎಂದು ಉಪಸ್ಥಿತರು ಅಭಿಪ್ರಾಯಪಟ್ಟಿದ್ದಾರೆ.
Comments
Post a Comment