ಗಂಗಾವತಿಯ ಸಾಹಿತಿಗಳಾದ ಅರಳಿ ನಾಗಭೂಷಣ ಮತ್ತು ವಾಣಿಶ್ರೀ ಪಾಟೀಲ್ ರಿಗೆ 'ಗುರು ಚರಂತೇಶ್ವರ ಶ್ರೀ' ಪ್ರಶಸ್ತಿ**
**ಗಂಗಾವತಿಯ ಸಾಹಿತಿಗಳಿಗೆ 'ಗುರು ಚರಂತೆಶ್ವರ ಶ್ರೀ' ಪ್ರಶಸ್ತಿ**
** ಕಿಷ್ಕಿಂದ ಪ್ರಭಸುದ್ದಿ ಬೆಂಗಳೂರು:** ಶಿವಾನಂದ ಸರ್ಕಲ್ನ ಗಾಂಧಿ ಭವನದ ಆವರಣದಲ್ಲಿ 4 ಏಪ್ರಿಲ್ 2025 ರಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಂಗಾವತಿಯ ಸಾಹಿತಿ **ನಾಗಭೂಷಣ ಅರಳಿ** ಮತ್ತು **ಶ್ರೀಮತಿ ವಾಣಿಶ್ರೀ ಪಾಟೀಲ್ ರಿಗೆ**'ಗುರು ಚರಂತೇಶ್ವರ ಶ್ರೀ ಪ್ರಶಸ್ತಿ ಲಭಿಸಿದೆ.
ನಾಗಭೂಷಣ ಅರಳಿಯವರ **'ನಾಗ ಜಯನ ಚೌಪದಿಗಳು'** ಮತ್ತು **'ಸಾವಿಲ್ಲದ ಪ್ರಶ್ನೆ'** (ಕವನ ಸಂಕಲನ) ಕೃತಿಗಳನ್ನು ಗಮನಿಸಿ, ಅವರ ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ನೀಡಲಾಗಿದೆ. **ಶ್ರೀ ಗುರು ದೊಡ್ಡಬಸವೇಶ್ವರ ಫೌಂಡೇಶನ್** ಮತ್ತು **ಶ್ರೀ ಗುರು ದೊಡ್ಡಬಸವೇಶ್ವರ ಸೇವಾ ಸಮಿತಿ, ಬೆಂಗಳೂರು** ಇವರ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ **ಜ್ಞಾನಪೀಠ ಪ್ರಶಸ್ತಿ** ವಿಜೇತ **ಡಾ. ಚಂದ್ರಶೇಖರ್ ಕಂಬಾರ**, ಪ್ರಾಧ್ಯಾಪಕ **ಶ್ರೀಮತಿ ಸಂಪದಾ** ಮತ್ತು ಧಾರವಾಡದ **ಪ್ರದೀಪ ಗುಡ್ಡದ** ಅವರಿಗೂ ಸಹ ಇದೇ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ನೇತೃತ್ವವನ್ನು **ನಂದಿಪುರದ ಖುಷಿ ಋಷಿ ಡಾ. ಮಹೇಶ್ವರ ಮಹಾಸ್ವಾಮಿಗಳು** ವಹಿಸಿದ್ದರು. **ಶ್ರೀ ಸೋಮಶಂಕರ ಮಹಾಸ್ವಾಮಿಗಳು**, **ಕೆಂಚೂರಿನ ಸವಿತಾಂದ ಮಹಾಸ್ವಾಮಿಗಳು**, **ಆಂಧ್ರದ ಅಬಾಜಾ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು** ಖ್ಯಾತ ನಟ ಶ್ರೀಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾರಥ್ಯವನ್ನು **ರಾಜ್ಯೋತ್ಸವ ಪ್ರಶಸ್ತಿ** ಪುರಸ್ಕೃತ ಹಾಗೂ ಖ್ಯಾತ ಸಾಹಿತಿ **ಗಂಗಾವತಿ ಎಸ್.ವಿ. ಪಾಟೀಲ್ ಗುಂಡೂರ್** ವಹಿಸಿದ್ದರು.
Comments
Post a Comment