ಕೊಪ್ಪಳ ಕೋಟೆಗೆ ಗಂಗಾವತಿ ಚಾರಣ ಬಳಗ :ಕೊಪ್ಪಳ ಚಾರಣ ಬಳಗ ಉದ್ಘಾಟನೆ:ಕೋಟೆ ರಕ್ಷಣೆಗೆ ಮನವಿ
ಕೊಪ್ಪಳ ಕೋಟೆಗೆ ಗಂಗಾವತಿ ಚಾರಣ ಬಳಗ :
ಕಿಷ್ಕಿಂಧಪ್ರಭ ಸುದ್ದಿ ಕೊಪ್ಪಳ: ಭೌಗೋಳಿಕವಾಗಿ ವೈಶಿಷ್ಟ್ಯ ಪೂರ್ಣ ನೆಲೆಗಳಲ್ಲಿರುವ ಚಾರಿತ್ರಿಕ ಸ್ಥಳಗಳಿಗೆ ಚಾರಣದ ಮೂಲಕ ಭೇಟಿ ನೀಡಿ ಮಾಹಿತಿ ಅರಿಯುವ, ಸಂರಕ್ಷಣೆಗೆ ಆಗ್ರಹಿಸುವ ಉದ್ದೇಶ ಹೊಂದಿರುವ ಗಂಗಾವತಿ ಚಾರಣ ಬಳಗ ತನ್ನ ೨೫ನೇ ಚಾರಣದ ಬೆಳ್ಳಿ ನಡೆಯನ್ನು ಈ ಬಾರಿ ದಿನಾಂಕ ೧೦-೨-೨೦೨೩ರಂದು ಕೊಪ್ಪಳದ ಕೋಟೆಗೆ ಹಮ್ಮಿಕೊಂಡಿತ್ತು. ಗಂಗಾವತಿ ಹಾಗೂ ಕೊಪ್ಪಳದ ಚಾರಣ ಬಳಗದ ಸುಮಾರು ೪೦ ಸದಸ್ಯರು ಭಾಗವಹಿಸಿದ್ದರು. ಕೊಪ್ಪಳ ಸದಸ್ಯರಾದ ಡಾ.ಸುಂಕದ ಹಾಗೂ ಡಾ. ಸಿದ್ದಲಿಂಗಪ್ಪ ಕೊಟ್ನೇಕ¯ ಹಾಗೂ ಇತರ ಸದಸ್ಯರು ಚಾರಣ ತಂಡಕ್ಕೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು.

ಉಪಹಾರ ಸ್ವೀಕರೀಸಿದ ತಂಡ ಕೊಪ್ಪಳ ಕೋಟೆಗೆ ಚಾರಣ ಆರಂಭಿಸಿತು. ಕೋಟೆಯ ಪ್ರಧಾನ ದ್ವಾರ ಮಂಟಪದ ಬಳಿ ಮಂಜುನಾಥ ಗುಡ್ಲಾನೂರ ಸ್ವಾಗತಿಸಿದರು. ಡಾ. ಶಿವಕುಮಾರ ಮಾಲೀಪಾಟೀಲರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಾರ್ಗದರ್ಶಕರಾದ ಡಾ. ಶರಣಬಸಪ್ಪ ಕೋಲ್ಕಾರ , ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್. ಡಾ. ಗೀತಾ ಪಾಟೀಲ್ ಕೋಟೆಯ ಸಮಗ್ರ ಇತಿಹಾಸವನ್ನು ತಿಳಿಸಿಕೊಟ್ಟರು. ನಂತರ ಕೋಟೆಯ ವಿವಿಧ ಭಾಗಗಳಿಗೆ ಸಂದರ್ಶಿಸಿ ಅವುಗಳ ಹಿನ್ನಲೆಯನ್ನು ತಿಳಿದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಆರೋಗ್ಯ ಜಾಗೃತಿ ಕುರಿತು ಡಾ. ಡಾ. ಅಮರೇಶ ಪಾಟೀಲರು ಪೋಸ್ಟರ್ ಬಿಡುಗಡೆ ಮಾಡಿದರು. ಡಾ. ಶಿವಕುಮಾರ ಪಾಟೀಲ್ ಎಲ್ಲೆಂದರಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿವೆೆ ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದೆಂದು ಹೇಳಿದರು.
ಕೊಪ್ಪಳ ಚಾರಣ ಬಳಗ ಉದ್ಘಾಟನೆ: ಇದೇ ಸಂದರ್ಭದಲ್ಲಿ ಕೊಪ್ಪಳ ಚಾರಣ ಬಳಗವನ್ನು ಉದ್ಯಮಿ ಸುರೇಶ ಸಿಂಗನಾಳ್, ಟಿ. ಆಂಜನೇಯ, ಡಾ. ಶರಣಬಸವ ಸಂಕನೂರ್ ಉಧ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷರಾಗಿ ಡಾ. ಸುಂಕದ , ಕಾರ್ಯದರ್ಶಿಯಾಗಿ ಡಾ. ಪಾಟೀಲ್, ಮಾರ್ಗದರ್ಶಕರಾಗಿ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್‌ರನ್ನು ನೇಮಿಸಲಾಯಿತು.
ಕೋಟೆ ರಕ್ಷಣೆಗೆ ಮನವಿ: ಚಾರಣ ಬಳಗ ಕೊನೆಗೆ ಅಧ್ಬುತ ಇತಿಹಾಸ ಹೊಂದಿರುವ ಕೋಟೆಯನ್ನು ಚಿತ್ತದುರ್ಗದ ಕೋಟೆಯಂತೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕೆಂದು ಜಿಲ್ಲಾಡಳಿತ ಹಾಗೂ ಸಂಬ0ಧ ಪಟ್ಟ ಇಲಾಖೆಗಳಿಗೆ ಆಗ್ರಹಿಸಿತು. ಮತ್ತು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿತು. ಕೊನೆಯಲ್ಲಿ ಕವಿ ರಮೇಶ ಗಬ್ಬೂರ ಜಾಗೃತಿ ಗೀತೆ ಹಾಡಿ ವಂದನಾರ್ಪಣೆ ಮಂಡಿದರು. ಚಾರಣಕ್ಕೆ ಡಾ.ಶರಣಬಸವ, ಸೋಮಪ್ಪ ಜಂಬಗಿ, ಸೋಮಶೇಖರ್ ಗೌಡ, ರಾಮನಾಥ ಬಂಡಾರ್ಕರ, ಹರನಾಯಕ, ಪ್ರಕಾಶ ಸಿಂಗನಾಳ, ಪ್ರಹ್ಲಾದ ಕುಲಕರ್ಣಿ, ಸಂತೋಷ, ಗುರುಪ್ರಸಾದ್, ಜಮುನಾ, ಲಕ್ಷೀದೇವಿ ಗುಡ್ಲಾನೂರ್, ಮಹಮ್ಮರಫಿ, ಕವಿ ಶರಣಪ್ಪ, ಮನೋಮಿ, ಮಧುರ, ಮಿಲನ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
Comments
Post a Comment