ಶ್ರೀರಾಮನಗರದಲ್ಲಿ ನಿರ್ಮಲ ತುಂಗಭದ್ರ ಅಭಿಯಾನದ ರಥ: ಸ್ವಾಗತಿಸಿದ ಜನತೆ

ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕರಾದ ಬಾಲಕೃಷ್ಣ ನಾಯ್ಡು, ಡಾ. ಶಿವಕುಮಾರ್ ಮಾಲಿಪಾಟೀಲ್, ಲೋಕೇಶ್ವರಪ್ಪ, ರಾಘವೇಂದ್ರ ತೂನ, ಮಂಜುನಾಥ್ ಗುಡ್ಲಾನೂರ ಜ.8ರಂದು ಜನಜಾಗೃತಿ, ಜಲಜಾಗೃತಿ ಮತ್ತು ಸಮಾರೋಪ ಕಾರ್ಯಕ್ಕೆ ಆಗಮಿಸಿ ಈ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು. ಶ್ರೀ ರಾಮನಗರದಲ್ಲಿ ಪ್ರತಿ ಓಣಿಯಲ್ಲಿ ಜಾಗೃತಿಯ ರಥ ಸಂಚರಿಸಿ ಜಾಗೃತಿ ಮೂಡಿಸಿತು
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಪ್ಪ, , ರಾಮಕೃಷ್ಣರಾಜು, ಲಯನ್ಸ್ ಅಧ್ಯಕ್ಷ ಸುಬ್ರಹ್ಮಣ್ಣೇಶ್ರರಾವ್, ಜಿ.ರಾಮಕೃಷ್ಣ, ಕೆ. ವಿಜಯಭಾಸ್ಕರ್ ರೆಡ್ಡಿ,, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸರ್ವ ಸಿಬ್ಬಂದಿ, ವಿದ್ಯಾರ್ಥಿಗಳು, ಜಿ.ಪಿ ಅಭಿವೃದ್ದಿ ಅಧಿಕಾರಿ ನಾಗೇಶ ಕುರಡಿ, ಶ್ರೀನಿವಾಸ,ಬಿ, ರಮೇಶ ಕುಲಕರ್ಣಿ, ಗಿರಿಧರ ಜೂರಟಗಿ, ಸುಮಂಗಲಾ, ಪರಮೇಶಪ್ಪ, ತಾಯಪ್ಪ, ಯಲ್ಲಪ್ಪ, ಪರಮೇಶ್ವರಪಗಪ , ಮಾರೆಪ್ಪ ಮುಂತಾದವರು ಇದ್ದರು
ಜಂಗಮರ ಕಲ್ಗುಡಿಯಲ್ಲಿನ ರೈತ ಸಿ.ಹೆಚ್ ರಾಮಕೃಷ್ಣ ಮತ್ತು ತಂಡವನ್ನು ಸಂದರ್ಶೀಸಿ ಅವರನ್ನು ಕಾರ್ಯಕ್ರಮಕ್ಕೆ ಅಭಿಯಾನ ತಂಡ ಸ್ವಾಗತಿಸಿತು
Comments
Post a Comment