ಗಂಗಾನದಿ ಮಾದರಿಯಲ್ಲಿ ತುಂಗಭದ್ರಾ ನದಿ ಸ್ವಚ್ಛವಾಗಲಿ: ಲಲಿತಾರಾಣಿ

ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಅಂಜನಾದ್ರಿಯಲ್ಲಿ ಚಾಲನೆ. ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ: ತುಂಗಭದ್ರಾ ನದಿಯ ಮಲೀನತೆಯಿಂದಾಗಿ ನದಿ ನೀರು ಕುಡಿಯಲು ಮಾತ್ರವಲ್ಲ, ಬಳಸಲು ಕೂಡ ಯೋಗ್ಯವಿಲ್ಲದಂತಾಗಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿನ ಭವಿಷ್ಯವಿಲ್ಲದಂತಾಗುತ್ತದೆ. ಗಂಗಾನದಿ ಮಾದರಿಯಲ್ಲಿ ತುಂಗಭದ್ರಾ ನದಿ ಸ್ವಚ್ಛವಾಗಲಿ ಎಂದು ರಾಜಮಾತೆ ಲಲಿತಾರಾಣಿಯವರು ಅಭಿಪ್ರಾಯಪಟ್ಟರು. ಅವರು ಡಿ.೩೧ರಂದು ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ಎರಡು-ಮೂರು ದಶಕಗಳಿಂದಲೂ ತುಂಗಭದ್ರಾ ನದಿಯ ನೀರನ್ನು ನಾವೆಲ್ಲರೂ ಕುಡಿಯುತ್ತಿದ್ದೇವೆ. ಆದರೆ ನದಿಯ ನೀರು ಮಲೀನತೆಯಾಗುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶುದ್ದ ನೀರು, ಸ್ವಚ್ಛ ಗಾಳಿ ಪರಿಸರವನ್ನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ ಶೃಂಗೇರಿಯಿAದ ಕಿಷ್ಕಿಂದೆವರೆಗೂ ಪಾದಯಾತ್ರೆ ಬಂದಿರುವುದು ಅತ್ಯಂತ ಸಾರ್ಥಕ ಕಾರ್ಯವಾಗಿದೆ. ಪಾದಯಾತ್ರೆಯ ಸಂಘಟಕರಿಗೆ ನಮ್ಮೂರಿನ ಎಲ್ಲರ ಪರವಾಗಿ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಪಾದಯಾತ್ರೆ ತಂಡದೊAದಿಗೆ ಹುಲಿಗಿಯಿಂದ ಗಂಗಾವತಿಯವರೆಗೂ ಎಲ್ಲ ನಾಗರಿಕರು ಸಂಘ-ಸAಸ್ಥೆಗಳು ಎಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಿ ಪಾದಯಾತ್ರೆಯನ್ನು ...