ಮ್ಯಾಥ್ಸ್ ಐಕಾನ್ " ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸುವ ಅವಶ್ಯಕತೆ : ರವಿ ಚೈತನ್ಯರೆಡ್ಡಿ
ಮ್ಯಾಥ್ಸ್ ಐಕಾನ್ " ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸುವ ಅವಶ್ಯಕತೆ : ರವಿ ಚೈತನ್ಯರೆಡ್ಡಿ
ಗಂಗಾವತಿ: ಅಕ್ಷರ ಶ್ರೀ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ ಭಾರತೀಯ ಖ್ಯಾತ ಗಣಿತ ಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ನರ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಡಿ.19ರಂದು ಮ್ಯಾಥ್ಸ್ ಐಕಾನ್ ಟೆಸ್ಟ್ (ಮಾದರಿ ಗಣಿತ ಪರೀಕ್ಷೆ) ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಂಸ್ಥೆಯ ಅಧ್ಯಕ್ಷದ ರವಿ ಚೈತನ್ಯ ರೆಡ್ಡಿ ಮಾತನಾಡಿ ರಾಜ್ಯಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮ, ICSE ವಿಭಾಗದ ಹತ್ತನೇ ತರಗತಿ ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸುವ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ "ಮ್ಯಾಥ್ ಐಕಾನ್" ಪರೀಕ್ಷೆಯನ್ನು ನಮ್ಮ ಸಂಸ್ಥೆ ವತಿಯಿಂದ ಆಯೋಜಿಸಿದ್ದೇವೆ.ಈ ಪರೀಕ್ಷೆಯಲ್ಲಿ ಗಂಗಾವತಿ ಕಾರಟಗಿ, ಕನಕಗಿರಿ ,ಕೊಪ್ಪಳ ಜಿಲ್ಲೆಯಲ್ಲಿ ಇರುವ ಶಾಲೆಯ 600 ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಇದೇ ತಿಂಗಳು ದಿನಾಂಕ 22 ರಂದು ಶ್ರೀನಿವಾಸ್ ರಾಮಾನುಜನ್ನರ ಹುಟ್ಟುಹಬ್ಬದ ನಿಮಿತ್ಯ ಹಿರಿಯ ಗಣಿತ ಶಿಕ್ಷಕರಿಗೆ ಅಕ್ಷರಾ ಶ್ರೀ ವೆಂಕಟೇಶ್ವರ ಶ್ರೀನಿವಾಸ್ ರಾಮಾನುಜನ್ ಅವಾರ್ಡ್ ವಿಸ್ತರಿಸುವ ಹಾಗೂ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ 5000 ರೂ. ನಗದು ಹಣ ಹಾಗೂ ವಿಶೇಷವಾಗಿ ಎರಡರಿಂದ ಹತ್ತನೇ ಸ್ಥಾನ ಪಡೆಯುವ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಎಕ್ಸಲೆಂಟ್ ಗಣಿತ ಪುಸ್ತಕಗಳನು ನೀಡಲಾಗುವುದು ಎಂದು ತಿಳಿಸಿದರು.
Comments
Post a Comment