ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ, 30.4.2025: ICSE (ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್) ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಹೆಗ್ಗಳಿಕೆ ತಂದಿದ್ದಾರೆ. ಮುಖ್ಯಾಂಶಗಳು: • 144 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 100% ಉತ್ತೀರ್ಣತೆ. • 17 ವಿದ್ಯಾರ್ಥಿಗಳು 90% ಮೇಲ್ಅಂಕಗಳನ್ನು ಪಡೆದಿದ್ದಾರೆ. • 39 ವಿದ್ಯಾರ್ಥಿಗಳು 80% ಮೀರಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. • ಉಳಿದ ಎಲ್ಲಾ ವಿದ್ಯಾರ್ಥಿಗಳು 70%+ ಅಂಕಗಳೊಂದಿಗೆ ಯಶಸ್ವಿಯಾಗಿದ್ದಾರೆ. • ಪ್ರಥಮ್ ಮಾಲಿಪಾಟೀಲ 564 ಅಂಕಗಳು, ರಾಮ್ ಚರಣ್ 562, ಪ್ರೀತಿ ರಾಘವೇಂದ್ರ ರಾಯಕರ್ 562, ಶ್ರೀ ಮಾನ್ಯ ಶಳ್ಳಗಿ 560, ಶ್ರೇಯ ಕಾಗಲಕರ್ 564, ಶರಣಬಸವ 559 ಪ್ರಮುಖರ ಪ್ರತಿಕ್ರಿಯೆ: ಶಾಲೆಯ ಸಿಇಒ ಜಿ. ಸುನಿಲ್ ಕುಮಾರ್ ಮತ್ತು ಅಕಾಡೆಮಿಕ್ ಡೈರೆಕ್ಟರ್ ಬಿ.ವಿ. ಸತೀಶ್ ವಿದ್ಯಾರ್ಥಿಗಳ ಸಾಧನೆಯನ್ನು ಹೊಗಳಿದ್ದು, "ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಸಹಯೋಗದಿಂದ ಈ ಯಶಸ್ಸು ಸಾಧ್ಯವಾಗಿದೆ" ಎಂದು ಹೇಳಿದರು. ಉತ್ತರ ಕರ್ನಾಟಕದ ಎಜಿಎಂ ಡಾ. ರಾಜಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿ, "ಸತತ ಪರಿಶ್ರಮ ಮತ್ತು ಶಿಸ್ತುಬದ್ಧ ಅಧ್ಯಯನದ ಫಲವಿದು" ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿಯ ಪ್ರತಿಕ್ರಿಯೆ: ಪ್ರಾಚಾರ್ಯ ಪುನೀತ...
Comments
Post a Comment