ದತ್ತಾತ್ರೆಯ ಹೋಮ
ದತ್ತಾತ್ರೆಯ ಹೋಮ
ಗಂಗಾವತಿ : ನಗರದ ಶಂಕರಮಠದಲ್ಲಿ ರವಿವಾರದಂದು ಶ್ರೀ ದತ್ತ ಜಯಂತಿ ಪ್ರಯುಕ್ತವಾಗಿ ದತ್ತಾತ್ರೇಯ ಹೋಮ ಶ್ರದ್ಧೆ-ಭಕ್ತಿಯಿಂದ ಅಪಾರ ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ಜರುಗಿತು.. ವೇದಮೂರ್ತಿ ಮಹೇಶ್ ಭಟ್ ಸುನಿಲ್ ವೈದ್ಯ ತಂಡದವರು ಹೋಮದ ನೇತೃತ್ವವನ್ನು ವಹಿಸಿಕೊಂಡಿದ್ದರು.. ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣ ವೈದ್ಯ ಮಾತನಾಡಿ, ತ್ರಿಮೂರ್ತಿ ಸ್ವರೂಪರಾದ ದತ್ತಾತ್ರೆಯ ಗುರುಗಳು ಸಾಕ್ಷಾತ್ ಬ್ರಹ್ಮ ವಿಷ್ಣು ಮಹೇಶ್ವರ ಸ್ವರೂಪರು.. ದತ್ತ ನಾಮ ಸ್ಮರಣೆಯಿಂದ ಹಾಗೂ ಗುರುಚರಿತ್ರೆ ಪಾರಾಯಣದಿಂದ ಸಂಕಷ್ಟಗಳು ದೂರವಾಗಲಿದೆ ಎಂದು ತಿಳಿಸಿದರು.. ಅತಿಥಿ ಉಪನ್ಯಾಸ ನೀಡಿದ ವೇದಮೂರ್ತಿ ಬಾಲಕೃಷ್ಣರವರು ಬ್ರಹ್ಮ ಸೃಷ್ಟಿಕರ್ತನಾಗಿದ್ದು ಸಪ್ತ ಖುಷಿಗಳಿಗೆ ಅನುಗ್ರಹಿಸಿ ಅವರಲ್ಲಿ ಒಬ್ಬರಾದ ಅತ್ರಿ ಮುನಿಗಳ ಹಾಗೂ ಮಹಾಸತಿ ಅನುಸೂಯ ದೇವ ಪುತ್ರನಾಗಿ ಜಯಿಸಿದವರು.. ದತ್ತಾತ್ರೇಯ ಗುರುಗಳು ಅವರ ಮಹಿಮೆ ಅಪಾರವಾಗಿದ್ದು ಭಕ್ತಕೋಟಿ ಉದ್ಧಾರಕ್ಕಾಗಿ ಜನ್ಮತಾಳಿದ್ದಾರೆ ಎಂದು ದತ್ತ ಗುರುಗಳ ಜನನ ಅವತಾರಗಳ ಕುರಿತು ಸಮಗ್ರ ಮಾಹಿತಿಯನ್ನು ಭಕ್ತಸಮೂಹಕ್ಕೆ ತಿಳಿಸಿದರು..ಇದೇ ಸಂದರ್ಭದಲ್ಲಿ ಲಿಟಲ್ ಹಾರ್ಟ್ಸ್ಶಾಲೆಯ ಸಂಸ್ಥಾಪಕ ಜಗನ್ನಾಥ್ ಅಲಂಪಲ್ಲಿ ಮಾತನಾಡಿ, ನಾರಾಯಣರಾವ್ ಅವರ ನಾಯಕತ್ವದಲ್ಲಿ ಶ್ರೀಮಠದ ಕಾರ್ಯಗಳು ಉತ್ತಮವಾಗಿ ಜರುಗುತ್ತಿದ್ದು ಅವರ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳುತ್ತಿದೆ ಎಂದು ಪ್ರಶಂಸಿಸಿದರು.. ಹಾಗೆ ಶ್ರೀಮಠಕ್ಕೆ ತಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದರು ಇದಕ್ಕೂ ಮುಂಚೆ ದೇವಸ್ಥಾನಕ್ಕೆ ತನು-ಮನ ಧನದಿಂದ ಸಹಕರಿಸಿದ ಗಣ್ಯರ ಕಾರ್ಯವನ್ನು ಪ್ರಶಂಸಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ದತ್ತ ಪಾದುಕೆಗಳಿಗೆ ಅಭಿಷೇಕ ರುದ್ರಾಭಿಷೇಕ ಸೇರಿದಂತೆ, ಭಜನಾ ಮಂಡಳಿಯವರಿಂದ ಭಜನೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ ಹಾಡು ನೃತ್ಯಗಳಿಂದ ಭಕ್ತಿ ಪರಾಕಾಷ್ಠೆ ಮೆರೆದರು.. ಈ ಸಂದರ್ಭದಲ್ಲಿ ಜಗನ್ನಾಥರಾವ್, ಶ್ರೀಪಾದರಾವ್ ಮುಧೋಳ ಕರ, ಶ್ರೀನಿವಾಸ್ ಭಟ್, ಶೇಷಗಿರಿ ಗಡಾದ, ಗೋಪಿನಾಥ್ ದಿನ್ನಿ, ಭಜನಾ ಮಂಡಳಿಯ ಮುಖ್ಯಸ್ಥ ಶ್ರೀದೇವಿ ಪುರಾಣಿಕ, ಗಾಯತ್ರಿ ಶ್ರೀಧರ್ ಹೇಮಗಿರಿ, ಸುಮಾ ಶೇಷಗಿರಿ, ವಿದ್ಯಾ ಬಾಯಿ ನಾರಾಯಣರಾವ್ ಸೇರಿದಂತೆ ಸಮಾಜದ ಬಾಂಧವರು ಪಾಲ್ಗೊಂಡಿದ್ದರು
Comments
Post a Comment