ದಾಸನಾಳ ಶಾಲೆಗೆ ಲೋಟ, ತಟ್ಟೆ ದೇಣಿಗೆ
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಸನಾಳ, ತಾಲೂಕು ಗಂಗಾವತಿ ಶಾಲೆಗೆ ದೇವೇಂದ್ರ ಕುಮಾರ ಇಮ್ಮಡಿ ವಿದ್ಯಾರ್ಥಿಗಳ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯಕ್ಕೆ ಅನುಕೂಲವಾಗುವಂತೆ ಶಾಲೆಗೆ 50 ತಟ್ಟೆ ಮತ್ತು 50 ಲೋಟಗಳನ್ನು ದೇಣಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಪರಶುರಾಮ ಕರಡಿ, ಎಸ್ಡಿಎಂಸಿ ಅಧ್ಯಕ್ಷರಾದ ಭಿಮಪ್ಪ, ಸದಸ್ಯರಾದ ವೆಂಕಟೇಶ, ಮಾರುತೇಶ, ನಿರುಪಾದಿ, ಮಾಜಿ ತಾ.ಪಂ ಸದಸ್ಯರಾದ ದೇವೇಂದ್ರಗೌಡ ಅವರು, ಸಹಶಿಕ್ಷಕರಾದ ನಾಗರಾಜ ಸರ್, ಕಸ್ತೂರಿ, ಜ್ಯೋತಿ, ತುಳಸಿ, ವಿದ್ಯಾಶ್ರೀ, ಕು.ಸಂಗೀತಾ, ಅತಿಥಿ ಶಿಕ್ಷಕರಾದ ಸುಷ್ಮಾ ಹಾಗು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು... ದಾನಿಗಳ ಸೇವಾ ಕಾರ್ಯ ಮತ್ತು ಸಹೃದಯಯತೆ ಮಾದರಿಯಾದುದು. ಸರಕಾರಿ ಶಾಲೆಗೆ ಲೋಟ ತಟ್ಟೆ ದಾನನೀಡುದ್ದು ಅನುಕರಣೀಯ ಎಂದು ಅಶೋಕ ಹೊಸಮನಿ , ಜಗದೀಶ್ ಈಳಿಗೇರ,ಮರಗೂರು ಮುರುಗೇಶ್, ಮೈಲಾರಪ್ಪ ಬೂದಿಹಾಳ ದಾನಿಗಳನ್ನು ಅಭಿನಂದಿಸಿದ್ದಾರೆ.
Comments
Post a Comment