ಮಾದರ ಚನ್ನಯ್ಯ ಜಯಂತೋತ್ಸವ ಯಶಸ್ವಿ
ಮಾದರ ಚನ್ನಯ್ಯ ಜಯಂತೋತ್ಸವ ಯಶಸ್ವಿ
ಗಂಗಾವತಿ: ನಗರದಲ್ಲಿ ಶಿವಶರಣ ಮಾದರ ಚೆನ್ನಯ್ಯ ಅವರ ೯೭೧ನೇ ಜಯಂತಿಯನ್ನು ಸರಳವಾಗಿ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಭಾನುವಾರ ನಗರದ ಡಾ|| ಬಿ.ಆರ್.ಅಂಬೇಡ್ಕರ್ ನಗರದಲ್ಲಿನ ಮಾದರ ಚೆನ್ನಯ್ಯ ವೃತ್ತದಲ್ಲಿ ಮಾದಿಗ ಸಮಾಜದವತಿಯಿಂದ ಚನೆಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಯಂತಿ ಆಚರಿಸಲಾಯಿತು. ಜಯಂತಿಯಲ್ಲಿ ಭಾಗವಹಿಸಿದ್ದ ಸಮಾಜದ ಹಿರಿಯರು ಮಾತನಾಡಿ, ಮಾದರ ಚೆನ್ನಯ್ಯ ಜಯಂತಿಯನ್ನು ಇಂದು ನಾವೆಲ್ಲ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇವೆ. ಮಾದರ ಚೆನ್ನಯ್ಯನವರು ಬಸವಣ್ಣವರಿಂದ ಪ್ರೇರಣೆ ಪಡೆದು ಶರಣರಾಗಿ ವಚನಗಳ ಮೂಲಕ ಸಮಾಜವನ್ನು ಪರಿವರ್ತಿಸಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ಇಂದು ನಮ್ಮ ಸಮಾಜ ನಡೆಯಬೇಕಿದೆ. ಜಯಂತಿ ಮೂಲಕ ಸಮಾಜವನ್ನು ಸಂಘಟಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲರು ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಫಕಿರಪ್ಪ ಮಂಡಿ, ಹುಲಗಪ್ಪ ಧಣಿ, ನಗರಸಭೆ ಸದಸ್ಯ ನವೀನ್ ಪಾಟೀಲ್, ಯುವ ಮುಖಂಡ ಬಸವರಾಜ, ಶಿವಪ್ಪ ಮಾದಿಗ, ಸಂಗಮೇಶ ಅಯೋಧ್ಯೆ, ದುರಗಪ್ಪ ಅಕ್ಕಿರೊಟ್ಟಿ, ರಾಘವೇಂದ್ರ, ಪರಶುರಾಮ, ವೀರಭದ್ರ ಕಟ್ಟಿಮನಿ, ಗಣೇಶ ಮಚ್ಚಿ, ಸಂಗಪ್ಪ ಚಲುವಾದಿ, ವಿರೇಶ ಯಲಬುರ್ಗಿ, ಸುರೇಶ, ದುರಗೇಶ, ಮಂಜುನಾಥ ಕಲ್ಗುಡಿ, ಪರಶುರಾಮ, ಕೃಷ್ಣ ಮತ್ತಿತರು ಇದ್ದರು.
Comments
Post a Comment