ಪ್ಲಾಸ್ಟಿಕ್ ಮುಕ್ತ ಗಂಗಾವತಿ ಅಭಿಯಾನ ಯಶಸ್ವಿ
ಪ್ಲಾಸ್ಟಿಕ್ ಮುಕ್ತ ಗಂಗಾವತಿ ಅಭಿಯಾನ ಯಶಸ್ವಿ
ದಿನಾಂಕ: 20 ಮಾರ್ಚ್
2025, ಗಂಗಾವತಿ
ಗಂಗಾವತಿ ನಗರದಲ್ಲಿ "ಪ್ಲಾಸ್ಟಿಕ್ ಮುಕ್ತ ಗಂಗಾವತಿ" ಅಭಿಯಾನದ ಪಾದಯಾತ್ರೆ ಸಂಜೆ 5.30ಕ್ಕೆ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ನಗರಸಭೆ ಗಂಗಾವತಿ, ವಕೀಲರ ಸಂಘ ಗಂಗಾವತಿ, ಚಾರಣ ಬಳಗ ಗಂಗಾವತಿ, ಪರಿಸರ ಸೇವಾ ಟ್ರಸ್ಟ್ ಮತ್ತು ಇತರೆ ಸಂಘ-ಸಂಸ್ಥೆಗಳು ನಗರ ಮತ್ತು ಗ್ರಾಮೀಣ ಪ್ರದೇಶದ ನಾಗರಿಕರ ಸಹಯೋಗದಲ್ಲಿ ಆಯೋಜಿಸಿದ್ದವು.
ನೇತೃತ್ವ ಮತ್ತು ಉಪಸ್ಥಿತಿ:
ಕಾರ್ಯಕ್ರಮದ ನೇತೃತ್ವವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ವಹಿಸಿದ್ದರು. ಇದರೊಂದಿಗೆ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ, ನಗರಸಭೆ ಅಧ್ಯಕ್ಷ ಮೌಲಸಾಬ, ಪಾರಾಯುಕ್ತರು ವಿರೂಪಾಕ್ಷ ಮೂರ್ತಿ, ನಾಗರಾಜ, ಚೇತನ ಹಾಗೂ ನಗರಸಭೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಶರಣ ಬಸಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸಬಿ, ಕಾರ್ಯದರ್ಶಿ ಹೆಚ್.ಎಮ್. ಮಂಜುನಾಥ ಸೇರಿದಂತೆ ವಕೀಲರ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.
ಚಾರಣ ಬಳಗದ ಸಂಚಾಲಕರಾದ ದಂತವೈದ್ಯ ಡಾ. ಶಿವಕುಮಾರ ಮಾಲಿಪಾಟೀಲ್, ಪರಿಸರ ಪ್ರೇಮಿ ಮಂಜುನಾಥ ಗುಡ್ಲಾನೂರ, ಪ್ರಹ್ಲಾದ ಕುಲಕರ್ಣಿ, ಶಿಕ್ಷಕ ಮೈಲಾರಪ್ಪ ಬೂದಿಹಾಳ, ಮುಖ್ಯಸ್ಥೆ ಸಿ. ಮಹಾಲಕ್ಷ್ಮಿ, ಲಕ್ಷ್ಮೀದೇವಿ ಗುಡ್ಲಾನೂರ, ಅವನಿ ಮೂತಾ ಹಾಗೂ ಇತರೆ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗೌರವ ಉಪಸ್ಥಿತಿ : ಅಂತರಾಷ್ಟ್ರೀಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಇತಿಹಾಸ ತಜ್ಞ ಶರಣ ಬಸಪ್ಪ ಕೋಲ್ಕಾರ, ಪತ್ರಕರ್ತರ ಬಳಗ, ಸರ್ವ ಸಮಾಜ
ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರ ಭಾಷಣ:
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸದಾನಂದ ನಾಗಪ್ಪ ನಾಯಕ್ ಅವರು, "ನಮಗಿರುವುದು ಒಂದೇ ಭೂಮಿ ಮತ್ತು ಶ್ರೇಷ್ಠ ಮಾನವ ಜನ್ಮ. ಇದನ್ನು ಸಾರ್ಥಕಗೊಳಿಸಲು ಇತರರಿಗೆ ಆರೋಗ್ಯ ಲಭಿಸುವಂತಹ ಕೆಲಸಗಳನ್ನು ಮಾಡಬೇಕು. ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿದ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ನಂತಹ ಗಂಭೀರ ರೋಗಗಳು ಹರಡುತ್ತವೆ. ಆದ್ದರಿಂದ, ಏಕಬಾರಿ ಬಳಕೆಯ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲಗಳು, ಮಣ್ಣಿನಲ್ಲಿ ಕರಗುವ ಮತ್ತು ಪರಿಸರಕ್ಕೆ ಹಾನಿಕಾರಕವಲ್ಲದ ಬ್ಯಾಗ್ಗಳನ್ನು ಬಳಸುವಂತೆ ಅಂಗಡಿಯ ಮಾಲೀಕರು ಮತ್ತು ಸಾರ್ವಜನಿಕರಿಗೆ ಕರೆ ನೀಡಿದರು."
ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಅವರ ಭಾಷಣ:
ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಅವರು, "ನಮ್ಮ ದೇಶದ ಜನರು ನಾಶಹೊಂದಲು ಶತ್ರು ದೇಶಗಳು ಬೇಕಿಲ್ಲ. ಏಕೆಂದರೆ ಪ್ಲಾಸ್ಟಿಕ್ ಎನ್ನುವ ಶತ್ರು ನಿತ್ಯ ನಮ್ಮ ಬದುಕಿನ ಹಾಸುಹೊಕ್ಕಾಗಿದೆ. ಮೊದಲು ಆ ಶತ್ರುವನ್ನು ದೂರವಿಡಬೇಕು. ಪ್ಲಾಸ್ಟಿಕ್ ಮುಕ್ತ ಬದುಕು ನಮ್ಮದಾಗಿರಬೇಕು. ಆಗ ನಾವೆಲ್ಲ ಸುರಕ್ಷಿತ,"
ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ ಅವರ ಭಾಷಣ:
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ ಅವರು ರಸ್ತೆ ಬದಿಯಲ್ಲಿನ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ನಿಂದಾಗುವ ಆರೋಗ್ಯ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿ,
"ಬೈಯೋಡಿಗ್ರೇಡೆಬಲ್ ಮತ್ತು ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಬಳಸಿ,"
ಎಂದು ಸಲಹೆ ನೀಡಿದರು.
https://youtu.be/kYo2ZhvGrTU?
ಅಭಿಯಾನದ ಉದ್ದೇಶ:
ಈ ಅಭಿಯಾನದ ಮೂಲಕ ಗಂಗಾವತಿ ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡುವುದು ಮತ್ತು ಪರಿಸರ ಸ್ನೇಹಿ ಪರ್ಯಾಯಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಉದ್ದೇಶವಾಗಿದೆ. ನಗರದ ಎಲ್ಲಾ ವರ್ಗದ ಜನತೆ, ಸಂಘ-ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಉದ್ದೇಶವನ್ನು ಸಾಧಿಸಲು ಯತ್ನಿಸಲಾಗುತ್ತಿದೆ.
ಕಾರ್ಯಕ್ರಮದ ವಿಶೇಷತೆ:
ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಲಾಯಿತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಯಿತು.
ಈ ಅಭಿಯಾನವು ಗಂಗಾವತಿ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಯನ್ನು ರೂಢಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಭಾವಿಸಲಾಗಿದೆ.
ಪ್ಲಾಸ್ಟಿಕ ಭೂತ ವೇಷಧಾರಿಯು ಅಭಿಯಾನದಲ್ಲಿ ಸಾರ್ವಜನಿಕರ ಗಮನ ಸೆಳೆದನು.
ಭಾರತೀಯ ವೈದ್ಯಕೀಯ ಸಂಘದ ಹಿರಿಯ ಸದಸ್ಯರಾದ ಡಾ|| ಎ.ಸೋಮರಾಜು, ಡಾ|| ಜಿ. ಚಂದ್ರಪ್ಪ, ಅಧ್ಯಕ್ಷರಾದ ಡಾ|| ವಿ.ಎಸ್.ಎನ್ ರಾಜು, ವೈದ್ಯಕೀಯ ಮಹಿಳಾ ಘಟಕದ ಡಾ|| ಮೇಧಾ, ಭಾರತಿ ಹೊಸಳ್ಳಿ, ನಗರಸಭೆಯ ಅಭಿಯಂತರರಾದ ಚೇತನ್, ಆರೋಗ್ಯ ನಿರೀಕ್ಷಕರಾದ ನಾಗರಾಜ, ಸಹಕಾರಿ ಸಂಘಗಳ ಒಕ್ಕೂಟದ ಸುಧಾಕರ, ಶ್ರಮಜೀವಿ ಕಲ್ಯಾಣ ಕರ್ನಾಟಕ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ, ಆ ಒಕ್ಕೂಟದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಿವಕುಮಾರಗೌಡ, ಕಿಷ್ಕಿಂದ ಚಾರಣ ಬಳಗದ ಅರ್ಜುನ್, ಹರನಾಯಕ, ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ರಾಮಣ್ಣ ನಾಯಕ, ಪಂಪಣ್ಣ ನಾಯಕ, ಅರ್ಜುನ ನಾಯಕ, ವಿರುಪಾಕ್ಷಿಗೌಡ ನಾಯಕ, ಚನ್ನಬಸವ ಜೇಕಿನ್ ಹಾಗೂ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಅವರು ಅಭಿಯಾನದಲ್ಲಿ ಭಾಗವಹಿಸಿ ಮೆರಗು ತಂದರು. ರಾಘವೇಂದ್ರ ಚೌಡ್ಕಿಯವರು ಪ್ಲಾಸ್ಟಿಕ್ ಮುಕ್ತಿಗಾಗಿ ಜಾಗೃತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.
ನಗರಸಭೆಯ ಅಧ್ಯಕ್ಷರಾದ ಮೌಲಾಸಾಬ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಸುಚೇತಾ ಶಿರಿಗೇರಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ರೈತ ಸಂಘದ ಶರಣೇಗೌಡ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಬಸವರಾಜ ಮ್ಯಾಗಳಮನಿ, ಆಯುಷ್ ಬಳಗದ ಡಾ|| ಸುನೀಲ್ ಅರಳಿ, ಡಾ|| ಎಸ್.ಬಿ ಹಂದ್ರಾಳ, ಡಾ|| ವಿಜಯ್ ಗೌಡರ್, ಕಿಷ್ಕಿಂದಾ ಐ.ಡಿ.ಎ ವತಿಯಿಂದ ಡಾ|| ಕಿರಣ್, ಡಾ|| ಅಬ್ದುಲ್ ನಬಿ, ರಾಜಸ್ಥಾನಿ ಸಮಾಜ ಬಾಂಧವರು, ಆರ್ಯವೈರ್ಶ ಸಮಾಜದ ರೂಪಾರಾಣಿ ರಾಯಚೂರು, ಅಲೆಮಾರಿ ಬುಡ್ಗಜಂಗಮ ಸಮಾಜದ ಆರ್. ಕೃಷ್ಣ, ಸಾಹಿತಿಗಳಾದ ಶರಣಬಸಪ್ಪ ಕೋಲ್ಕಾರ, ಪವನಕುಮಾರ ಗುಂಡೂರು, ಕಿಷ್ಕಿಂದ ಹೋರಾಟ ಸಮಿತಿಯ ಮಂಜುನಾಥ ಕಟ್ಟಿಮನಿ, ಪರಿಸರ ಸೇವಾ ಟ್ರಸ್ಟ್ನ ಮಂಜುನಾಥ ಗುಡ್ಲಾನೂರು, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಹಾಲಕ್ಷಿö್ಮ ಕೇಸರಹಟ್ಟಿ, ಪ್ರಗತಿಪರ ಚಿಂತಕರಾದ ಶೈಲಜಾ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ರುದ್ರೇಶ ರ್ಹಾಳ, ಗಂಗಾವತಿ ಚಾರಣ ಬಳಗದ ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ಉಲ್ಲಾಸ, ಸೋಮಪ್ಪ ಜೂರಟಗಿ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
Comments
Post a Comment