ಶ್ರೀಗುರು ಪುಟ್ಟರಾಜ ಗವಾಯಿಗಳ ಶಾಲೆಯಲ್ಲಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ: ಹಿರಿಯ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳ:

 ಶ್ರೀಗುರು ಪುಟ್ಟರಾಜ ಗವಾಯಿಗಳ ಶಾಲೆಯಲ್ಲಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ:  ಹಿರಿಯ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳ:

ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ

........................

ಸಂಗೀತದಿಂದ ಸಾಕ್ಷಾತ್ ಭಗವಂತನನ್ನು ಕಾಣಬಹುದಂತೆ. ಸಂಗೀತವೇ  ದೇವರೆಂದು ನಂಬಿ , ಕಣ್ಣಿಲ್ಲದ ಮತ್ತು ಸಂಗೀತ ಆರಾಧಕರ ಬದುಕಿಗೆ ಬೆಳಕಾದ ಶ್ರೀ ಗುರುಪುಟ್ಟರಾಜ ಗವಾಯಿಗಳ ಹೆಸರನ್ನು ಹೊಂದಿರುವ ಶಾಲೆಯಲ್ಲಿ   ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಣವಿದೆ.  ಸಂಸ್ಥೆ ಹಣಕ್ಕಾಗಿ ಸೇವೆ ನೀಡುತ್ತಿಲ್ಲ. ಮಕ್ಕಳ ಬದುಕು ಉಜ್ವಲವಾಗಲಿ ಎಂದು ಸರ್ವ ಆಡಳಿತ ಮಂಡಳಿ ಸೇವೆ ನೀಡುತ್ತಿದೆ. ಮತ್ತು ಮಕ್ಕಳನ್ನು ಶಾಲೆ ಬಿಡಿಸದೆ ಮಾರ್ಗದರ್ಶನ ಮಾಡಿ ಸಂಸ್ಕಾರದೊಂದಿಗೆ ಶಿಕ್ಷಣಕೊಡಿಸಿ . ವಿದ್ಯಾರ್ಥಿಗಳು ಕೂಡ ನೀವು ಕಲಿತ ಈ ಶಾಲೆಯನ್ನು  ಮರೆಯಬಾರದು . ಮುಸ್ಲೀಮ್ ಬಾಂಧವರು  ಮತ್ತು ಎಲ್ಲ ವರ್ಗದ ಪಾಲಕರು ಮಕ್ಕಳನ್ನು ಶಾಲೆಯಿಂದ ಬೇಗನೆ  ವಿಮುಕ್ತಿಗೊಳಿಸದೇ ಗ್ಯಾರೇಜ್ ಅಥವಾ ಕೂಲಿಕೆಲಸಗಳಿಗೆ ಹಚ್ಚಿ ಅವರ ಭವಿಷ್ಯ ಕುಂಟಿತ ಮಾಡದೇ ಉನ್ನತ ಶಿಕ್ಷಣ ಪಡೆಯಲು ಪಾಲಕರ ಸಹಕಾರ ಅವಶ್ಯ   ಶಾಲೆಯ ಮುಖ್ಯಸ್ಥರಾದ ಪದ್ಮಾರೇಖಾರವರ ಕಾರ್ಯಕ್ಷಮತೆಯಿಂದ  ಈ ಶಾಲೆ‌ ಹೆಸರು ಮಾಡಿದೆ ಮತ್ತಷ್ಟು  ಸೇವೆ ನೀಡಲಿದೆ . ಪಾಲಕರ ಸಹಕಾರವೂ ಅಷ್ಟೇ ಮುಖ್ಯ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ದಿ.21ರಂದು ಶನಿವಾರ ಗಂಗಾವತಿ  ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿನ  ಶ್ರೀ ಗುರುಪುಟ್ಟರಾಜ ಶಾಲೆಯ ವಾರ್ಷಿಕೋತ್ಸವದಲ್ಲಿ  ಹಿರಿಯ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳರವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

        ಉದ್ಘಾಟಕರಾಗಿ‌ ಮಾತನಾಡಿದ ಡಾ. ಶಿವಕುಮಾರ ಮಾಲಿಪಾಟೀಲ ವಿದ್ಯಾರ್ಥಿ ದೆಸೆಯಲ್ಲಿಯೇ ಭವಿಷ್ಯದ ಗುರಿ ನಿಗದಿಯಾಗಲಿ , ಕಷ್ಟು ಪಟ್ಟು ಓದುವದಕ್ಕಿಂತ ಇಷ್ಟಪಟ್ಟು ಆಟದೊಂದಿಗೆ ಪಾಠ ವಾಗಲಿ ಮತ್ತು  ಈ ಶಾಲೆಯ  ಜೊತೆ ನಾವೆಲ್ಲ ಇದ್ದೇವೆ ಎಂದರು.

ಮುಖ್ಯ ಅತಿಥಿಗಳಾದ  ನ್ಯಾಯವಾದಿ ರಾಜೇಶ್ವರಿಯವರು ಮಾತನಾಡುತ್ತಾ ಪದ್ಮರೇಖಾರಂತಹ ಮಹಿಳೆ ಸಂಸ್ಥೆ ನಡೆಸಿಕೊಂಡು ಹೋಗುತ್ತಿದ್ದಾರೆ ಅವರ ಶ್ರಮ ಮೆಚ್ಚುವಂತಹದ್ದು. ಅವರಿಗೆ ಮುಂದಿನ ದಿನಮಾನಗಳಲ್ಲಿ ಒಳ್ಳೆಯದಾಗಲಿದೆ‌ ಎಂದು ಶುಭಹಾರೈಸಿದರು.

         ಅಥಿತಿಯಾಗಿ‌ ಮಾತನಾಡಿದ ಪರಿಸರ ಪ್ರೇಮಿ ಮಂಜುನಾಥ ಗುಡ್ಲಾನೂರ ಶಿಕ್ಷಣ ಸಂಸ್ಥೆಗಳು ಕಲ್ಪವೃಕ್ಷವಿದ್ದಂತೆ ಮಕ್ಕಳ  ಭವಿಷ್ಯದ ಕನಸುಗಳನ್ನೆಲ್ಲ ಈಡೇರಿಸಲಿವೆ. ದೊಡ್ಡ ಕನಸುಗಳೊಂದಿಗೆ ನಾವೂ ಸೇರಿದಂತೆ ಸಮಾಜಕ್ಕೆ ಕೊಡುಗೆ ನೀಡುವಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.  ಇಲ್ಲಿನ ಶಿಕ್ಷಕ, ಶಿಕ್ಷಕಿಯರ ವೃಂದ ಚನ್ನಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಈ ವೇಳೆ  ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೇರವೇರಿಸುವಲ್ಲಿ ಶ್ರಮವಹಿಸಿದ ಶಾಲೆಯ ಅಧ್ಯಕ್ಷೆ ಪದ್ಮರೇಖಾ ಮತ್ತು ಅತಿಥಿಯಾದ ವಿನೋದ್ ಕುಮಾರ, ಶಾಲೆಯ ಶಿಕ್ಷಕ, ಶಿಕ್ಷಕಿವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.




Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*