ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ಉಚಿತ ಚಿಗುರು ಚೈತನ್ಯ ಶಿಬಿರ ಸಮಾರೋಪ**

**ಕಿಷ್ಕಿಂದ ಪ್ರಭ ಸುದ್ದಿ, ಗಂಗಾವತಿ** ಗಂಗಾವತಿ, 17 ಮೇ 2025: ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ವತಿಯಿಂದ ಆಯೋಜಿಸಲ್ಪಟ್ಟ ಉಚಿತ ಚಿಗುರು ಚೈತನ್ಯ ಶಿಬಿರದ ಸಮಾರೋಪ ಸಮಾರಂಭ ಶನಿವಾರ, ಗಂಗಾವತಿಯ ಚನ್ನಬಸವ ಸ್ವಾಮಿ ಆವರಣದ ಯಾತ್ರಾ ನಿವಾಸದಲ್ಲಿ ಯಶಸ್ವಿಯಾಗಿ ನಡೆಯಿತು. ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ಕೆ. ಚನ್ನಬಸಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ವರ್ಷದ ಶೈಕ್ಷಣಿಕ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ನಾಗರತ್ನ ಎಚ್ ನಿರ್ವಹಿಸಿದರೆ, ಸ್ವಾಗತ ಭಾಷಣ ಅಮೃತೇಶ್ ಸಜ್ಜನ್ (ಶಿಕ್ಷಕ) ಮತ್ತು ಪ್ರಸ್ತಾವನೆ ನಾಗನಗೌಡ (ಶಿಕ್ಷಕ) ನೀಡಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಿಸಲಾಯಿತು.
ಅತಿಥಿಗಳಾಗಿ ರಾಧಿಕಾ ಅರಳಿ (ವೈದ್ಯೆ) ಮತ್ತು ಚಂದ್ರೇಗೌಡ (ನಿವೃತ ಉಪನ್ಯಾಸಕ) ಉಪಸ್ಥಿತರಿದ್ದರು. ಅಧ್ಯಕ್ಷ ಚನ್ನಬಸಯ್ಯ ಸ್ವಾಮಿ (ಮಠ ಟ್ರಸ್ಟಿ) ಭಾಷಣ ನೀಡಿದರೆ, ವಂದನಾರ್ಪಣೆ ಶ್ರೀದೇವಿ ಕೃಷ್ಣಪ್ಪ ನಿರ್ವಹಿಸಿದರು.
ಮುಖ್ಯಆತಿಥಿ ಗಳಾಗಿ ಸಿದ್ದನಗೌಡ ಪಾಟೀಲ್ (ವಕೀಲ), ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಪಾಲಕರು ಸೇರಿದಂತೆ ಮೈಲಾರಪ್ಪ ಬೂದಿಹಾಳ , ನಳಿನಾಕ್ಷಿ,,ಜಯಶ್ರೀ ಹಕ್ಕಂಡಿ, ಚಂದ್ರಮ್ಮ (ಜವಳಿ), ಗೀತಾ ಪಾಟೀಲ, ಕಿಶನ್ ರಾವ್ ಕುಲಕರ್ಣಿ, ಎಸ್.ಬಿ.ಎಚ್. (ನಿವೃತ ಮ್ಯಾನೇಜರ್), ಯೋಗಗುರು ಗಂಧದ ಮಠರವರು,ಧ್ಯಾನ ಗುರು ಲಲಿತಾ ವಗ್ಗ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*