Posts

Showing posts from December, 2021

ಮ್ಯಾಥ್ಸ್ ಐಕಾನ್ " ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸುವ ಅವಶ್ಯಕತೆ : ರವಿ ಚೈತನ್ಯರೆಡ್ಡಿ

Image
  ಮ್ಯಾಥ್ಸ್ ಐಕಾನ್ " ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸುವ ಅವಶ್ಯಕತೆ : ರವಿ ಚೈತನ್ಯರೆಡ್ಡಿ ಗಂಗಾವತಿ: ಅಕ್ಷರ ಶ್ರೀ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ  ಭಾರತೀಯ ಖ್ಯಾತ ಗಣಿತ ಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ನರ ಹುಟ್ಟುಹಬ್ಬ  ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ  ಡಿ.19ರಂದು ಮ್ಯಾಥ್ಸ್ ಐಕಾನ್ ಟೆಸ್ಟ್ (ಮಾದರಿ ಗಣಿತ ಪರೀಕ್ಷೆ) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂಸ್ಥೆಯ ಅಧ್ಯಕ್ಷದ ರವಿ ಚೈತನ್ಯ ರೆಡ್ಡಿ ಮಾತನಾಡಿ ರಾಜ್ಯಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮ, ICSE ವಿಭಾಗದ ಹತ್ತನೇ ತರಗತಿ ಮಕ್ಕಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸುವ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ "ಮ್ಯಾಥ್ ಐಕಾನ್" ಪರೀಕ್ಷೆಯನ್ನು ನಮ್ಮ ಸಂಸ್ಥೆ ವತಿಯಿಂದ ಆಯೋಜಿಸಿದ್ದೇವೆ.ಈ ಪರೀಕ್ಷೆಯಲ್ಲಿ ಗಂಗಾವತಿ ಕಾರಟಗಿ, ಕನಕಗಿರಿ ,ಕೊಪ್ಪಳ ಜಿಲ್ಲೆಯಲ್ಲಿ ಇರುವ ಶಾಲೆಯ 600 ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಇದೇ ತಿಂಗಳು ದಿನಾಂಕ 22 ರಂದು ಶ್ರೀನಿವಾಸ್ ರಾಮಾನುಜನ್ನರ  ಹುಟ್ಟುಹಬ್ಬದ ನಿಮಿತ್ಯ ಹಿರಿಯ ಗಣಿತ ಶಿಕ್ಷಕರಿಗೆ ಅಕ್ಷರಾ ಶ್ರೀ ವೆಂಕಟೇಶ್ವರ ಶ್ರೀನಿವಾಸ್ ರಾಮಾನುಜನ್ ಅವಾರ್ಡ್ ವಿಸ್ತರಿಸುವ ಹಾಗೂ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ 5000 ರೂ. ನಗದು  ಹಣ ಹಾಗೂ ವ...

ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಎಂ.ಇ.ಎಸ್ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಕ್ ರ‍್ಯಾಲಿ ಮೂಲಕ ಮನವಿ.

Image
 ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಎಂ.ಇ.ಎಸ್ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಕ್ ರ‍್ಯಾಲಿ ಮೂಲಕ ಮನವಿ. ಗಂಗಾವತಿ: ಇತ್ತೀಚೆಗೆ ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರು ನಮ್ಮ ಕನ್ನಡ ಧ್ವಜವನ್ನು ಸುಟ್ಟು, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿದ್ದು, ತೀವ್ರ ಖಂಡನೀಯವಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ (ರಿ) ಗಂಗಾವತಿ ತಾಲೂಕ ಅಧ್ಯಕ್ಷ ಬೆಟ್ಟಪ್ಪ ಹೆಚ್. ಚಿಕ್ಕಬೆಣಕಲ್ ಇವರು ಪ್ರಕಟಣೆಯಲ್ಲಿ ಕಿಡಿಕಾರಿದರು. ಅವರು ಇಂದು ನಾಡದ್ರೋಹಿಗಳಾದ ಎಂ.ಇ.ಎಸ್. ಪುಂಡರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸರ್ಕಾರಕ್ಕೆ ಕೋರುವಂತೆ ಆಗ್ರಹಿಸಿ ತಹಶೀಲ್ದಾರ ಗಂಗಾವತಿ ಇವರಿಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಿ.ಬಿ. ಎಸ್ ವೃತ್ತ, ಗಾಂಧಿ ವೃತ, ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ತಹಶೀಲ್ ಕಛೇರಿವರೆಗೆ ನೂರಾರು ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಿ, ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಎಸಗುತ್ತಾ, ಕನ್ನಡದ ಧೀಮಂತ ವ್ಯಕ್ತಿಗಳ, ಸಾಹಿತಿಗಳ, ಕವಿಗಳಿಗೆ ಅಪಮಾನವೆಸಗುವುದಲ್ಲದೇ, ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸುವ ಮೂಲಕ ಕನ್ನಡ ನಾಡಿನ ಗಡಿಭಾಗವಾದ ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕಾರಣ ಎಂ.ಇ.ಎಸ್ ಸಂಘಟನೆಯನ್ನು ರದ್ದುಮಾಡಿ, ನಾಡದ್ರೋಹಿಗಳನ್ನು ಬಂ...

ಮಾದರ ಚನ್ನಯ್ಯ ಜಯಂತೋತ್ಸವ ಯಶಸ್ವಿ

Image
ಮಾದರ ಚನ್ನಯ್ಯ ಜಯಂತೋತ್ಸವ ಯಶಸ್ವಿ ಗಂಗಾವತಿ: ನಗರದಲ್ಲಿ ಶಿವಶರಣ ಮಾದರ ಚೆನ್ನಯ್ಯ ಅವರ ೯೭೧ನೇ ಜಯಂತಿಯನ್ನು ಸರಳವಾಗಿ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.  ಭಾನುವಾರ ನಗರದ ಡಾ|| ಬಿ.ಆರ್.ಅಂಬೇಡ್ಕರ್ ನಗರದಲ್ಲಿನ ಮಾದರ ಚೆನ್ನಯ್ಯ ವೃತ್ತದಲ್ಲಿ ಮಾದಿಗ ಸಮಾಜದವತಿಯಿಂದ ಚನೆಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಯಂತಿ ಆಚರಿಸಲಾಯಿತು.  ಜಯಂತಿಯಲ್ಲಿ ಭಾಗವಹಿಸಿದ್ದ ಸಮಾಜದ ಹಿರಿಯರು ಮಾತನಾಡಿ, ಮಾದರ ಚೆನ್ನಯ್ಯ ಜಯಂತಿಯನ್ನು ಇಂದು ನಾವೆಲ್ಲ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇವೆ.  ಮಾದರ ಚೆನ್ನಯ್ಯನವರು ಬಸವಣ್ಣವರಿಂದ ಪ್ರೇರಣೆ ಪಡೆದು ಶರಣರಾಗಿ ವಚನಗಳ ಮೂಲಕ ಸಮಾಜವನ್ನು ಪರಿವರ್ತಿಸಿದ್ದಾರೆ.  ಅವರು ತೋರಿಸಿದ ಮಾರ್ಗದಲ್ಲಿ ಇಂದು ನಮ್ಮ ಸಮಾಜ ನಡೆಯಬೇಕಿದೆ.  ಜಯಂತಿ ಮೂಲಕ ಸಮಾಜವನ್ನು ಸಂಘಟಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲರು ಶ್ರಮಿಸೋಣ ಎಂದು ಕರೆ ನೀಡಿದರು.  ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಫಕಿರಪ್ಪ ಮಂಡಿ, ಹುಲಗಪ್ಪ ಧಣಿ, ನಗರಸಭೆ ಸದಸ್ಯ ನವೀನ್ ಪಾಟೀಲ್, ಯುವ ಮುಖಂಡ ಬಸವರಾಜ, ಶಿವಪ್ಪ ಮಾದಿಗ, ಸಂಗಮೇಶ ಅಯೋಧ್ಯೆ, ದುರಗಪ್ಪ ಅಕ್ಕಿರೊಟ್ಟಿ, ರಾಘವೇಂದ್ರ, ಪರಶುರಾಮ, ವೀರಭದ್ರ ಕಟ್ಟಿಮನಿ, ಗಣೇಶ ಮಚ್ಚಿ, ಸಂಗಪ್ಪ ಚಲುವಾದಿ, ವಿರೇಶ ಯಲಬುರ್ಗಿ, ಸುರೇಶ, ದುರಗೇಶ, ಮಂಜುನಾಥ ಕಲ್ಗುಡಿ, ಪರಶುರಾಮ, ಕೃಷ್ಣ ಮತ್ತಿತರು ಇದ್ದರು. 

ದತ್ತಾತ್ರೆಯ ಹೋಮ

Image
 ದತ್ತಾತ್ರೆಯ ಹೋಮ  ಗಂಗಾವತಿ :  ನಗರದ ಶಂಕರಮಠದಲ್ಲಿ ರವಿವಾರದಂದು ಶ್ರೀ ದತ್ತ ಜಯಂತಿ ಪ್ರಯುಕ್ತವಾಗಿ ದತ್ತಾತ್ರೇಯ ಹೋಮ ಶ್ರದ್ಧೆ-ಭಕ್ತಿಯಿಂದ ಅಪಾರ ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ಜರುಗಿತು.. ವೇದಮೂರ್ತಿ ಮಹೇಶ್ ಭಟ್ ಸುನಿಲ್ ವೈದ್ಯ ತಂಡದವರು ಹೋಮದ ನೇತೃತ್ವವನ್ನು ವಹಿಸಿಕೊಂಡಿದ್ದರು.. ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣ  ವೈದ್ಯ ಮಾತನಾಡಿ,  ತ್ರಿಮೂರ್ತಿ ಸ್ವರೂಪರಾದ ದತ್ತಾತ್ರೆಯ ಗುರುಗಳು ಸಾಕ್ಷಾತ್ ಬ್ರಹ್ಮ ವಿಷ್ಣು ಮಹೇಶ್ವರ ಸ್ವರೂಪರು.. ದತ್ತ ನಾಮ ಸ್ಮರಣೆಯಿಂದ ಹಾಗೂ ಗುರುಚರಿತ್ರೆ ಪಾರಾಯಣದಿಂದ ಸಂಕಷ್ಟಗಳು ದೂರವಾಗಲಿದೆ ಎಂದು ತಿಳಿಸಿದರು.. ಅತಿಥಿ ಉಪನ್ಯಾಸ ನೀಡಿದ ವೇದಮೂರ್ತಿ ಬಾಲಕೃಷ್ಣರವರು ಬ್ರಹ್ಮ ಸೃಷ್ಟಿಕರ್ತನಾಗಿದ್ದು ಸಪ್ತ ಖುಷಿಗಳಿಗೆ ಅನುಗ್ರಹಿಸಿ ಅವರಲ್ಲಿ ಒಬ್ಬರಾದ ಅತ್ರಿ ಮುನಿಗಳ ಹಾಗೂ ಮಹಾಸತಿ ಅನುಸೂಯ ದೇವ ಪುತ್ರನಾಗಿ ಜಯಿಸಿದವರು.. ದತ್ತಾತ್ರೇಯ ಗುರುಗಳು ಅವರ ಮಹಿಮೆ ಅಪಾರವಾಗಿದ್ದು ಭಕ್ತಕೋಟಿ ಉದ್ಧಾರಕ್ಕಾಗಿ ಜನ್ಮತಾಳಿದ್ದಾರೆ ಎಂದು ದತ್ತ ಗುರುಗಳ ಜನನ ಅವತಾರಗಳ ಕುರಿತು ಸಮಗ್ರ ಮಾಹಿತಿಯನ್ನು ಭಕ್ತಸಮೂಹಕ್ಕೆ ತಿಳಿಸಿದರು..ಇದೇ ಸಂದರ್ಭದಲ್ಲಿ ಲಿಟಲ್ ಹಾರ್ಟ್ಸ್ ಶಾಲೆಯ ಸಂಸ್ಥಾಪಕ ಜಗನ್ನಾಥ್ ಅಲಂಪಲ್ಲಿ ಮಾತನಾಡಿ, ನಾರಾಯಣರಾವ್ ಅವರ ನಾಯಕತ್ವದಲ್ಲಿ ಶ್ರೀಮಠದ ಕಾರ್ಯಗಳು ಉತ್ತಮವಾಗಿ ಜರುಗುತ್ತಿದ್ದು ಅವರ ನೇತೃತ್ವದಲ್ಲಿ  ಬ್ರಾಹ್ಮಣ ಸಮಾಜ ಸರ್ವತೋಮುಖ ಅಭಿವೃದ್...