ಸರೋಜಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಅನೀಮಿಯ ಜಾಗೃತಿ*



 ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ

ಹೆಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ *ಹದಿಹರೆಯದವರ ಸಮಸ್ಯೆಗಳು ಮತ್ತು ಅನೀಮಿಯ ಜಾಗೃತಿ*  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಗಂಗಾವತಿ ಸರಕಾರಿ ಆಸ್ಪತ್ರೆಯ  ಡಾ. ಶ್ರೀದೇವಿ ನಾಗರಾಜ್ ಇವರು ರಕ್ತ ಹೀನತೆ ಬಗ್ಗೆ ಮಾತನಾಡಿದರು. ಸರಿಯಾದ ಆಹಾರ ಪದ್ಧತಿ ಇರದೆ ಇರುವುದು ಮತ್ತು ಜಂಕ್ ಫುಡ್ ಸೇವನೆ ಅತಿಯಾದರೆ ರಕ್ತ ಹೀನತೆ ಉಂಟಾಗುತ್ತದೆ ಹಾಗೆ ಕಬ್ಬಿಣ ಅಂಶದ ಕೊರತೆ ಹಾಗೂ ವಿಟಮಿನ್ B12 ನ ಕೊರತೆಯಿಂದ ರಕ್ತ ಹೀನತೆ ಉಂಟಾಗುತ್ತದೆ, ಇದನ್ನ ತಡೆಗಟ್ಟಲು ಹಣ್ಣುಗಳು ಹಾಗೂ ಊಟದಲ್ಲಿ ತರಕಾರಿಗಳನ್ನು ಅತಿಯಾಗಿ ಸೇವನೆ ಮಾಡಬೇಕು ಎಂದ ತಿಳಿಸಿದರು.

     ಅದೇ ರೀತಿಯಾಗಿ ಡಾ. ಕೀರ್ತಿ ಅವರು ಹದಿ ಹರೆಯದವರ ಸಮಸ್ಯೆಗಳ ಬಗ್ಗೆ ಮಾತಾನಾಡಿದರು. ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಬೇಕು ಹೆಣ್ಣುಮಕ್ಕಳು ಋತಚಕ್ರದ ಸಮಯದಲ್ಲಿ ಯಾವ ರೀತಿ ಸುರಕ್ಷತೆ ಇಂದ ಇರಬೇಕು ಹಾಗೂ ಪ್ರತಿ ತಿಂಗಳು ಋತುಚಕ್ರ ಆಗಲೇಬೇಕು ಆಗದೆ ಇದ್ದಲ್ಲಿ ಸಾಕಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಸರಿಯಾದ ಆಹಾರ ಪದ್ಧತಿ ಹಾಗೂ ಪ್ರತಿ ದಿನ ಯೋಗ ಮತ್ತು ವ್ಯಾಯಾಮ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಹಾಗೆಯೇ ಬಿಳಿ ಮುಟ್ಟಿನ ಸಮಸ್ಯೆ ಇದ್ದಲ್ಲಿ ಯಾರು ನಿರ್ಲಕ್ಷ್ಯ ಮಾಡಬಾರದು ಮಾಡಿದ್ದಲ್ಲಿ ಗರ್ಭಾಶಯದ ಕ್ಯಾನ್ಸರ್ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. 

ಹಾಗೆ ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಅಕ್ಬರ್ ಅಲಿ ಆಪ್ತ ಸಮಾಲೋಚಕರು ಇವರು ಈ ಕಾರ್ಯಕ್ರಮದ ಕುರಿತು  ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನ ನೀಡಿದರು.

      ಕಾಲೇಜಿನ ಪ್ರಾಚಾರ್ಯರಾದ  ಡಾ. ರವಿ ಎನ್. ಚವ್ಹಾಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಹನಮಂತ ವಡ್ಡರ್ ಉಪನ್ಯಾಸಕರಾದ ಕೆ.ಎಚ್. ಕೊಳ್ಳನ್ನವರ್, ಕುಮಾರಿ ಶ್ವೇತಾ ರಾಮತ್ನಾಳ, ವೆಂಕಟೇಶ್ ಚವ್ಹಾಣ, ಯಮನೂರಪ್ಪ ಕಂಬಳಿ  ಉಪಸ್ಥಿತರಿದ್ದರು.





Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*