ಹನುಮ ಜಯಂತಿ; ಅಂಜನಾದ್ರಿಗೆ ಹರಿದು ಬಂದ ಜನಸಾಗರ ಶಾಸಕ ಜನಾರ್ಧನರೆಡ್ಡಿ ಭೇಟಿ,

ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಕೆ
ಗಂಗಾವತಿ: ಹನುಮ ಜಯಂತಿಯ ಅಂಗವಾಗಿ ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಶನಿವಾರದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರಕ್ಕೆ ಬೆಳಿಗ್ಗೆಯಿಂದಲೇ ರಾಜ್ಯ ಹೊರರಾಜ್ಯದಿಂದ ತಂಡ ತಡೋಪವಾಗಿ ಜನಸಾಗರವೇ ಹರಿದುಬಂದಿದೆ. ಹನುಮ ಮಾಲಾಧರಿಗಳ ಹಾಗೂ ಭಕ್ತರ ಹನುಮ ನಾಮ ಜಯಘೋಷ ಮುಗಿಲು ಮಟ್ಟಿತ್ತು. ಈ ಭಾರಿಯ ಹನುಮ ಜಯಂತಿ ಸರ್ಕಾರಿ ರಜೆ ದಿನವಾದ ಎರಡನೇ ಶನಿವಾರ ಬಂದಿರುವುದರಿAದ ಪ್ರತಿ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹನುಮ ಭಕ್ತರು ಬೆಟ್ಟಕ್ಕೆ ಬಂದಿದ್ದಾರೆ. ಬೆಳಗಿನ ಜಾವದಿಂದ ಅಪಾರ ಸಂಖ್ಯಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದಾರೆ. ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ನೂರಾರು ಬೆಟ್ಟದ ಪಾವಟಿಗೆಗಳನ್ನು ಹತ್ತಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಹನುಮ ಜಯಂತಿಯ ಹಿನ್ನೆಲೆ ಅಂಜನಾದ್ರಿಯಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲಾ ಜನವೇ ಜನ. ಅತ್ಯಂತ ಉತ್ಸಾಹದಿಂದ ಭಕ್ತರು ಆಂಜನೇಯನ ನಾಮಸ್ಮರಣೆ ಮಾಡುತ್ತಾ ಬೆಟ್ಟ ಹತ್ತುವ ದೃಶ್ಯ ಕಂಡುಬAದಿತು. ಆಗಮಿಸಿದ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಸ್ಥಳೀಯ ಪೊಲೀಸ್ ಇಲಾಖೆ ಅಗತ್ಯ ಬಂದೂಬಸ್ತ್ ಒದಗಿಸಲಾಗಿತ್ತು. ಶಾಸಕ ರೆಡ್ಡಿ ಭೇಟಿ : ಹನುಮ ಜಯಂತಿ ಪ್ರಯುಕ್ತ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯ ದೇವರ ದರ್ಶನಪಡೆದರು. ಶಾಸಕ ರೆಡ್ಡಿಯವರು ಕೇಸರಿ ಶಾಲು ಧರಿಸಿ ಹನುಮ ಮಾಲಾಧರಿಗಳು, ಭಕ್ತರೊಂದಿಗೆ ಜೊತೆಗೂಡಿ ಬೆಟ್ಟ ಹತ್ತಿದರು. ಈ ವೇಳೆ ಶಾಸಕರು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜನಾರ್ಧನರೆಡ್ಡಿ, ಇಂದು ಪವಿತ್ರ ಶ್ರೀ ಹನುಮ ಜಯಂತಿಯ ಶುಭದಿನವಾಗಿದೆ. ಕ್ಷೇತ್ರದ ಜನತೆಗೆ ಮತ್ತು ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಇಲ್ಲಿಗೆ ಹನುಮ ಮಾಲಾಧಾರಿಗಳು ಹಾಗೂ ಭಕ್ತಾದಿಗಳೊಂದಿಗೆ ಬಂದು ಹನುಮಂತನ ದಿವ್ಯ ದರ್ಶನ ಪಡೆದು ಪೂಜೆ ಸಲ್ಲಿಸಲಾಯಿತು. ನಾಡಿನ ಸಮೃದ್ಧಿ, ಶಾಂತಿ ಮತ್ತು ಕ್ಷೇಮಕ್ಕಾಗಿ ಹನುಮಂತನಲ್ಲಿ ಪ್ರರ್ಥಿಸಿದ್ದೇನೆ. ಇಂಹತ ಪುಣ್ಯ ಕ್ಷೇತ್ರ ನಮ್ಮ ಕ್ಷೇತ್ರದಲ್ಲಿ ಇರುವುದು ನಮ್ಮ ಸೌಭಾಗ್ಯವಾಗಿದೆ. ಐತಿಹಾಸಿಕ ಕ್ಷೇತ್ರ ಆಂಜನಾದ್ರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ, ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಇಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದರು. ಸಂದರ್ಭದಲ್ಲಿ ಯಮನೂರು ಚೌಡ್ಕಿ, ನಾಗರಾಜ್ ಚಳ್ಳಗೇರಿ, ಶಿವು ಆದೋನಿ, ಪಂಪಣ್ಣ ನಾಯಕ್, ಮಲ್ಲಿಕಾರ್ಜುನ್ ಹಿರೇಮಠ್, ರಾಘವೇಂದ್ರ ಮಲ್ಲಾಪುರ, ವೀರೇಶ್ ಅಂಜನಾದ್ರಿ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*