ನಿರ್ಮಲ ತುಂಗಭದ್ರ ಅಭಿಯಾನದ ಜಲಜಾಗೃತಿ ಗಂಗಾವತಿಯಲ್ಲಿ ಪಾದಯಾತ್ರೆ ಮತ್ತು ಸಮಾರೋಪ 2025ಜನೆವರಿ-೦೮ ಕ್ಕೆ ಮುಂದೂಡಿಕೆ
ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್‌ರವರ ನಿಧನದ ಹಿನ್ನೆಲೆ ಡಿಸೆಂಬರ್-೩೦ ರ ಹಿನ್ನೆಲೆ ನಿರ್ಮಲ ತುಂಗಭದ್ರಾ ಅಭಿಯಾನದ ಜಲಜಾಗೃತಿ ಮತ್ತು ಜನಜಾಗೃತಿ ಪಾದಯಾತ್ರೆ ಮತ್ತು ಸಮಾರೋಪ ಜನೇವರಿ-೦೮ ಕ್ಕೆ ಮುಂದೂಡಿಕೆ
ಗAಗಾವತಿ: ನಿರ್ಮಲ ತುಂಗಭದ್ರಾ ಅಭಿಯಾನದ ಜಲಜಾಗೃತಿ ಮತ್ತು ಜನಜಾಗೃತಿ ಪಾದಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮವು ಡಿಸೆಂಬರ್-೩೦ ಕ್ಕೆ ನಿಗದಿಯಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್‌ರವರ ನಿಧನದ ನಿಮಿತ್ಯ ಸದರಿ ಕಾರ್ಯಕ್ರಮವನ್ನು ಮುಂದಿನ ತಿಂಗಳು ಅಂದರೆ ಜನೇವರಿ-೦೮ಕ್ಕೆ ಮುಂದೂಡಲಾಗಿದೆ ಎಂದು ಅಭಿಯಾನದ ರಾಷ್ಟಿçÃಯ ಸಂಚಾಲಕರಾದ ಬಸವರಾಜ ಪಾಟೀಲ್ ವೀರಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನೇವರಿ-೦೭ ರಂದು ಅಭಿಯಾನದ ಪಾದಯಾತ್ರೆಯು ಕೊಪ್ಪಳ ಜಿಲ್ಲೆ ಪ್ರವೇಶಿಸಲಿದ್ದು, ಜನೇವರಿ-೦೮ ರಂದು ಗಂಗಾವತಿ ನಗರದಲ್ಲಿ ಜಲಜಾಗೃತಿ, ಜನಜಾಗೃತಿ ಹಾಗೂ ಸಮಾರೋಪ ಕಾರ್ಯಕ್ರಮ ಜರುಗಲಿದೆ.
ಈ ಅಭಿಯಾನದ ಕುರಿತು ಮಹತ್ವದ ಪೂರ್ವಭಾವಿ ಸಭೆಯನ್ನು ಡಿಸೆಂಬರ್-೨೯ ರವಿವಾರ ಸಾಯಂಕಾಲ ೪:೦೦ ಗಂಟೆಗೆ ಗಂಗಾವತಿ ನಗರದ ಐ.ಎಂ.ಎ ಭವನದಲ್ಲಿ ಕರೆಯಲಾಗಿದೆ. ಈ ಸಭೆಗೆ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ಸಮಾಜಗಳ ಹಿರಿಯ ಮುಖಂಡರು, ರೈತ ಮುಖಂಡರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ಮಹಿಳಾ ಪ್ರತಿನಿಧಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
Comments
Post a Comment