ಗಂಗಾವತಿಯಲ್ಲಿ ಬಿಜೆಪಿಗೆ ಹೊಸ ನಾಯಕತ್ವ: ಚಂದ್ರಶೇಖರ್ ಹಿರೂರು ಮತ್ತು ಕೆ.ದುರ್ಗಪ್ಪ ಆಗೋಲಿಗೆ ಪ್ರಮುಖ ಹುದ್ದೆಗಳು**
Kiskindha prabha ಗಂಗಾವತಿ:
ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಬಿಜೆಪಿ ಹಿರಿಯ ನಾಯಕ ಗಾಲಿ ಜನಾರ್ದನ್ ರೆಡ್ಡಿ ಸಲಹೆಯ ಮೇರೆಗೆ, ಪಕ್ಷದ ಪ್ರಮುಖ ಹುದ್ದೆಗಳಿಗೆ ಅವರ ಆಪ್ತರಾದ ಇಬ್ಬರು ನಾಯಕರನ್ನು ನೇಮಕ ಮಾಡಲಾಗಿದೆ.
ಗಂಗಾವತಿ ನಗರ ಬಿಜೆಪಿ ಮಂಡಲದ ಅಧ್ಯಕ್ಷನನ್ನಾಗಿ ಚಂದ್ರಶೇಖರ್ ಹಿರೂರು ಮತ್ತು ಗ್ರಾಮೀಣ ಮಂಡಲದ ಅಧ್ಯಕ್ಷನಾಗಿ ಕೆ.ದುರ್ಗಪ್ಪ ಆಗೋಲಿ (ಡಿ. ಕೆ) ರನ್ನು ನೇಮಿಸಲಾಗಿದೆ. ಈ ನೇಮಕಾತಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ದಡೇಸುಗೂರು ಬಸವರಾಜ್ ಆದೇಶ ಹೊರಡಿಸಿದ್ದಾರೆ.
ಜನಾರ್ದನ್ ರೆಡ್ಡಿ ಅವರು ಬಿಜೆಪಿಗೆ ಮರಳುವ ಮೊದಲು, ಈ ಇಬ್ಬರು ನಾಯಕರು ಅವರೊಂದಿಗೆ ನಿಕಟ ಸಹಯೋಗ ನಡೆಸಿದ್ದರು. ರೆಡ್ಡಿ ಅವರು ಕೆಆರ್ಪಿಪಿ ಪಕ್ಷದಿಂದ ಗಂಗಾವತಿ ಶಾಸಕರಾಗಿ ಆಯ್ಕೆಯಾದ ಸಮಯದಲ್ಲಿ, ಚಂದ್ರಶೇಖರ್ ಹಿರೂರು ಮತ್ತು ದುರ್ಗಪ್ಪ ಆಗೋಲಿ ರೆಡ್ಡಿ ಪರವಾಗಿ ಕೆಲಸ ಮಾಡಿದ್ದರು. ಈಗ ಬಿಜೆಪಿಯಲ್ಲಿ ರೆಡ್ಡಿ ಪ್ರಭಾವ ಬಲಗೊಂಡಿರುವುದರೊಂದಿಗೆ, ಅವರ ನಂಬಿಕೆಯ ವ್ಯಕ್ತಿಗಳಿಗೆ ಪಕ್ಷದೊಳಗೆ ಮನ್ನಣೆ ದೊರಕಿದೆ.
.
ಬಿಜೆಪಿಯ ರಾಜ್ಯ ಮತ್ತು ಜಿಲ್ಲಾ ಸಂಸ್ಥೆಗಳಲ್ಲಿ ಹಾಗೂ ಕೇಂದ್ರ ಸರ್ಕಾರದ ನಾಮನಿರ್ದೇಶನಗಳಲ್ಲಿ ರೆಡ್ಡಿ ಪರ ಇರುವ ನಾಯಕರಿಗೆ ಮತ್ತಷ್ಟು ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇದೆ. ಇದು ಗಂಗಾವತಿ ಪ್ರದೇಶದ ರಾಜಕೀಯದಲ್ಲಿ ಬಿಜೆಪಿಯ ಬಲವರ್ಧನೆಗೆ ದಾರಿ ಮಾಡಿಕೊಡಬಹುದು ಎಂದು ಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ವರದಿ : ಮಂಜುನಾಥ ಗುಡ್ಲಾನೂರ್ ಸಂಪಾದಕರು ಕಿಷ್ಕಿಂದ ಪ್ರಭ ಕನ್ನಡ ದಿನಪತ್ರಿಕೆ
Comments
Post a Comment