ಹೆಮ್ಮೆಯ ಗಂಗಾವತಿ ಚಿತ್ರದ ನಿರ್ದೇಶಕ ಸಚಿನ್ ಬೆಂಗಳೂರರವರಿಗೆ ಸನ್ಮಾನ**
*ಗಂಗಾವತಿ, ಕಿಸ್ಕಿಂದ ಪ್ರಭಸುದ್ದಿ*
'ಹೆಮ್ಮೆಯ ಗಂಗಾವತಿ' ಚಿತ್ರದ ನಿರ್ದೇಶಕ ಸಚಿನ್ ಬೆಂಗಳೂರು ಅವರನ್ನು ಗಂಗಾವತಿಯ ಖಾಸಗಿ ಕಾರ್ಯಾಲಯದಲ್ಲಿ ರವಿವಾರ ಸಿಹಿ ತಿನ್ನಿಸಿ ಗೌರವಿಸಲಾಯಿತು. ಖ್ಯಾತ ವಕೀಲ ಶರದ್ ದಂಡಿನ ಮತ್ತು ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಗುಡ್ಲಾನೂರ್ ಅವರು ಸಚಿನ್ ಅವರಿಗೆ ಸನ್ಮಾನ ಮಾಡಿ ಗೌರವಿಸಿದ್ರು.
ಈ ವೇಳೆ ಪತ್ರಕರ್ತ ಮಂಜುನಾಥ್ ಗುಡ್ಲಾನೂರ್ ಮಾತನಾಡುತ್ತಾ ಗಂಗಾವತಿ ಎನ್ನುವ ಚಲನಚಿತ್ರದ ಶೀರ್ಷಿಕೆ ತೆಗೆದುಕೊಂಡು ಈ ಭಾಗದಲ್ಲಿ ಚಿತ್ರಿಕರಣ ಮಾಡುತ್ತಿರುವ ಸಚಿನ್ ರವರಿಗೆ ಗಂಗಾವತಿಯ ಜನರ ಪರವಾಗಿ ಅಭಿನಂದನೆಗಳು ಎಂದರು
ಸಚಿನ್ ಬೆಂಗಳೂರು ಅವರು ' ಗಂಗಾವತಿ' ಚಿತ್ರದ ಶೀರ್ಷಿಕೆ ಆಯ್ಕೆ ಮಾಡಿದ್ದಲ್ಲದೇ, ಈ ಪ್ರದೇಶದಲ್ಲಿ ಸ್ಥಳಗಳನ್ನು ಗುರುತಿಸಿ ಬೇರೆ ಬೇರೆ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.
ಈ ಸಂದರ್ಭದಲ್ಲಿ ಶರತ್ ದಂಡಿನವರ ಚಿರಂಜೀವಿ ಸೇರಿದಂತೆ ಹಲವು ಕಲಾವಿದರು ಹಾಜರಿದ್ದರು.
Comments
Post a Comment