ಬಾಲ್ಯ ವಿವಾಹ ತಡೆಗೆ ತಾಲೂಕ ಮಟ್ಟದ ಸಮನ್ವಯ ಸಮಿತಿ ಸಭೆ

ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ 30 ಏಪ್ರಿಲ್‌ 2025 : ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಗ್ರೇಡ್-೦೨ ತಹಶೀಲ್ದಾರ್ ಮಹಾಂತಗೌಡ ಇವರ ಅಧ್ಯಕ್ಷತೆಯಲ್ಲಿ ಬಾಲ್ಯವಿವಾಹ ತಡೆ ತಾಲೂಕಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಆರ್.ಜಯಶ್ರೀ ಅವರು ೨೦೨೪-೨೫ ಬಾಲ್ಯ ವಿವಾಹ ತಡೆಗೆ ಸಂಬAಧಿಸಿದ ದೂರುಗಳ ಸ್ವೀಕರಾರ ಮತ್ತು ತಡೆಹಿಡಿದ ಮಾಹಿತಿಯನ್ನು ಸಭೆಯಲ್ಲಿ ವಿವರಿಸಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಮಹಾಂತಗೌಡ ಇವರು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಖಡ್ಡಾಯವಾಗಿ ಮೂರು ತಿಂಗಳಗೊಮ್ಮೆ ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ನಡೆಸುವಂತೆ ಮತ್ತು ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರಲ್ಲದೆ, ಬಾಲ್ಯವಿವಾಹ ತಡೆದ ಅನಸರಣಾ ಭೇಟಿಯ ವರದಿಗಳನ್ನು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವಂತೆ ನೀಡಲು ತಿಳಿಸಿದರು. ಸಾಮೂಹಿಕ ವಿವಾಹ ಹಾಗು ವೈಯಕ್ತಿಕ ವಿವಾಹಗಳನ್ನು ಅತಿ ಹೆಚ್ಚು ಜರುಗುವ ಸಂದರ್ಭಗಳನ್ನು ಗಮನಿಸಬೇಕಿದ್ದು, ಅಪ್ರಾಪ್ತ ಮಕ್ಕಳ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ವಿವಾಹ ಆಯೋಜಕರು ಖಡ್ಡಾಯವಾಗಿ ತಹಶೀಲ್ದಾರರ ಅನುಮತಿ ಪಡೆಯುವಂತೆಯೂ ಮತ್ತು ವಿವಾಹವಾಗುವವರ ಮಾಹಿತಿ ಸೂಕ್ತ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ನೀಡಬೇಕಾಗಿದ್ದು ಈ ಕುರಿತು ಜಾಗೃತಿ ಮೂಡಿಬೇಕೆಂದರು. ವಿವಾಹ ಆಯೋಜಕರು ತಮ್ಮ ಸಂಘ ಸಂಸ್ಥೆಗಳನ್ನು ಖಡ್ಡಾಯವಾಗಿ ನವೀಕರಣ ಮಾಡಿಕೊಳ್ಳಬೇಕು, ಆಯೋಜಕರು, ಅರ್ಚಕರು, ಕಲ್ಯಾಣ ಮಂಟಪಗಳು, ಪ್ರಿಂಟಿAಗ್ ಪ್ರೆಸ್‌ಗೆ ಸಂಬAಧಿಸಿದವರು ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಬೇಕಿದ್ದು ಮಾಹಿತಿ ದೊರಕಿದಲ್ಲಿ ಇಲಾಖೆಗೆ ತಿಳಿಸಬೇಕು ತಪ್ಪಿದಲ್ಲಿ ಕಾನುನು ಕ್ರಮ ಜರುಗಿಸುವ ಕುರಿತು ಜಾಗೃತಿ ಮೂಡಿಸಬೇಕೆಂದು ವಿವರಿಸಿದರು. ಸೀಡ್ಸ್, ಹೊಟೇಲ್, ಇಟ್ಟಂಗಿ ಭಟ್ಟಿ, ಮರಳು ವ್ಯಾಪಾರ, ಕೋಳಿ ಫಾಮ್‌ಗಳಲ್ಲಿ ಬಾಲಕಾರ್ಮಿಕರು ದುಡಿಯುತ್ತಿದ್ದು ಭೇಟಿ ನೀಡಿ ಇಲಾಖೆಗೆ ವರದಿ ನೀಡಬೇಕು, ಭೀಕ್ಷಾಟನೆಯಲ್ಲಿ ತೊಡಗಿದ ಮಕ್ಕಳನ್ನು ಸಹ ಶಾಲೆ ಬಿಟ್ಟ ಮಕ್ಕಳೆಂದು ಪರಿಗಣಿಸಿ ಶಾಲೆಗೆ ಸೇರಿಸಬೇಕಿದ್ದು ಸಮನ್ವಯ ಸಮಿತಿ ಜಂಟಿ ಕಾರ್ಯಾಚರಣೆಯ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಿದರು. ಸಭೆಯಲ್ಲಿ ಪೊಲೀಸ್ ಇಲಾಖೆ ಆರಕ್ಷಕ ನಿರೀಕ್ಷಕರಾದ ಪ್ರಕಾಶ್ ಮಾಳೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶೃತಿ, ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಅಶೋಕ, ತಾಪಂ ಸಿಬ್ಬಂದಿ ಇತರರಿದ್ದರು.

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*