ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಎಂ.ಇ.ಎಸ್ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಕ್ ರ‍್ಯಾಲಿ ಮೂಲಕ ಮನವಿ.
ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಎಂ.ಇ.ಎಸ್ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಕ್ ರ‍್ಯಾಲಿ ಮೂಲಕ ಮನವಿ.
ಗಂಗಾವತಿ: ಇತ್ತೀಚೆಗೆ ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರು ನಮ್ಮ ಕನ್ನಡ ಧ್ವಜವನ್ನು ಸುಟ್ಟು, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿದ್ದು, ತೀವ್ರ ಖಂಡನೀಯವಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ (ರಿ) ಗಂಗಾವತಿ ತಾಲೂಕ ಅಧ್ಯಕ್ಷ ಬೆಟ್ಟಪ್ಪ ಹೆಚ್. ಚಿಕ್ಕಬೆಣಕಲ್ ಇವರು ಪ್ರಕಟಣೆಯಲ್ಲಿ ಕಿಡಿಕಾರಿದರು.
ಅವರು ಇಂದು ನಾಡದ್ರೋಹಿಗಳಾದ ಎಂ.ಇ.ಎಸ್. ಪುಂಡರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸರ್ಕಾರಕ್ಕೆ ಕೋರುವಂತೆ ಆಗ್ರಹಿಸಿ ತಹಶೀಲ್ದಾರ ಗಂಗಾವತಿ ಇವರಿಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಿ.ಬಿ. ಎಸ್ ವೃತ್ತ, ಗಾಂಧಿ ವೃತ, ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ತಹಶೀಲ್ ಕಛೇರಿವರೆಗೆ ನೂರಾರು ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಿ, ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಎಸಗುತ್ತಾ, ಕನ್ನಡದ ಧೀಮಂತ ವ್ಯಕ್ತಿಗಳ, ಸಾಹಿತಿಗಳ, ಕವಿಗಳಿಗೆ ಅಪಮಾನವೆಸಗುವುದಲ್ಲದೇ, ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸುವ ಮೂಲಕ ಕನ್ನಡ ನಾಡಿನ ಗಡಿಭಾಗವಾದ ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕಾರಣ ಎಂ.ಇ.ಎಸ್ ಸಂಘಟನೆಯನ್ನು ರದ್ದುಮಾಡಿ, ನಾಡದ್ರೋಹಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಿ ಹಾಗೂ ಬೆಳಗಾವಿಯ ಸುವರ್ಣ ಸೌಧಧ ಮುಂದೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪನೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಸಿದ್ದಯ್ಯ ಹಾಗೂ ಸಿದ್ದರಾಮಯ್ಯ ಗುರುವಿನ್ ಬಸಾಪಟ್ಟಣ, ಶ್ರೀ ಕನಕದಾಸ ತಾಲೂಕು ಕುರುಬರ ಸಂಘದ ಅಧ್ಯಕ್ಷ ಯಮನಪ್ಪ ವಿಠಲಾಪುರ, ನಾಗೇಶಪ್ಪ ಕೆ., ಯಮನಪ್ಪ ನವಲಿ ರ‍್ಹಾಳ, ನೀಲಪ್ಪ ಸಣ್ಣಕ್ಕಿ, ಶರಣೇಗೌಡ್ರು ಬಸಾಪಟ್ಟಣ, ಅಶೋಕ ಗೌಡ, ಕೆ. ವೆಂಕಟೇಶ, ನೀಲಕಂಠಪ್ಪ, ವೆಂಕಟೇಶ ಸಿಂಗನಾಳ, ಮಂಜು ಹೊಸಳ್ಳಿ, ಶಿವು ಡಣಾಪುರ ವಕೀಲರು, ವೀರನಗೌಡ ವಡ್ಡರಹಟ್ಟಿ, ಸಿದ್ದಲಿಂಗಪ್ಪ ಗೌಡ, ಬಸವರಾಜ ಸಂಗಟಿ, ಶಿವು ಹೊಸಳ್ಳಿ, ದುರುಗಪ್ಪ ಮೋರಿ ಹೊಸಳ್ಳಿ, ಶರಣಬಸವ, ಬೀರಪ್ಪ ಡಣಾಪುರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡ ವಿರುಪಾಕ್ಷಿಗೌಡ ನಾಯಕ, ಪಂಪಣ್ಣ ನಾಯಕ, ಚನ್ನಬಸವ ಜೇಕಿನ್, ರಾಜೇಶರೆಡ್ಡಿ ಹಾಗೂ ಹಲವು ಗ್ರಾಮಗಳ ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments
Post a Comment