ಪ್ರಜೆಗಳೇ ದೊರೆ, ನಾಡಿನ ದೊರೆ ಎನ್ನಬೇಡಿ ನಾ ನಿಮ್ಮ ಸೇವಕ....ಬೊಮ್ಮಾಯಿ

 


ವಿಜಯಪುರ: ನಾಡಿನ ದೊರೆ ಎನ್ನಬೇಡಿ, ಅದು ನನಗೆ ತುಂಬ ಕಸಿವಿಸಿ ಉಂಟುಮಾಡುತ್ತದೆ ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆ ಎಂದು ಭಾವಿಸಿರುವಾಗ , ಮತ್ತೆ ನೀವೆಲ್ಲ ಹೀಗೆ ಕರೆದರೆ ಅದು ಸಮಂಜಸವಲ್ಲ. ಪ್ರಜೆಗಳಿಂದ ಚುನಾಯಿತರಾಗಿ ಮುಖ್ಯಮಂತ್ರಿ ಸ್ಥಾನ ಒದಗಿಬಂದರೂ ಸಹಿತ ನಾನು ಪ್ರಜಾ ಸೇವಕ ಎಂದು ನಂಬಿದ್ದೇನೆ ಎಂದರು.

ಅವರು ಶನಿವಾರ ಪೆ.೪ರಂದು ವಿಜಯಪುರದ ಕಂದಲ್ ಹನುಮಂತರಾಯ ಸಭಾಭವನದಲ್ಲಿ ೩೭ ನೇ ಕಾರ್ಯ ನಿರತ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮುಂದು ವರೆದು ಮಾತನಾಡುತ್ತಾ, ಪ್ರತಿ ವರ್ಷದಂತೆ  ಈ ವರ್ಷವೂ ಸಮ್ಮೇಳನ ಆಯೋಜಿಸಿದ್ದೀರಿ ಪತ್ರಕರ್ತರು ನಡೆದುಬಂದ ದಾರಿ, ಸಮಸ್ಯೆ, ಪರಿಹಾರಗಳು ಸವಾಲುಗಳು, ಸಮಾಜಕ್ಕೆ ನೀಡುವ ಕೊಡುಗೆ ಕುರಿತು ಚಿಂತನ ಮಂಥನ ನಡೆಯುತ್ತಿದೆ ಈ ಎರಡು ದಿನದ  ಕಾರ್ಯಕ್ರಮ ಯಶಸ್ವಿಯಾಗಲಿಎಂದು ಶುಭಹಾರೈಸಿದರು. ಈ ವೇಳೇ ಸಿದ್ದೇಶ್ವರ ಮಠದ ನೂತನ ಶ್ರೀಗಳು ಸಚಿವರಾದ ಗೋವಿಂದಕಾರಜೋಳ , ಸಿಸಿ ಪಾಟೀಲ, ನಿರಾಣಿ, ಸ್ಥಳಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದತಗಡೂರು , ಜಿಲ್ಲಾದ್ಯಕ್ಷ ಚೂರಿ ಸೇರಿದಂತೆ ಆಗಮಿಸಿದ್ದ ಸರ್ವ ಪತ್ರಕರ್ತರು ಭಾಗವಹಿಸಿದ್ದರು.

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*