Posts

Showing posts from December, 2023

ಅಂಜನಾದ್ರಿ ರಕ್ತ ಭಂಡಾರದ ವ್ಯವಸ್ಥಾಪಕ ಕೃಷ್ಣ ನಾಯ್ಕ ನಿಧನ

Image
  ಅಂಜನಾದ್ರಿ ರಕ್ತ ಭಂಡಾರದ ವ್ಯವಸ್ಥಾಪಕ ಕೃಷ್ಣ ನಾಯ್ಕ ನಿಧನ ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ ,...................... ಬಹಳಷ್ಟು ಜನರಿಗೆ ರಕ್ತದ ಕೊರತೆಯಿಂದ  ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವರಿಗೆ ರಕ್ತದ ವ್ಯವಸ್ಥೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ ಕೃಷ್ಣ ನಾಯ್ಕ ದುರಾದೃಷ್ಟ ವಶಾತ್  ಡಿ.೩೦ರಂದು ಶನಿವಾರ ನಿಧನರಾಗಿದ್ದಾರೆ. ಡಿ೩೧ರಂದು  ಚನ್ನಗಿರಿ ತಾಲ್ಲೂಕು  ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ ಮೃತರಿಗೆ ಪತ್ನಿ ಸೇರಿದಂತೆ ಗಂಡುಮಗ ಹಾಗೂ ಅಪಾರ ಬಂದು ಬಳಗ ಮತ್ತು ಬೃಹತ್ ಸ್ನೇಹ ಬಳಗವನ್ನು ಅಗಲಿದ್ದಾರೆ.

ವಿಕಲಚೇತನರಿಗೆ ಸಿಹಿ ಊಟ ಬಡಿಸಿ ವಿಕಲಚೇತನರ ದಿನದ ಶುಭಾಶಯ ಕೋರಿದ ವೈದ್ಯ ಡಾ.ಅಮರ

Image
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ ...........................................  ಡಿಸೆಂಬರ್ 3 ರಂದು ವಿಕಲ ಚೇತನರ ದಿನದ ಅಂಗವಾಗಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಡಾ. ಅಮರೇಶ್ ಪಾಟೀಲ್ ಭಾಗವಹಿಸಿ ವಿಕಲ ಚೇತನ ಮಕ್ಕಳಿಗೆ ಶುಭಾಶಯಗಳನ್ನ ತಿಳಿಸಿ ರುಚಿಕರ ತಿನಿಸುಗಳೊಂದಿಗೆ ಊಟ ಬಡಿಸಿದರು. ಮುಂದುವರೆದು  ಮಾತನಾಡುತ್ತಾ, ಗಂಗಾವತಿಯ ಈ ವಿಶೇಷ ಚೇತನರ ಶಾಲೆಯು ಪ್ರಾರಂಭಗೊಂಡು ಸುಮಾರು 20 ವರ್ಷಗಳಾಗಿದೆ ಸಂಸ್ಥೆಯ ವತಿಯಿಂದ ಉಚಿತವಾಗಿ ವಿದ್ಯೆಯ ಜೊತೆಗೆ ಅವರ ಪ್ರತಿಭೆಯನ್ನ ಗುರುತಿಸಿ, ಪ್ರತಿ ದಿನವು ಊಟ ನೀಡಿ ಆರೈಕೆ ಮಾಡುವಂತ ಕೆಲಸವಾಗುತ್ತಿದೆ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲ್ಯಾಘನೀಯ ಎಂದರು.

ಸರೋಜಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಅನೀಮಿಯ ಜಾಗೃತಿ*

Image
 ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ ಹೆಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ *ಹದಿಹರೆಯದವರ ಸಮಸ್ಯೆಗಳು ಮತ್ತು ಅನೀಮಿಯ ಜಾಗೃತಿ*  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಗಂಗಾವತಿ ಸರಕಾರಿ ಆಸ್ಪತ್ರೆಯ  ಡಾ. ಶ್ರೀದೇವಿ ನಾಗರಾಜ್ ಇವರು ರಕ್ತ ಹೀನತೆ ಬಗ್ಗೆ ಮಾತನಾಡಿದರು. ಸರಿಯಾದ ಆಹಾರ ಪದ್ಧತಿ ಇರದೆ ಇರುವುದು ಮತ್ತು ಜಂಕ್ ಫುಡ್ ಸೇವನೆ ಅತಿಯಾದರೆ ರಕ್ತ ಹೀನತೆ ಉಂಟಾಗುತ್ತದೆ ಹಾಗೆ ಕಬ್ಬಿಣ ಅಂಶದ ಕೊರತೆ ಹಾಗೂ ವಿಟಮಿನ್ B12 ನ ಕೊರತೆಯಿಂದ ರಕ್ತ ಹೀನತೆ ಉಂಟಾಗುತ್ತದೆ, ಇದನ್ನ ತಡೆಗಟ್ಟಲು ಹಣ್ಣುಗಳು ಹಾಗೂ ಊಟದಲ್ಲಿ ತರಕಾರಿಗಳನ್ನು ಅತಿಯಾಗಿ ಸೇವನೆ ಮಾಡಬೇಕು ಎಂದ ತಿಳಿಸಿದರು.      ಅದೇ ರೀತಿಯಾಗಿ ಡಾ. ಕೀರ್ತಿ ಅವರು ಹದಿ ಹರೆಯದವರ ಸಮಸ್ಯೆಗಳ ಬಗ್ಗೆ ಮಾತಾನಾಡಿದರು. ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಬೇಕು ಹೆಣ್ಣುಮಕ್ಕಳು ಋತಚಕ್ರದ ಸಮಯದಲ್ಲಿ ಯಾವ ರೀತಿ ಸುರಕ್ಷತೆ ಇಂದ ಇರಬೇಕು ಹಾಗೂ ಪ್ರತಿ ತಿಂಗಳು ಋತುಚಕ್ರ ಆಗಲೇಬೇಕು ಆಗದೆ ಇದ್ದಲ್ಲಿ ಸಾಕಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಸರಿಯಾದ ಆಹಾರ ಪದ್ಧತಿ ಹಾಗೂ ಪ್ರತಿ ದಿನ ಯೋಗ ಮತ್ತು ವ್ಯಾಯಾಮ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಹಾಗೆಯೇ ಬಿಳಿ ಮುಟ್ಟಿನ ಸಮಸ್ಯೆ ಇದ್ದಲ್ಲಿ ಯಾರು ನಿರ್ಲಕ್ಷ್ಯ ಮಾಡಬಾರದು ಮಾಡಿದ್ದಲ್ಲಿ ಗರ್ಭಾಶಯದ ಕ್...

ಪಾರಂಪರಿಕ ತಾಣಗಳ ರಕ್ಷಣೆ, ನಮ್ಮ ಹೊಣೆ ತಾಪಂ ಇಓ ಲಕ್ಷ್ಮೀದೇವಿ ಹೇಳಿಕೆ

Image
 ಹೇಮಗುಡ್ಡ ಗ್ರಾಮದ ಉಗ್ರ ನರಸಿಂಹ ಸ್ಮಾರಕದ ಬಳಿ ಶ್ರಮದಾನ  ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ:  ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆ, ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯಗಳು ಹಾಗೂ ಪರಂಪರಾ ಇಲಾಖೆ ಮೈಸೂರು, ಜಿಲ್ಲಾಡಳಿತ ಕೊಪ್ಪಳ, ತಾಲೂಕು ಆಡಳಿತ, ತಾ.ಪಂ. ಗಂಗಾವತಿ ಹಾಗೂ ಗ್ರಾಪಂ ಚಿಕ್ಕಬೆಣಕಲ್ ಸಹಯೋಗದಲ್ಲಿ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನ ಅಂಗವಾಗಿ ಗ್ರಾಮದ ದುರ್ಗಾದೇವಿ ದೇವಸ್ಥಾನ ಹತ್ತಿರದ ಐತಿಹಾಸಿಕ ಹಿನ್ನೆಲೆಯುಳ್ಳ ಉಗ್ರನರಸಿಂಹ ಸ್ಮಾರಕದಲ್ಲಿ ಬುಧವಾರ ಶ್ರಮದಾನ ಮಾಡಲಾಯಿತು. ಮುಳ್ಳುಕಂಟಿ, ಕಸದಿಂದ ಕೂಡಿದ್ದ ಉಗ್ರ ನರಸಿಂಹ ಸ್ಮಾರಕ ಬಳಿ ಬೆಳಗ್ಗೆ 8 ಗಂಟೆಯಿಂದ 12 ಗಂಟೆವರೆಗೆ 80 ಕ್ಕೂ ಹೆಚ್ಚು ಜನರಿಂದ ಸ್ವಚ್ಛತಾ ಕಾರ್ಯ ನಡೆಯಿತು. ಸ್ಮಾರಕ, ಕೋಟೆ, ದೇವಾಲಯ ಮೇಲೆ ಬೆಳೆದಿದ್ದ ಗಿಡ, ಕಸ  ವಿಲೇವಾರಿ ಮಾಡಲಾಯಿತು. ಜೊತೆಗೆ ದೇವಾಲಯ ಗೋಡೆಗಳಲ್ಲಿ ಆವರಿಸಿದ್ದ ಧೂಳು ಸ್ವಚ್ಛಮಾಡಲಾಯಿತು  ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಲಕ್ಷ್ಮೀದೇವಿ ಅವರು ಮಾತನಾಡಿ, ಐತಿಹಾಸಿಕ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರೂ ದೇಗುಲಗಳ ರಕ್ಷಣೆಗೆ ಮುಂದಾಗಬೇಕು. ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಪಾರಂಪರಿಕ ತಾಣಗಳ ರಕ್ಷಣೆಗೆ ಯುವ ಪೀಳಿಗೆ ಬದ್ಧರಾಗಬೇಕು. ಜೊತೆಗೆ ವಿದ್ಯಾರ್ಥಿಗಳು ಐತಿಹಾಸಿಕ ತಾಣಗಳ ಬಗ್ಗೆ ತಿಳಿದುಕೊಳ್ಳಬೇಕ...