*ಚಿಗುರು ಚೈತನ್ಯ ಶಿಬಿರದ ಪಾಲಕರ ಸಭೆ ಯಶಸ್ವಿ : ಏಪ್ರಿಲ್ 5 ಸೋಮವಾರದಿಂದ ಶಿಬಿರ ಪ್ರಾರಂಭ
**ಸೋಮವಾರ, 5 ಎಪ್ರಿಲ್ 2025** – ಮಕ್ಕಳಿಗಾಗಿ ಏರ್ಪಡಿಸಲಾಗಿರುವ **15-ದಿನಗಳ ಚಿಗುರು ಚೈತನ್ಯ ಶಿಬಿರ** ಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಮೊನ್ನೆ ನಡೆದ **ಪಾಲಕರ ಸಭೆ** ಯಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ**ಶ್ರೀ ಚನ್ನಬಸವ ಸ್ವಾಮಿ ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯ ಕೆ. ಚನ್ನಬಸಯ್ಯ ಸ್ವಾಮಿ ಮಾತನಾಡುತ್ತಾ,, ಮಕ್ಕಳು ಸದಾ ಬೆಳೆಯುವ ಚಿಗುರಿನಂತೆ ಚೈತನ್ಯವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಎರಡನೇ ವರ್ಷದ **ಚಿಗುರು ಚೈತನ್ಯ ಶಿಬಿರ** ಏರ್ಪಡಿಸಲಾಗಿದೆ ಎಂದು ತಿಳಿಸಿದರು. *
*ಪಠ್ಯ ಚಟುವಟಿಕೆಗಳನ್ನು ಹೊರತು ಪಡಿಸಿ, ಸಹಕಾರ ಮನೋಭಾವ, ಪಾಲಕರು, ಗುರು-ಹಿರಿಯರಿಗೆ ಗೌರವ, ಸ್ನೇಹಿತರು ಮತ್ತು ಸಮುದಾಯದೊಂದಿಗಿನ ಸಂವಹನ** ಮುಂತಾದ ಜೀವನಮೌಲ್ಯಗಳನ್ನು ಈ ಶಿಬಿರದಲ್ಲಿ ಕಲಿಸಲಾಗುವುದು. 15 ದಿನಗಳಲ್ಲಿ **ಸೇವಾ ಮನೋಭಾವ, ನೈತಿಕ ಬೆಳವಣಿಗೆ** ಮತ್ತು **ಸಮಾಜೋನ್ನತಿ**ಗೆ ಅಗತ್ಯವಾದ ಪಾಠಗಳನ್ನು ಮಕ್ಕಳಿಗೆ ನೀಡಲಾಗುವುದು. ಪಾಲಕರು ಮತ್ತು ಮಕ್ಕಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ರು
ನಂತರ, **ಇತಿಹಾಸ ತಜ್ಞ ಶರಣಬಸಪ್ಪ ಕೊಲ್ಕಾರ** ಅವರು ಮಾತನಾಡುತ್ತಾ, *"ಇಂದಿನ ಮಕ್ಕಳು ಶಾಲೆ, ಮನೆಗಳಲ್ಲಿ ಒತ್ತಡದಲ್ಲಿದ್ದಾರೆ. ಅವರ ಬಾಲ್ಯವನ್ನು ನಾವು ಕಸಿದುಕೊಂಡಂತಾಗಿದೆ. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಕ್ಕಳೊಂದಿಗೆ ತೊಡಗಿಸಿಕೊಂಡು, ಅವರ ಕೊರತೆಗಳನ್ನು ನೀಗಿಸಲಿದ್ದಾರೆ"* ಎಂದರು.
*ಬಿ.ಸಿ. ಐಗೊಳ್* ಅವರು ಶಿಬಿರದ ವಿವರಗಳನ್ನು ಹಂಚಿಕೊಂಡು, *"ಯೋಗ, ಚಿತ್ರಕಲೆ, ಆದರ್ಶ ಕಥೆಗಳು ಮತ್ತು ಇತರ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಶಾಲೆಯಲ್ಲಿ ಅರ್ಥವಾಗದ ವಿಷಯಗಳನ್ನು ಸರಳವಾಗಿ ಕಲಿಸಲಾಗುವುದು. ಇದರಿಂದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯುವರು"* ಎಂದರು.
ಈ ಸಂದರ್ಭದಲ್ಲಿ, **ಸಂಪನ್ಮೂಲ ವ್ಯಕ್ತಿಗಳಾದ ಮೈಲಾರಪ್ಪ ಬೂದಿಹಾಳ, ಶಿವಪ್ರಸಾದ್ ಹಿರೇಮಠ್, ಶಿವಾನಂದ ತಿಮ್ಮಾಪುರ* ಶಿಕ್ಷಕಿ ನಾಗರತ್ನ, ಈರಮ್ಮ, ಯೋಗಗುರು ಗಂಧದಮಠ, ವಗ್ಗ ಮೇಡಂ, ಮುಂತಾದವರು ಹಾಗೂ **60ಕ್ಕೂ ಹೆಚ್ಚು ಪಾಲಕರು** ಉಪಸ್ಥಿತರಿದ್ದರು.
ಈ ಶಿಬಿರದಿಂದ ಮಕ್ಕಳು **ನೈತಿಕ, ಸಾಮಾಜಿಕ ಮತ್ತು ಬೌದ್ಧಿಕವಾಗಿ** ಸಮೃದ್ಧರಾಗುತ್ತಾರೆ ಎಂಬ ನಂಬಿಕೆ ಹಂಚಿಕೊಳ್ಳಲಾಯಿತು.
Comments
Post a Comment