ದಾವಣಗೆರೆಯ ರುದ್ರಪ್ಪ ಉಜ್ಜನಕೊಪ್ಪ ಅಖಿಲ ಭಾರತ ಪೊಲೀಸ್ ಶೂಟಿಂಗ್ ಸ್ಪರ್ಧೆಗೆ ಆಯ್ಕೆ**
ಕಿಷ್ದಿಂಧ ಪ್ರಭ ಸುದ್ದಿ: ದಾವಣಗೆರೆಯ ಐಜಿಪಿ ಕಚೇರಿಯ ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ ಅಖಿಲ ಭಾರತ ಪೊಲೀಸ್ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಈಚೆಗೆ ಬೆಂಗಳೂರಿನ ಯಲಹಂಕದ ಬಿಎಸ್‌ಎಫ್‌ನ ಕೆರೆಹಳ್ಳಿ ಫೈರಿಂಗ್ ರೇಂಜ್‌ನಲ್ಲಿ ನಡೆದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಈ ಅವಕಾಶವನ್ನು ಗಳಿಸಿದ್ದಾರೆ.
ರುದ್ರಪ್ಪ ಉಜ್ಜನಕೊಪ್ಪ ಮಾರ್ಚ್ 17ರಿಂದ 22ರವರೆಗೆ ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಓತಿವಕಮ್‌ನಲ್ಲಿರುವ ಟಿಎನ್‌ಸಿಎಸ್ ತರಬೇತಿ ಕೇಂದ್ರದಲ್ಲಿ ನಡೆಯಲಿರುವ 25ನೇ ಅಖಿಲ ಭಾರತ ಪೊಲೀಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ತಮ್ಮ ಕೌಶಲ್ಯ ಮತ್ತು ದಕ್ಷತೆಯನ್ನು ಪ್ರದರ್ಶಿಸಿ ರಾಜ್ಯ ಮತ್ತು ದೇಶದ ಗೌರವವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
Comments
Post a Comment