ಮಹಾನ್ ಕಿಡ್ಸ್ ಶಾಲೆಗೆ ತಾಲೂಕಿನಲ್ಲಿ ಪ್ರಥಮ ಸ್ಥಾನ! ಎಸ್.ಎಸ್.ಎಲ್.ಸಿ.ಯಲ್ಲಿ 100% ಫಲಿತಾಂಶ; 8 ವಿದ್ಯಾರ್ಥಿಗಳು 100/100 ಅಂಕಗಳಿಸಿದ್ದಾರೆ
ಗಂಗಾವತಿ, 02.05.2025 (ಕಿಷ್ಕಿಂಧಪ್ರಭ): 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಗಂಗಾವತಿ ತಾಲೂಕಿನ ಮಹಾನ್ ಕಿಡ್ಸ್ಶಾಲೆ ಅನುದಾನರಹಿತ ಶಾಲೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಹೆಗ್ಗಳಿಕೆ:
ಅಭಿಷೇಕ್ 613 ಅಂಕಗಳನ್ನು ಪಡೆದು ಶಾಲೆಯ ಟಾಪರ್ ಫಲಿತಾಂಶದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಪ್ರೀತಿ ಮುದ್ದೇಬಿಹಾಳ (608 ಅಂಕ) ಮತ್ತು ಆಲಂ ನವಾಜ್ (597 ಅಂಕ) ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಶೇಕಡಾ 53 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಶೇಕಡಾ 42 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
8 ವಿದ್ಯಾರ್ಥಿಗಳು ಕನ್ನಡ, ಹಿಂದಿ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು, ಶಾಲೆಯ ಗುಣಮಟ್ಟಕ್ಕೆ ಮೆರಗು ತಂದಿದ್ದಾರೆ.
ಶುಭಾಶಯಗಳು:
ಶಾಲೆಯ ಅಧ್ಯಕ್ಷ ನೇತ್ರಾಜ್ ಗುರುವಿನ ಮಠ ಉತ್ತೀರ್ಣ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮುಖ್ಯೋಪಾಧ್ಯಾಯಿನಿ ಸವಿತಾ "ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಪಾಲಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.
............................................................................
(ಕಿಷ್ಕಿಂಧಪ್ರಭ ಕನ್ನಡ ದಿನಪತ್ರಿಕೆಯ ಸೇವೆ)
Comments
Post a Comment