ನ್ಯಾಯ ಸಿಗದಿದ್ದರೆ, ನಗರಸಭೆಯ ಆವರಣದ ಮುಂದೆ ಕುಟುಂಬಸಮೇತ ಅನಿರ್ದಿಷ್ಟ ಕಾಲ ಉಪವಾಸ :ರಮೇಶ್ ನಾಯಕ
Kishkindha prabha
ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ನೀಡಲು ನಗರಸಭೆಯ ಪೌರಾಯುಕ್ತರ ನಿರಾಕರಣೆ...
ಗಂಗಾವತಿ: ಮಾಹಿತಿ ಹಕ್ಕು (RTI) ಅಧಿನಿಯಮದ ಅಡಿಯಲ್ಲಿ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯ ಸರ್ವೆ ನಂಬರ್ 46/2 ಮತ್ತು 46/3 ಭೂಮಿಗೆ ಸಂಬಂಧಿಸಿದಂತೆ ಗೃಹ ನಿವೇಶನಕ್ಕಾಗಿ ಅನುಮೋದನೆ ಪಡೆಯಲು ಸಂಪೂರ್ಣ ದಾಖಲೆಗಳು, ವಿನ್ಯಾಸ ಪ್ರತಿಗಳು, ಆದೇಶಗಳ ನಕಲುಗಳು ಮತ್ತು ಇತರ ದೃಢೀಕೃತ ದಾಖಲಾತಿಗಳನ್ನು ನೀಡುವಂತೆ ನಗರಸಭೆಯ ಪೌರಾಯುಕ್ತರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೂ ಯಾವುದೇ ಮಾಹಿತಿಯನ್ನು ನೀಡದಿರುವುದು ಗಂಭೀರವಾದ ಆರೋಪಗಳಿಗೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಜೋಗಿನ ರಮೇಶ್ ನಾಯಕ್ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. *"ಪೌರಾಯುಕ್ತರು ಮತ್ತು ಅಧಿಕಾರಿಗಳು ಉದ್ಯಮಿಗಳೊಂದಿಗೆ ಕೈಜೋಡಿಸಿರುವುದು ಸ್ಪಷ್ಟವಾಗುತ್ತದೆ"* ಎಂದು ದೂರಿದ್ದಾನೆ ಸರ್ವೆ ನಂಬರ್ 46/2 ಮತ್ತು 46/3 ರ ಭೂಮಿಯು ತಮ್ಮ ವೈಯಕ್ತಿಕ ಸ್ವತ್ತಾಗಿದ್ದು, ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ತಮ್ಮ ಅರ್ಜಿಗೆ ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಮಾಹಿತಿ ನೀಡುವಂತೆ ಮೌಖಿಕ ಆದೇಶ ನೀಡಿದ್ದರೂ, ನಗರಸಭೆಯು ಈ ಆದೇಶವನ್ನು ಧಿಕ್ಕರಿಸಿ ನಿರಂಕುಶವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾನೆ.
ಈ ವಿಷಯದಲ್ಲಿ ನ್ಯಾಯ ಸಿಗದಿದ್ದರೆ, ನಗರಸಭೆಯ ಆವರಣದ ಮುಂದೆ ತಾವು ತಮ್ಮ ಕುಟುಂಬಸಮೇತ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಮಾಡಲು ತಯಾರಾಗಿದ್ದಾರೆ ಎಂದು ರಮೇಶ್ ನಾಯಕ್ ಮಾಧ್ಯಮಗಳ ಮುಂದೆ ತಮ್ಮ ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾನೆ
Comments
Post a Comment