ಸಹಾಯದ ಅವಶ್ಯವಿರುವ ಜನ ಸಮೂಹಕ್ಕೆ ಸೇವೆ ನೀಡುವುದೇ ಮುಖ್ಯ ಗುರಿಯಾಗಲಿ – ರೊಟೇರಿಯನ್ ತಿರುಪತಿ ನಾಯ್ಡು**

ಕಿಷ್ಕಿಂದಪ್ರಭ ಸುದ್ದಿ ಗಂಗಾವತಿ: ನಮ್ಮ ಸುತ್ತ ತೊಂದರೆ ಆತಂಕ ನಿಸ್ಸಹಾಯಕ ಜನ ಸಮೂಹ ಇದ್ದೇ ಇರುತ್ತದೆ ಅಂತವರನ್ನು ಗುರುತಿಸಿ , ಸೇವೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ರೊಟೇರಿಯನ್ ಪಿ.ಎಚ್.ಎಫ್. ವಿ. ತಿರುಪತಿ ನಾಯ್ಡು** (ಹೊಸಪೇಟೆ) ಮಾನಾಡಿದರು. ಶ್ರೀ ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದಲ್ಲಿ 6 ಜುಲೈ 2025ರಂದು ನಡೆದ ಗಂಗಾವತಿ ರೊಟರಿ ಕ್ಲಬ್ ಇನ್ಸ್ತ್ರಲೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ರೊಟರಿಯ ಸೇವಾ ಯೋಜನೆಗಳು ಮೇಲುಕು ಹಾಕುತ್ತಾ - "ಪೋಲಿಯೋ ನಿರ್ಮೂಲನೆಗೆ ರೊಟರಿ ಮಾಡಿದ ಸೇವೆ ಉದಾಹರಣೆಯಾಗಿದೆ ಮತ್ತು ಗಂಗಾವತಿ ರೋಟರಿ ಕ್ಲಬ್ ಶಾಶ್ವತ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಿ ಶಿಕ್ಷಣ, ಆರೋಗ್ಯ ಸೌಲಭ್ಯ ಅಗತ್ಯ," ಎಂದರು ಮತ್ತು ಗಂಗಾವತಿ ರೊಟರಿ ಕ್ಲಬ್‌ಗೆ 7 ಹೊಸ ಸದಸ್ಯರು ಸೇರಿದ್ದು, ಒಳ್ಳೆಯ ಬೆಳವಣಿಗೆ ಎಂದು ಅವ್ಹಾನಿಸಿದರು
ನೂತನ ಅಧ್ಯಕ್ಷ ಅಧ್ಯಕ್ಷ ಜಗದೀಶ್ ಅಂಗಡಿ ಮಾತನಾಡಿ"ಸೇವೆಯೇ ಪುಣ್ಯಕಾರ್ಯ; ಇತರರಿಗೆ ಸಹಾಯ ಮಾಡುವದರಲ್ಲಿರುವ ಆನಂದ ಬೇರೊಂದರಿಲ್ಲ ನಮಗೆಲ್ಲ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾರ್ಯಪ್ರವೃತ್ತರಾಗುತ್ತೇವೆ ಎಂದರು 2024-25ರ ಅಧ್ಯಕ್ಷ ಟಿ. ಆಂಜನೇಯ ಅವರು *"ಆರೋಗ್ಯ ಶಿಬಿರಗಳು, ಪರಿಸರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಂಚಿಕೊಂಡರು. ಇವೇಳಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಂಪಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಡಾಕ್ಟರ್ ಚೆಲುವ ರಾಜು, ಹೊಸಪೇಟೆಯ ರೋಟರಿಯನ್ ಹಾಗೂ ಇಂಡಕ್ಷನ್ ಆಫೀಸರ್ ಆದ ರಾಜೇಶ್ ಕೋರಿ ಶೆಟ್ಟರ್, ರೋಟರಿಯನ್ನು ಮಹೇಶ್ ಸಾಗರ್, ನೂತನ ಕಾರ್ಯದರ್ಶಿ ಬಸವರಾಜ ಕುಂಬಾರ್, ವಾಸು ಕೊಳಗ ಮುಂತಾದ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು ಈ ಪದಗ್ರಹಣ ಸಮಾರಂಭದಲ್ಲಿ* *ನೂತನ ಸದಸ್ಯರಾಗಿ ಡಾ. ಶ್ರೀಕಾಂತ್.ಬಿ. ಬಾನುಪ್ರಕಾಶ್ ಕುಂಬಾರ ಇಂಜಿನಿಯರ್- ರಾಜೇಶ್ ಚಿನಿವಾರ, ಪ್ರಶಾಂತ ಪರಿಗಿ, ಮುಕ್ಕುಂದ ತರಲಕಟ್ಟಿ, ಎಸ್. ಟಿ. ರಾಮಕೃಷ್ಣ ಮತ್ತು ವಿನಯ್ ಪಾಟೀಲ್ ಸದಸ್ಯತ್ವವನ್ನು ಪಡೆದು ಮುಂದೆ ಸಮಾಜದಲ್ಲಿ ಸಮಾಜ ಸೇವೆ ಕೈಗೊಳ್ಳುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ತಿಳಿಸಿದರು* *ಮಾಜಿ ಅಸಿಸ್ಟೆಂಟ್ ಗವರ್ನರ್ ಮಹೇಶ್ ಸಾಗರ್ ರವರು ಗಂಗಾವತಿ ರೋಟರಿ ಸೇವಾ ಕಾರ್ಯಗಳ ಕುರಿತು ಮಾತನಾಡಿದರು* *ಪ್ರಾರಂಭದಲ್ಲಿ ನಾಗರತ್ನ ಶಿಕ್ಷಕಿಯರು ಪ್ರಾರ್ಥಿಸಿದರು* *ರೋಟರಿ ಮಾಜಿ ಕಾರ್ಯದರ್ಶಿ ವಾಸು ಕೊಳಗದ ಸ್ವಾಗತಿಸಿದರು* *ರೋಟರಿ ಸದಸ್ಯರಾದ ವಿಜಯ ಕುಮಾರ್ ಗಡ್ಡಿ ಕಾರ್ಯಕ್ರಮ ನಿರೂಪಿಸಿದರು* *ಮಾಜಿ ಕಾರ್ಯದರ್ಶಿ ಹೆಚ್ ಎಂ ಮಂಜುನಾಥ ವಂದಿಸಿದರು* *ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದ ಹಿರಿಯರು ಮಹಿಳೆಯರು ರೋಟರಿ ಸದಸ್ಯರು ಭಾಗವಹಿಸಿದ್ದರು*

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*