ಗಂಗಾನದಿ ಮಾದರಿಯಲ್ಲಿ ತುಂಗಭದ್ರಾ ನದಿ ಸ್ವಚ್ಛವಾಗಲಿ: ಲಲಿತಾರಾಣಿ

ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಅಂಜನಾದ್ರಿಯಲ್ಲಿ ಚಾಲನೆ.



ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ: ತುಂಗಭದ್ರಾ ನದಿಯ ಮಲೀನತೆಯಿಂದಾಗಿ ನದಿ ನೀರು ಕುಡಿಯಲು ಮಾತ್ರವಲ್ಲ, ಬಳಸಲು ಕೂಡ ಯೋಗ್ಯವಿಲ್ಲದಂತಾಗಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿನ ಭವಿಷ್ಯವಿಲ್ಲದಂತಾಗುತ್ತದೆ.  ಗಂಗಾನದಿ ಮಾದರಿಯಲ್ಲಿ ತುಂಗಭದ್ರಾ ನದಿ ಸ್ವಚ್ಛವಾಗಲಿ ಎಂದು ರಾಜಮಾತೆ ಲಲಿತಾರಾಣಿಯವರು ಅಭಿಪ್ರಾಯಪಟ್ಟರು.

ಅವರು ಡಿ.೩೧ರಂದು ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ಎರಡು-ಮೂರು ದಶಕಗಳಿಂದಲೂ ತುಂಗಭದ್ರಾ ನದಿಯ ನೀರನ್ನು ನಾವೆಲ್ಲರೂ ಕುಡಿಯುತ್ತಿದ್ದೇವೆ. ಆದರೆ ನದಿಯ ನೀರು ಮಲೀನತೆಯಾಗುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶುದ್ದ ನೀರು, ಸ್ವಚ್ಛ ಗಾಳಿ ಪರಿಸರವನ್ನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ ಶೃಂಗೇರಿಯಿAದ ಕಿಷ್ಕಿಂದೆವರೆಗೂ ಪಾದಯಾತ್ರೆ ಬಂದಿರುವುದು ಅತ್ಯಂತ ಸಾರ್ಥಕ ಕಾರ್ಯವಾಗಿದೆ. ಪಾದಯಾತ್ರೆಯ ಸಂಘಟಕರಿಗೆ ನಮ್ಮೂರಿನ ಎಲ್ಲರ ಪರವಾಗಿ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಪಾದಯಾತ್ರೆ ತಂಡದೊAದಿಗೆ ಹುಲಿಗಿಯಿಂದ ಗಂಗಾವತಿಯವರೆಗೂ ಎಲ್ಲ ನಾಗರಿಕರು ಸಂಘ-ಸAಸ್ಥೆಗಳು ಎಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು. ಜನವರಿ-೦೭ ರಂದು ಸಂಜೆ ಆನೆಗುಂದಿ ಗ್ರಾಮದಲ್ಲಿ ಜರುಗುವ ಪಾದಯಾತ್ರೆ ಸಂಪನ್ನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ವೇಳೆ ನಿರ್ಮಲ ತುಂಗಭದ್ರಾ ಅಭಿಯಾನದ ಶಿವಮೊಗ್ಗದ ಸಂಚಾಲಕರಾದ ಬಾಲಕೃಷ್ಣನಾಯ್ಡು ರವರು ಮಾತನಾಡಿ, ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆಯ ಸಮಸ್ತ ನಾಯಕರುಗಳು, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ಸಂಘಟಕರು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವಲ್ಲಿ ನೆರವು ನೀಡಿದ್ದೀರಿ ಮತ್ತು ಇಂದು ಪ್ರಚಾರ ರಥಕ್ಕೆ ಅತ್ಯಂತ ಭಕ್ತಿಪೂರ್ವಕ ಚಾಲನೆಯನ್ನು ನೀಡಿದ್ದೀರಿ. ನಿರ್ಮಲ ತುಂಗಭದ್ರಾ ಅಭಿಯಾನ ಯಶಸ್ವಿಯಾಗಲು ನಮಗೆ ಸಹಕಾರ ನೀಡುತ್ತಿರುವ ಸರ್ವರಿಗೂ ನಿರ್ಮಲ ತುಂಗಭದ್ರಾ ಅಭಿಯಾನ ತಂಡದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸಿಂಗನಾಳ ವಿರೂಪಾಕ್ಷಪ್ಪನವರು ಮಾತನಾಡಿ, ಗಂಗಾಸ್ನಾನ ತುಂಗಾ ಪಾನ ಎನ್ನುವ ನಾನ್ನುಡಿಯಂತೆ ನಮ್ಮ ಮುಂದಿನ ಪೀಳಿಗೆಗೆ ಶುಧ್ಧ ನೀರನ್ನು ಬಿಟ್ಟುಹೋಗುವುದು ಸರ್ವರ ಕರ್ತವ್ಯವಾಗಿದೆ. ಪ್ರತಿಯೊಬ್ಬ ನಾಗರಿಕರೂ ಈ ನಿಟ್ಟಿನಲ್ಲಿ ಜಾಗೃತರಾಗಿ ಜ.೮ನೇ ತಾರೀಖಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ತಾಯಿ ತುಂಗಭದ್ರೆಯ ಒಡಲು ಮಲೀನವಾಗಿದೆ. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸೋಣ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕೋಣ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು. 



ಈ ವೇಳೆ ದಂತ ವೈದ್ಯ ಡಾ.ಶಿವಕುಮಾರ ಮಾಲಿಪಾಟೀಲ ಮಾತನಾಡುತ್ತಾ ಈ ಆಂದೋಲನ ಜನಾಂದೋಲನವಾಗಬೇಕು ಬೆರಳೆಣಿಕೆಯ ಜನರಿಂದ ಇಂತಹ ಬೃಹತ್ ಕೆಲಸಗಳಾಗೋದಿಲ್ಲ ಹಳ್ಳಿ ಊರು, ನಗರ, ತಂಡೋಪತ0ಡಗಳು ಕಾರ್ಯ ನಿರ್ವಹಿಸಿದರೆ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ  ಎಂದರು.

ಸ0ಚಾಲಕ ಸಮಿತಿಯ ಸದಸ್ಯ ರಾಘವೇಂದ್ರ ತೂನ ಮಾತನಾಡಿ, ಜನವರಿ ೭ನೇ ತಾರೀಕು ಹುಲಿಗಿ ಗ್ರಾಮ ಮಾರ್ಗವಾಗಿ ಪಾದಯಾತ್ರೆ ತಂಡವು ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸಲಿದ್ದು, ಹುಲಿಗೆಮ್ಮ ದೇವಸ್ಥಾನದಿಂದ ಕೊಪ್ಪಳ ಜಿಲ್ಲೆಯ ಪಾದಯಾತ್ರೆಯು ಚಾಲನೆಗೊಂಡು ಶಿವಪುರ, ಬಂಡಿಹರ್ಲಾಪುರ, ಸಣಾಪುರ, ಹನುಮನಹಳ್ಳಿ ಮಾರ್ಗವಾಗಿ ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಪಾದಯಾತ್ರೆಯು ಕಿಷ್ಕಿಂದೆ ತಲುಪಲಿದೆ. ಸಂಜೆ ೩:೩೦ ರಿಂದ ಆನೆಗುಂದಿ ಗ್ರಾಮದಲ್ಲಿ ಪಾದಯಾತ್ರೆ ಸಂಪನ್ನತ ಕಾರ್ಯಕ್ರಮ ಜರುಗಲಿದೆ. ಜನವರಿ-೮ ರಂದು ಬೆಳಗ್ಗೆ ೯ ಗಂಟೆಗೆ ಗಂಗಾವತಿಯ ಸಿಬಿಎಸ್ ವೃತ್ತದಿಂದ ಬೃಹತ್ ಜಲಜಾಗೃತಿ ಜಾಥಾ ಚಾಲನೆಗೊಂಡು, ಗಾಂಧಿವೃತ್ತ ಮಾರ್ಗವಾಗಿ ಜೂನಿಯರ್ ಕಾಲೇಜ್ ಆವರಣದಲ್ಲಿ ಜರುಗುವ ಸಮಾರೋಪ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ಈ ಪಾದಯಾತ್ರೆಗೆ ಹುಲಿಗಿ, ಆನೆಗುಂದಿ ಮತ್ತು ಗಂಗಾವತಿ ಭಾಗದ ಸಮಸ್ತ ನಾಗರಿಕರು ಕೈ ಜೋಡಿಸಲು ಮನವಿ ಮಾಡಿದರು.

ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ಎಂ ಸಿದ್ದರಾಮಯ್ಯಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಹೊನ್ನಪ್ಪ, ಈ ಸಂದರ್ಭದಲ್ಲಿ ನಿರ್ಮಲ ತುಂಗಭದ್ರ ಅಭಿಯಾನದ ಸದಸ್ಯರಾದ ಲೋಕೇಶ್ವರಪ್ಪ ಶಿವಪೂಜಿ, ದಂತ ವೈದ್ಯ ಡಾ|| ಶಿವಕುಮಾರ್ ಮಾಲಿಪಾಟೀಲ್, ಪರಿಸರ ಸೇವಾ ಟ್ರಸ್ಟ್ನ ಅಧ್ಯಕ್ಷ ಮಂಜುನಾಥ್ ಗುಡ್ಲಾನೂರ್, ರೈತ ಮುಖಂಡ ಸುದರ್ಶನ ವರ್ಮಾ, ಆನೆಗುಂದಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ಹೊನ್ನಪ್ಪ ನಾಯಕ, ಮಾಜಿ ಅಧ್ಯಕ್ಷರಾದ ತಿರುಕಪ್ಪ, ಪ್ರಮುಖರಾದ ರಮೇಶ ಸಣಾಪುರ, ವಿ.ಎಸ್.ಎಸ್.ಎನ್ ಸರ್ವ ಸದಸ್ಯರು, ರೈತ ಮುಖಂಡರು ಸೇರಿದಂತೆ ಇತರರಿದ್ದರು. ವಿಷ್ಣುತೀರ್ಥ ಜೋಶಿ ವಂದನೆಗಳನ್ನು ಸಲ್ಲಿಸಿದರು. 




Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*