ಅಂಜನಾದ್ರಿಯಲ್ಲಿ 50 ದಿನಗಳ ಅವಧಿಯಲ್ಲಿ) ಒಟ್ಟು *ರೂ.61,64,760/-* ರೂ ಗಳು ಸಂಗ್ರಹ
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ :
ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ ಇಂದು ದಿ. 20/01/2025 ರಂದು ಎಂ ಹೆಚ್ ಪ್ರಕಾಶ ರಾವ್ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ ಹಾಗೂ ಅವರ ಉಪಸ್ಥಿತಿಯಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.02-12-2024 ರಿಂದ 20-01-2025 ರವರೆಗೆ ಒಟ್ಟು 50 ದಿನಗಳ ಅವಧಿಯಲ್ಲಿ) ಒಟ್ಟು *ರೂ.61,64,760/-* ರೂ ಗಳು ಸಂಗ್ರಹವಾಗಿರುತ್ತದೆ. *ವಿದೇಶಿ ನಾಣ್ಯಗಳು , ನೋಟುಗಳು( * ಯು ಎಸ್ ಎ , ನೇಪಾಳ್, ಮತ್ತು ಇತರೆ ದೇಶ ಗಳು )**ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಶಿರಸ್ತೇದಾರಾದ ರವಿಕುಮಾರ್ ನಾಯಕವಾಡಿ , ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಮಂಜುನಾಥ ಹಿರೇಮಠ, ಪ್ರ.ದ.ಸ, , ಮಹಮ್ಮದ್ ರಫಿ, ಗಾಯತ್ರಿ, ಶ್ರೀರಾಮ ಜೋಶಿ , ಸೌಭಾಗ್ಯಮ್ಮ, ಕವಿತಾ, ಸುಧಾ ,ಕವಿತಾ ಎಸ್ ದ್ವಿ.ದ.ಸ. ಮಹಾಲಕ್ಷ್ಮಿ ,ಪೂಜಾ , ಅಸ್ಲಾಂ ಪಟೇಲ್, ಮಂಜುನಾಥ ದುಮ್ಮಾಡಿ ಗ್ರಾಮ ಆಡಳಿತ ಅಧಿಕಾರಿಗಳು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಮ್ಯಾನೇಜರ್ ನವೀನ್ ಕುಮಾರ , ಸತೀಶ್, ಪ್ರವೀಣ್ ಕುಮಾರ ವಿನೋದ್ ,ಶ್ರೀಮಂತ . ಭೀಮಪ್ಪ HC ಪೋಲಿಸ್ ಸಿಬ್ಬಂದಿ , ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ, ಮಹಿಳಾ ಸ್ವಯಂ ಸೇವಾ ಸಂಘದವರು ಹಾಜರಿದ್ದರು
ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .02/12/2024 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ *ರೂ.26,60,917 /-* ಸಂಗ್ರಹವಾಗಿತ್ತು.
Comments
Post a Comment