ನಮ್ಮ ಹೆಮ್ಮೆ; B.K. ಭೂತೆ ನಮ್ಮ ವಕೀಲರು.'
ಕಿಷ್ಕಿಂದ ಪ್ರಭ ಸುದ್ದಿ ಕೊಪ್ಪಳ '
ನಮ್ಮ ಹೆಮ್ಮೆ ವಕೀಲರು, ವ್ಯಾಪಾರ, ಒಕ್ಕುಲುತನ ಕಟುಂಬ,
ಒಕ್ಕಲಿಗ ಬೇರುಗಳೊಂದಿಗೆ ಬೆಳೆದ ಮಣ್ಣಿನ ಮಗ, ಅಪ್ಪಟ ದೇಸಿ ಪ್ರತಿಭೆ, 'ಎನಗಿಂತ ಕಿರಿಯರಿಲ್ಲ' ಎಂದೇ, ಬದುಕುತ್ತಿರುವ ನಮ್ಮಗಳ ನಡುವಿನ ಹಿರಿಯ ಜೀವ ಇವರು.
ನ್ಯಾಯಾಧೀಶರಾಗಿ ನ್ಯಾಯ ಪೀಠದ ಮೇಲೆ ಕುಳಿತು, ನ್ಯಾಯವಾದಿಯಾಗಿ ಪೀಠದ ಮುಂದೆ ನಿಂತು, ನ್ಯಾಯ ದೇವತೆ ಸೇವೆ ನಿರಂತರ, ತಮ್ಮ ಕಾನೂನು ದೀರ್ಘ ತಪಸ್ಸಿಗೆ ನಮ್ಮಗಳ ಗೌರವ ಪೂರ್ವಕ ಚಪ್ಪಾಳೆ.
ದೇಹ ಮಾಗಿದರೂ ಕಾಯವೇ ಕೈಲಾಸ ಅಂತಲೂ, ಕಾಯಕವೂ ಕೈಲಾಸ ಎಂದು, ನಿತ್ಯ ನಮ್ಮ ನಡುವೆ ನಿಲಂಜನ ದೀಪದಂತೆ ಓಡಾಡುವ ಪ್ರಕಾಶಮಾನವಾದ ದಾರಿದೀಪ, ಸ್ಪಷ್ಟ ಜ್ಞಾನದ ಚಿಲುಮೆಯ ಚಿರ ಯುವಕ ಇವರು.
ಅದೇ ಕಾನೂನುನ್ನು ಪೀಠಕ್ಕೆ ಹೇಳುವ, ಕಕ್ಷೆದಾರರಿಗೆ ತಿಳಿಸುವ, ಜೂನಿಯರ್ ವಕೀಲರುಗಳಿಗೆ ಕಲಿಸುವ ಬಗೆ ಮಾತ್ರ ಬೇರೆ, ಪ್ರತಿಯೊಬ್ಬರ ಕಿವಿಗೂ ಹೊಂದಿಕೊಳ್ಳುವಂತೆ
ತಿಳಿಸುವ, ಅನುಮಾನ ಭಯವನ್ನು ಹೋಗಲಾಡಿಸುವ ಅದ್ಭುತವಾಗಿ ಮಲದಟ್ಟ ಮಾಡುವ ಕಲೆ ಇವರದು.
ಇಳಿ ಸಂಜೆಯಲ್ಲಿ ಕಲ್ಲು ಬೆಂಚಿನ ಮೇಲೆ ಲೂಧಿ ಗಾರ್ಡನಲ್ಲಿ ಹಾಯಾಗಿದ್ದ ಮೂರು ಜೀವಗಳಲ್ಲಿ ಒಂದು ಜೀವದಂತೆ ತೋರುತಿಹರು, ನಮ್ಮಗಳ ಜೀವನ ಪ್ರೀತಿಗೆ ಓಂಕಾರ ಹಾಕಿವದರು, ಒಲವಿನಂತೆ ಬದಕನ್ನ ಸಣ್ಣ ಸ್ಟೀಲ್ ಡಬ್ಬಿಯಲ್ಲಿಯ ಲವಂಗ, ಯಾಲಕ್ಕಿ ಸವಿಯುತ್ತಿರುವ ನಮ್ಮ ನಡುವಿನ 'ಮಿಸ್ಟರ್ ಪರ್ಫೆಕ್ಟ್' ಇವರು.
- ವಿಜಯ ಅಮೃತರಾಜ್.
ವಕೀಲರು, ಕೊಪ್ಪಳ.
99458 73626.
Comments
Post a Comment