Posts

Showing posts from February, 2023

ದ್ವಿಪಥ ರಸ್ತೆ ಸಾಕು.. ಚತುಸ್ಪಥ ರಸ್ತೆ ಕೈ ಬಿಡಿ... ಹೆಚ್ ಆರ್ ಶ್ರೀನಾಥ

Image
 

ಕೊಪ್ಪಳದ ಚಂದ್ರಗಿರಿ ಬೆಟ್ಟದಲ್ಲಿ ಶಿಲಾಯುಗದ ಗವಿ ಚಿತ್ರಗಳು ಪತ್ತೆ :

Image
                     ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಚಂದ್ರಗಿರಿ ಬೆಟ್ಟ ಪ್ರದೇಶದಲ್ಲಿ ಶಿಲಾಯುಗದ ಆದಿಮಾನವನ ಗವಿ ಚಿತ್ರಗಳು ಬೆಳಕಿಗೆ ಬಂದಿವೆ ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಮತ್ತವರ ತಂಡ ಈ ಚಿತ್ರಗಳುಳ್ಳ ಗವಿಯನ್ನು ಶೋಧಿಸಿದೆ. ಹಿಟ್ನಾಳ್ ಹೋಬಳಿಯ ಅಚಲಾಪುರ ಸೀಮೆಯ ಚಂದ್ರಗಿರಿ ಗ್ರಾಮದ ಹತ್ತಿರವಿರುವ ಬೆಟ್ಟದಲ್ಲಿ ಈ ಗವಿ ಕಂಡು ಬಂದಿದೆ. ಭೂತಪ್ಪನ ಹೊಲದ ಉತ್ತರ ಮೇರೆಗೆ ಇರುವ ಈ ಗವಿಗೆ ಜೇನುಕಲ್ಲು ಗವಿ ಎಂದು ಸ್ಥಳೀಯರು ಕರೆಯುತ್ತಾರೆ .ಅರೇ ವೃತ್ತಾಕಾರದಲ್ಲಿ ಕಲ್ಲಾಸರೆಯಂತಿರುವ ಈ  ಗವಿ  ಪೂರ್ವ ಪಶ್ಚಿಮವಾಗಿ 30ಪೀಟ್ ಉದ್ದವಾಗಿ, ಮಧ್ಯದಲ್ಲಿ 10ಪೀಟ್ ಅಗಲವಾಗಿ  ಹಾಗೂ 25 ಫೀಟು ಎತ್ತರವಾಗಿದೆ.ನೆಲಮಟ್ಟದಿಂದ ಗವಿ ಬೆಟ್ಟದಲ್ಲಿ ಸುಮಾರು 100 ಮೀಟರ್ ಎತ್ತರದಲ್ಲಿದೆ. ಗವಿಯು ಆದಿಮಾನವನ ವಾಸಸ್ಥಾನವಾಗಿದ್ದು ಗವಿಯಲ್ಲಿ ಹಾಳು ಮಣ್ಣು ,ವಿಶಿಷ್ಟ ಅಲಂಕರಣೆಯ ಮಡಿಕೆ ಚೂರುಗಳು ,ಚರ್ಟ್ ಶಿಲೆಯ ತುಂಡುಗಳು ಹಾಗೂ ಅಸ್ಥಿ ಅವಶೇಷಗಳು ಕಂಡುಬಂದಿವೆ. ಜೊತೆಗೆ ಗವಿಯ ಹಿಂಬದಿಯ ವಿಶಾಲ ಗೋಡೆಯ ತುಂಬೆಲ್ಲ ಕೆಂಪುವರ್ಣದಲ್ಲಿ ಬಿಡಿಸಿರುವ ಹಲವಾರು ಚಿತ್ರಗಳಿವೆ. ಅವುಗಳಲ್ಲಿ ಕಾಲುಗಳನ್ನು ವಕ್ರ ಮಾಡಿ ಕೈಗಳನ್ನು ಮೇಲಕ್ಕೆ ಎತ್ತಿ ನಿಂತಿರುವ ಮನುಷ್ಯ ,ನಾಲ್ಕು ಸಹಜ ಮನುಷ್ಯ ಚಿತ್ರಗಳು, ಕಡ್ಡಿ ಆಕೃತಿಯ ಎಂಟು ಮನುಷ್ಯ ಚಿತ್ರಗಳು ,ಒಂದು ...

ಕೊಪ್ಪಳ ಕೋಟೆಗೆ ಗಂಗಾವತಿ ಚಾರಣ ಬಳಗ :ಕೊಪ್ಪಳ ಚಾರಣ ಬಳಗ ಉದ್ಘಾಟನೆ:ಕೋಟೆ ರಕ್ಷಣೆಗೆ ಮನವಿ

Image
  ಕೊಪ್ಪಳ ಕೋಟೆಗೆ ಗಂಗಾವತಿ ಚಾರಣ ಬಳಗ :  ಕಿಷ್ಕಿಂಧಪ್ರಭ ಸುದ್ದಿ ಕೊಪ್ಪಳ : ಭೌಗೋಳಿಕವಾಗಿ ವೈಶಿಷ್ಟ್ಯ ಪೂರ್ಣ ನೆಲೆಗಳಲ್ಲಿರುವ  ಚಾರಿತ್ರಿಕ ಸ್ಥಳಗಳಿಗೆ ಚಾರಣದ ಮೂಲಕ ಭೇಟಿ ನೀಡಿ ಮಾಹಿತಿ ಅರಿಯುವ, ಸಂರಕ್ಷಣೆಗೆ ಆಗ್ರಹಿಸುವ ಉದ್ದೇಶ ಹೊಂದಿರುವ ಗಂಗಾವತಿ ಚಾರಣ ಬಳಗ ತನ್ನ ೨೫ನೇ ಚಾರಣದ ಬೆಳ್ಳಿ ನಡೆಯನ್ನು ಈ ಬಾರಿ ದಿನಾಂಕ ೧೦-೨-೨೦೨೩ರಂದು ಕೊಪ್ಪಳದ ಕೋಟೆಗೆ ಹಮ್ಮಿಕೊಂಡಿತ್ತು. ಗಂಗಾವತಿ ಹಾಗೂ ಕೊಪ್ಪಳದ ಚಾರಣ ಬಳಗದ ಸುಮಾರು ೪೦ ಸದಸ್ಯರು ಭಾಗವಹಿಸಿದ್ದರು. ಕೊಪ್ಪಳ ಸದಸ್ಯರಾದ ಡಾ.ಸುಂಕದ ಹಾಗೂ ಡಾ. ಸಿದ್ದಲಿಂಗಪ್ಪ ಕೊಟ್ನೇಕ¯ ಹಾಗೂ ಇತರ ಸದಸ್ಯರು   ಚಾರಣ ತಂಡಕ್ಕೆ  ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು.  ಉಪಹಾರ ಸ್ವೀಕರೀಸಿದ ತಂಡ ಕೊಪ್ಪಳ ಕೋಟೆಗೆ ಚಾರಣ ಆರಂಭಿಸಿತು. ಕೋಟೆಯ ಪ್ರಧಾನ ದ್ವಾರ ಮಂಟಪದ ಬಳಿ  ಮಂಜುನಾಥ ಗುಡ್ಲಾನೂರ ಸ್ವಾಗತಿಸಿದರು. ಡಾ. ಶಿವಕುಮಾರ ಮಾಲೀಪಾಟೀಲರು ಪ್ರಾಸ್ಥಾವಿಕವಾಗಿ  ಮಾತನಾಡಿದರು. ಮಾರ್ಗದರ್ಶಕರಾದ ಡಾ. ಶರಣಬಸಪ್ಪ ಕೋಲ್ಕಾರ , ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್. ಡಾ. ಗೀತಾ ಪಾಟೀಲ್ ಕೋಟೆಯ ಸಮಗ್ರ ಇತಿಹಾಸವನ್ನು ತಿಳಿಸಿಕೊಟ್ಟರು.  ನಂತರ ಕೋಟೆಯ ವಿವಿಧ ಭಾಗಗಳಿಗೆ ಸಂದರ್ಶಿಸಿ ಅವುಗಳ ಹಿನ್ನಲೆಯನ್ನು ತಿಳಿದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ  ಸಮಾಜದ ಆರೋಗ್ಯ ಜಾಗೃತಿ ಕುರಿತು ಡಾ.  ಡಾ. ಅಮರೇಶ ಪಾಟೀಲರು ಪೋಸ್ಟರ್ ಬಿಡುಗಡೆ...

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ನೇಮಕ*

Image
  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ನೇಮಕ* ಗಂಗಾವತಿ: ಕನಕಗಿರಿ ರಸ್ತೆಯಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು  ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಚನ್ನವೀರನಗೌಡ ಕೋರಿ  ಹಾಗೂ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ  ರಾಜೇಶ್ವರಿ ಗಂ ಡಿ ಎಮ್ ಸುರೇಶ್ ಆನೆಗುಂದಿ ಹಾಗೂ ಕೊಪ್ಪಳ ಜಿಲ್ಲಾ ಮಾಧ್ಯಮ ವಕ್ತಾರರನ್ನಾಗಿ  ಸಂಗಮೇಶ್ ಬಿ ಬಾದವಾಡಗಿ ಚಿಲಕಮುಖಿ  ನೇಮಕಗೊಳಿಸಿ ಪಕ್ಷದ ಕಚೇರಿಯ ಕಾರ್ಯಕ್ರಮದಲ್ಲಿ ನೇಮಕಾತಿಯ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗ್ರಾಮೀಣ ಹಾಗೂ ನಗರ ಘಟಕಗಳ ಅಧ್ಯಕ್ಷರ ಗಳಾದ ಡಿ ಕೆ ದುರ್ಗಪ್ಪ ಆಗೋಲಿ, ವಿರೇಶ್ ಬಲ್ಕುಂದಿ ಹಾಗೂ ಯಮನೂರು ಚೌಡ್ಕಿ, ಮಲ್ಲೆಶಪ್ಪ ಗುಮಗೇರಿ, ವಿರೂಪಾಕ್ಷ ಗೌಡ ಹೇರೂರು, ರಮೇಶ್ ಹೊಸಮಲಿ, ಲಿಂಗನಗೌಡ ಹೇರೂರು, ವೆಂಕಟೇಶ್ ಈಳಿಗೇರ, ಡಿ ಎಮ್ ಸುರೇಶ್ ಇನ್ನೂ ಮುಂತಾದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜೆಗಳೇ ದೊರೆ, ನಾಡಿನ ದೊರೆ ಎನ್ನಬೇಡಿ ನಾ ನಿಮ್ಮ ಸೇವಕ....ಬೊಮ್ಮಾಯಿ

Image
  ವಿಜಯಪುರ: ನಾಡಿನ ದೊರೆ ಎನ್ನಬೇಡಿ, ಅದು ನನಗೆ ತುಂಬ ಕಸಿವಿಸಿ ಉಂಟುಮಾಡುತ್ತದೆ ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆ ಎಂದು ಭಾವಿಸಿರುವಾಗ , ಮತ್ತೆ ನೀವೆಲ್ಲ ಹೀಗೆ ಕರೆದರೆ ಅದು ಸಮಂಜಸವಲ್ಲ. ಪ್ರಜೆಗಳಿಂದ ಚುನಾಯಿತರಾಗಿ ಮುಖ್ಯಮಂತ್ರಿ ಸ್ಥಾನ ಒದಗಿಬಂದರೂ ಸಹಿತ ನಾನು ಪ್ರಜಾ ಸೇವಕ ಎಂದು ನಂಬಿದ್ದೇನೆ ಎಂದರು. ಅವರು ಶನಿವಾರ ಪೆ.೪ರಂದು ವಿಜಯಪುರದ ಕಂದಲ್ ಹನುಮಂತರಾಯ ಸಭಾಭವನದಲ್ಲಿ ೩೭ ನೇ ಕಾರ್ಯ ನಿರತ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮುಂದು ವರೆದು ಮಾತನಾಡುತ್ತಾ, ಪ್ರತಿ ವರ್ಷದಂತೆ  ಈ ವರ್ಷವೂ ಸಮ್ಮೇಳನ ಆಯೋಜಿಸಿದ್ದೀರಿ ಪತ್ರಕರ್ತರು ನಡೆದುಬಂದ ದಾರಿ, ಸಮಸ್ಯೆ, ಪರಿಹಾರಗಳು ಸವಾಲುಗಳು, ಸಮಾಜಕ್ಕೆ ನೀಡುವ ಕೊಡುಗೆ ಕುರಿತು ಚಿಂತನ ಮಂಥನ ನಡೆಯುತ್ತಿದೆ ಈ ಎರಡು ದಿನದ  ಕಾರ್ಯಕ್ರಮ ಯಶಸ್ವಿಯಾಗಲಿಎಂದು ಶುಭಹಾರೈಸಿದರು. ಈ ವೇಳೇ ಸಿದ್ದೇಶ್ವರ ಮಠದ ನೂತನ ಶ್ರೀಗಳು ಸಚಿವರಾದ ಗೋವಿಂದಕಾರಜೋಳ , ಸಿಸಿ ಪಾಟೀಲ, ನಿರಾಣಿ, ಸ್ಥಳಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದತಗಡೂರು , ಜಿಲ್ಲಾದ್ಯಕ್ಷ ಚೂರಿ ಸೇರಿದಂತೆ ಆಗಮಿಸಿದ್ದ ಸರ್ವ ಪತ್ರಕರ್ತರು ಭಾಗವಹಿಸಿದ್ದರು.