ಗೌರಿ ಗಣೇಶ ಮತ್ತು ಈದ್--ಮಿಲಾದ್ ಹಬ್ಬಗಳ ನಿಮಿತ್ಯ ಗಂಗಾವತಿಯಲ್ಲಿ ಶಾಂತಿ ಸಭೆ

ಗಂಗಾವತಿ, 18 ಆಗಸ್ಟ್ 2025: ಗೌರಿ ಗಣೇಶೋತ್ಸವ ಮತ್ತು ಈದ್--ಮಿಲಾದ್ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುವುದಕ್ಕಾಗಿ ಗಂಗಾವತಿ ನಗರದ ಐಎಂಎ ಭವನದಲ್ಲಿ ಶಾಂತಿ ಸಭೆ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ ಪಿ ಡಾ. ರಾಮ್ ಎಲ್ ಅರಸಿದ್ದಿ ಮಾತನಾಡುತ್ತಾ ಹಬ್ಬಗಳು ಸಮಾಜದ ಒಗ್ಗಟ್ಟು ಮತ್ತು ಸೌಹಾರ್ದತೆಗೆ ಅವಕಾಶ ನೀಡುತ್ತವೆ. ಈ ಸಂದರ್ಭದಲ್ಲಿ ನಗರದ ಘನತೆ, ಏಕತೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸಹಕಾರದ ಮನೋಭಾವದಿಂದ ಹಬ್ಬಗಳನ್ನು ಆಚರಿಸಬೇಕು"
ಈ ವರ್ಷ ಗಣೇಶೋತ್ಸವ ಮತ್ತು ಈದ್-ಮಿಲಾದ್ ಹಬ್ಬಗಳು ಒಂದೇ ಸಮಯದಲ್ಲಿ ಬಂದಿರುವುದರಿಂದ, ಎಚ್ಚರಿಕೆ ಮತ್ತು ಸಹನೆ ಶಾಂತಿ ಅವಶ್ಯಕತೆ ಇದೆ ನಗರದ ಯುವಕರು ಸಣ್ಣ ಜಗಳಗಳಾದಲ್ಲಿ ಮುಖಂಡರು ತಕರಾರುಗಳನ್ನು ತಡೆಗಟ್ಟಲು ಸ್ಥಳೀಯ ಮಟ್ಟದಲ್ಲಿ ಸಮಾಧಾನಗೊಳಿಸುವಂತೆ ಕೋರಲಾಗಿದೆ. ಕಟ್ಟುನಿಟ್ಟಾದ ಮಾರ್ಗಸೂಚಿಗಳು ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಿಂದ ಮುಂಚಿತ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದೆ ಆಚರಿಸಿದರೆ, ಸಂಬಂಧಿತ ಸಂಘಟನೆಗಳು ಜವಾಬ್ದಾರಿ ಹೊರಬೇಕಾಗುತ್ತದೆ. · ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಿ, ಶಬ್ದ ಮಿತಿ ಮತ್ತು ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. · 4ನೇ ತಾರೀಖು (9ನೇ ದಿನ) ಗಣೇಶ ವಿಸರ್ಜನೆ ನಿಷೇಧಿಸಲಾಗಿದೆ, ಏಕೆಂದರೆ ಅದೇ ದಿನ ಈದ್-ಮಿಲಾದ್ ಆಚರಣೆ ಇದೆ. ಮುಖಂಡರು, "15 ದಿನಗಳ ಕಾಲ ಗಣೇಶೋತ್ಸವ ಆಚರಿಸುವ ನೀವು ಒಂದು ದಿನ ಅವರ ಹಬ್ಬಕ್ಕೆ ಸಹಕರಿಸಿ" ಎಂದರು.
ಮುಂದುವರೆದ ಮಾತನಾಡುತ್ತಾ ಐತಿಹಾಸಿಕ ಉದ್ದೇಶವನ್ನು ನೆನಪಿಸಿಕೊಂಡು ಗಣೇಶೋತ್ಸವವನ್ನು ಲೋಕಮಾನ್ಯ ತಿಲಕರು ಸಾಮಾಜಿಕ ಒಗ್ಗಟ್ಟು ಮತ್ತು ಸಂಸ್ಕೃತಿ ಪ್ರಚಾರಕ್ಕಾಗಿ ಪ್ರಾರಂಭಿಸಿದ್ದರು. "ಈ ವರ್ಷದ ಹಬ್ಬಗಳು ಆ ಉದ್ದೇಶವನ್ನು ಪೂರೈಸಲಿ" ಎಂದು ಸಭೆಯಲ್ಲಿ ಭಾವೋದ್ಗಾರ ವ್ಯಕ್ತಪಡಿಸಲಾಯಿತು. ಗೌರಿ ಗಣೇಶೋತ್ಸವ ಮತ್ತು ಈದ್-ಎ-ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ನಗರದ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ನಗರಸಭೆಯ ಪೌರಾಯುಕ್ತ ವಿರುಪಾಕ್ಷಮೂರ್ತಿ ಅವರು ಮಾತನಾಡಿದರು. "ಗಂಗಾವತಿ ನಗರವು ಶಾಂತಿಯ ತೋಟ. ಇಲ್ಲಿ ಜಾತಿ, ಮತ, ವರ್ಗ ಭೇದವಿಲ್ಲದೆ ಎಲ್ಲರೂ ಸಮುದಾಯ ಸಹಕಾರದಿಂದ ವರ್ತಿಸುತ್ತಾರೆ" ಎಂದು ಹೇಳಿದ ಪೌರಾಯುಕ್ತರು, "ಈ ವರ್ಷದ ಗೌರಿ ಗಣೇಶ ಮತ್ತು ಈದ್-ಎ-ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ, ಸ್ನೇಹದಿಂದ ಆಚರಿಸಲು ನಗರಸಭೆ ಮತ್ತು ನಾಗರಿಕರೆಲ್ಲರೂ ಸಿದ್ಧರಿದ್ದೇವೆ" ಎಂದು ಭರವಸೆ ನೀಡಿದರು.
ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ನಗರದ ರಸ್ತೆಗಳಲ್ಲಿನ ಗುಂಡಿ-ತಗ್ಗುಗಳನ್ನು ಕೂಡಲೇ ಸರಿಪಡಿಸಲಾಗುವುದು ಎಂದರು. · ಪೊಲೀಸ್, ಸಾರಿಗೆ ಇಲಾಖೆ ಮತ್ತು ನಗರಸಭೆಯ ಸಿಬ್ಬಂದಿ ಹಬ್ಬದ ಸುಗಮ ಆಚರಣೆಗೆ ಸಹಕಾರ ನೀಡಲು ಸಜ್ಜಾಗಿದ್ದಾರೆ. , "ಹಬ್ಬಗಳು ಸಾಮೂಹಿಕ ಸಂಭ್ರಮದ ಸಂದರ್ಭ. ಒಬ್ಬರಿಗೊಬ್ಬರು ಗೌರವಿಸಿ, ನಗರದ ಘನತೆಗೆ ಧಕ್ಕೆ ಬರದಂತೆ ವರ್ತಿಸೋಣ" ಎಂದು ಕೋರಿದರು.
ತೀರ್ಮಾನ: "ಶಾಂತಿ ಮತ್ತು ಸೌಹಾರ್ದದಿಂದ ಹಬ್ಬಗಳನ್ನು ಆಚರಿಸಿ, ಗಂಗಾವತಿಯ ಗೌರವವನ್ನು ಕಾಪಾಡಿಕೊಳ್ಳೋಣ" ಎಂಬ ಸಂದೇಶದೊಂದಿಗೆ ಸಭೆ ಮುಕ್ತಾಯಗೊಂಡಿತು. ಪ್ರಮುಖರ ಉಪಸ್ಥಿತಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡಪಾಟೀಲ್, ಪೊಲೀಸ್ ಅಧಿಕಾರಿ ಪ್ರಕಾಶ್, ಮಾಳೆ, ಸ್ಥಳೀಯ ಮುಖಂಡರು, ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ, ಮುಖಂಡ ನಾರಾಯಣಪ್ಪ ನಾಯಕ್ ನೀಲಕಂಠಪ್ಪ ನಾಗ್ ಶೆಟ್ಟಿ, ಶ್ಯಾಮಿದ್ ಮನಿಯಾರ್, ಖಾದ್ರಿ, ರಾಜಕೀಯ ನೇತೃತ್ವ, ಸಂಘಟನೆಗಳ ಪ್ರತಿನಿಧಿಗಳು ಮತ್ತು ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*