ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರಮೇಶ್ ಕೋಟಿ ನೇಮಕ**
**ಬೆಂಗಳೂರು:** ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿಜಿಸ್ಟರ್ಡ್) ಬೆಂಗಳೂರು ರಾಜ್ಯ ಅಧ್ಯಕ್ಷ ಜಿ.ಎಂ. ರಾಜಶೇಖರ್ ಅವರ ಆದೇಶದ ಮೇರೆಗೆ, *ಭೀಮ ಘರ್ಜನೆ* ಪತ್ರಿಕೆಯ ಸಂಪಾದಕ ರಮೇಶ್ ಕೋಟಿ ಅವರನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅವರು ಇಂದಿನಿಂದ ಕೊಪ್ಪಳ ಜಿಲ್ಲೆಯಲ್ಲಿ ಸಂಘದ ಸಂಘಟನೆ ಮತ್ತು ವೃತ್ತಿಪರ ಪತ್ರಕರ್ತರನ್ನು ಸಂಘದ ಸದಸ್ಯರನ್ನಾಗಿ ಸೇರಿಸುವ ಕಾರ್ಯದಲ್ಲಿ ತೊಡಗುವುದರ ಜೊತೆಗೆ, ಸಂಘದ ಗೌರವವನ್ನು ಕಾಪಾಡುವ ದಿಟ್ಟತನದ ಕಾರ್ಯನೀತಿಯನ್ನು ಮುಂದುವರಿಸಲಿದ್ದಾರೆ.
ರಾಜ್ಯ ಸಮಿತಿ ಸದಸ್ಯ ಹೆಚ್. ಮಲ್ಲಿಕಾರ್ಜುನ ಅವರು ಈ ನೇಮಕಾತಿಯನ್ನು ಪ್ರಕಟಿಸಿದ್ದಾರೆ.
**ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ)**
**ಬೆಂಗಳೂರು.**
---
Comments
Post a Comment