Posts

Showing posts from April, 2025

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

Image
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ, 30.4.2025: ICSE (ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್) ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಹೆಗ್ಗಳಿಕೆ ತಂದಿದ್ದಾರೆ. ಮುಖ್ಯಾಂಶಗಳು: • 144 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 100% ಉತ್ತೀರ್ಣತೆ. • 17 ವಿದ್ಯಾರ್ಥಿಗಳು 90% ಮೇಲ್ಅಂಕಗಳನ್ನು ಪಡೆದಿದ್ದಾರೆ. • 39 ವಿದ್ಯಾರ್ಥಿಗಳು 80% ಮೀರಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. • ಉಳಿದ ಎಲ್ಲಾ ವಿದ್ಯಾರ್ಥಿಗಳು 70%+ ಅಂಕಗಳೊಂದಿಗೆ ಯಶಸ್ವಿಯಾಗಿದ್ದಾರೆ. • ಪ್ರಥಮ್ ಮಾಲಿಪಾಟೀಲ 564 ಅಂಕಗಳು, ರಾಮ್ ಚರಣ್ 562, ಪ್ರೀತಿ ರಾಘವೇಂದ್ರ ರಾಯಕರ್ 562, ಶ್ರೀ ಮಾನ್ಯ ಶಳ್ಳಗಿ 560, ಶ್ರೇಯ ಕಾಗಲಕರ್ 564, ಶರಣಬಸವ 559 ಪ್ರಮುಖರ ಪ್ರತಿಕ್ರಿಯೆ: ಶಾಲೆಯ ಸಿಇಒ ಜಿ. ಸುನಿಲ್ ಕುಮಾರ್ ಮತ್ತು ಅಕಾಡೆಮಿಕ್ ಡೈರೆಕ್ಟರ್ ಬಿ.ವಿ. ಸತೀಶ್ ವಿದ್ಯಾರ್ಥಿಗಳ ಸಾಧನೆಯನ್ನು ಹೊಗಳಿದ್ದು, "ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಸಹಯೋಗದಿಂದ ಈ ಯಶಸ್ಸು ಸಾಧ್ಯವಾಗಿದೆ" ಎಂದು ಹೇಳಿದರು. ಉತ್ತರ ಕರ್ನಾಟಕದ ಎಜಿಎಂ ಡಾ. ರಾಜಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿ, "ಸತತ ಪರಿಶ್ರಮ ಮತ್ತು ಶಿಸ್ತುಬದ್ಧ ಅಧ್ಯಯನದ ಫಲವಿದು" ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿಯ ಪ್ರತಿಕ್ರಿಯೆ: ಪ್ರಾಚಾರ್ಯ ಪುನೀತ...

ಬಾಲ್ಯ ವಿವಾಹ ತಡೆಗೆ ತಾಲೂಕ ಮಟ್ಟದ ಸಮನ್ವಯ ಸಮಿತಿ ಸಭೆ

Image
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ 30 ಏಪ್ರಿಲ್‌ 2025 : ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಗ್ರೇಡ್-೦೨ ತಹಶೀಲ್ದಾರ್ ಮಹಾಂತಗೌಡ ಇವರ ಅಧ್ಯಕ್ಷತೆಯಲ್ಲಿ ಬಾಲ್ಯವಿವಾಹ ತಡೆ ತಾಲೂಕಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಆರ್.ಜಯಶ್ರೀ ಅವರು ೨೦೨೪-೨೫ ಬಾಲ್ಯ ವಿವಾಹ ತಡೆಗೆ ಸಂಬAಧಿಸಿದ ದೂರುಗಳ ಸ್ವೀಕರಾರ ಮತ್ತು ತಡೆಹಿಡಿದ ಮಾಹಿತಿಯನ್ನು ಸಭೆಯಲ್ಲಿ ವಿವರಿಸಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಮಹಾಂತಗೌಡ ಇವರು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಖಡ್ಡಾಯವಾಗಿ ಮೂರು ತಿಂಗಳಗೊಮ್ಮೆ ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ನಡೆಸುವಂತೆ ಮತ್ತು ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರಲ್ಲದೆ, ಬಾಲ್ಯವಿವಾಹ ತಡೆದ ಅನಸರಣಾ ಭೇಟಿಯ ವರದಿಗಳನ್ನು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವಂತೆ ನೀಡಲು ತಿಳಿಸಿದರು. ಸಾಮೂಹಿಕ ವಿವಾಹ ಹಾಗು ವೈಯಕ್ತಿಕ ವಿವಾಹಗಳನ್ನು ಅತಿ ಹೆಚ್ಚು ಜರುಗುವ ಸಂದರ್ಭಗಳನ್ನು ಗಮನಿಸಬೇಕಿದ್ದು, ಅಪ್ರಾಪ್ತ ಮಕ್ಕಳ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ವಿವಾಹ ಆಯೋಜಕರು ಖಡ್ಡಾಯವಾಗಿ ತಹಶೀಲ್ದಾರರ ಅನುಮತಿ ಪಡೆಯುವಂತೆಯೂ ಮತ್ತು ವಿವಾಹವಾಗುವವರ ಮಾಹಿತಿ ಸೂಕ್ತ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ನೀಡಬೇಕಾಗಿದ್ದು ಈ ಕುರಿತು ಜಾಗೃತಿ ಮೂಡಿಬೇಕೆಂದರು. ವಿವಾಹ ಆಯೋಜಕರು ತಮ್ಮ ಸಂಘ...

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*

Image
ಕಿಷ್ಕಿಂದ ಪ್ರಭಸುದ್ದಿ ಗಂಗಾವತಿ, [ 29 ಏಪ್ರಿಲ್ 2025 ]:** ಇಂದು ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ ನಿರಪರಾಧಿ ಜೀವಗಳನ್ನು ಸ್ಮರಿಸಿ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಗಾಣಿಗರ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್ ಅವರ ನೇತೃತ್ವಲ್ಲಿ ಎರಡು ನಿಮಿಷಗಳ ಮೌನಾಚರಣೆ ನಡೆಯಿತು ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ್, ಉಪಾಧ್ಯಕ್ಷ ಪ್ರಕಾಶ್ ಎಂ. ಕುಸುಬಿ, ಪ್ರಧಾನ ಕಾರ್ಯದರ್ಶಿ ಎಚ್.ಎ. ಮಂಜುನಾಥ್, ಜಂಟಿ ಕಾರ್ಯದರ್ಶಿ ಅರುಣ್ ಆರ್. ಜಿ., ಮತ್ತು ಕಾರ್ಯಕಾರಿ ಸದಸ್ಯರು ಹನುಮಂತಪ್ಪ ಆಳ್ವಿ, ನಾಗರಾಜ್ ನಾಯಕ್ ಹಾಗೂ ಹಿರಿಯ ವಕೀಲರು ಬಿ. ಮಲ್ಲಪ್ಪ, ಎಸ್.ಕೆ. ದಂಡಿನ್, ವಿ.ಎನ್. ಪಾಟೀಲ್, ಸೈಯದ್ ಅಶ್ಮುದ್ದೀನ್, ಜಾಜಿ ಮಲ್ಲಿಕಾರ್ಜುನ, ಪರಸಪ್ಪ ನಾಯಕ್, ಸಂತೋಷ್ ಬಾಳಂಕರ, ಪ್ರವೀಣ್ ಹೂಗಾರ್, ಮಾರುತಿ ಮೆತುಗಲ್ಲು, ಚಂದ್ರಶೇಖರ್, ಟಿ. ಮಂಜುನಾಥ್, ವೀರೇಶ್ ಕಮಲಾಪುರ್, ಪಿ.ವಿ. ಪಾಟೀಲ್, ಎಸ್.ಎಂ. ಸಜ್ಜಿಹೋಳ್, ವಿಜಯಲಕ್ಷ್ಮಿ, ನೂರ್ಜಹಾನ್, ರೋಜಾ ಮುಂತಾದವರು ಉಪಸ್ಥಿತರಿದ್ದರು. ಭಯೋತ್ಪಾದನೆಯ ವಿರುದ್ಧ ಏಕತೆಯ ಸಂದೇಶ ನೀಡುವ ಈ ಕಾರ್ಯಕ್ರಮದಲ್ಲಿ ನ್ಯಾಯಾಲಯದ ಎಲ್ಲ ಸದಸ್ಯರು ಮೌನವಾಗಿ ಸಾವಿಗೀಡಾದವರಿಗ...

**ವಿಶ್ವವಿಖ್ಯಾತ ಹಿರೇಬೆಣಕಲ್ ಶಿಲಾಯುಗದ ನೆಲೆ ರಕ್ಷಣೆಗೆ ಉಸ್ತುವಾರಿ ಸಚಿವರ ಸ್ಪಂದನೆ ಇಲ್ಲ!*

Image
**ಕೊಪ್ಪಳ:** ಮಾನವ ನಾಗರಿಕತೆಯ ಇತಿಹಾಸದಲ್ಲಿ ಮಹತ್ವಪೂರ್ಣವಾದ, ಶಿಲಾಯುಗದಿಂದ ಕಬ್ಬಿಣ ಯುಗಕ್ಕೆ ಪಾದಾರ್ಪಣೆ ಮಾಡಿದ ವಿಶ್ವಪ್ರಸಿದ್ಧ **ಹಿರೇಬೆಣಕಲ್ ಶಿಲಾಯುಗದ ನೆಲೆ** (Hirebenakal Megalithic Site) ಸಂರಕ್ಷಣೆಯ ಅನಾಥ ಸ್ಥಿತಿಯಲ್ಲಿ ನಿಂತಿದೆ. ೩,೦೦೦-೪,೦೦೦ ವರ್ಷಗಳಷ್ಟು ಪ್ರಾಚೀನವಾದ ಈ ನೆಲೆಯನ್ನು ರಕ್ಷಿಸಲು ಕೊಪ್ಪಳ ಜಿಲ್ಲೆಯ **ಉಸ್ತುವಾರಿ ಸಚಿವ ಶಿವರಾಜ ತಂಗಡಗಿ**ಯವರು ಯಾವುದೇ ಕ್ರಮ ಕೈಗೊಳ್ಳದಿದ್ದು, ಇತಿಹಾಸಪ್ರೇಮಿಗಳು ಮತ್ತು ಸ್ಥಳೀಯರನ್ನು ನಿರಾಶೆಗೊಳಿಸಿದೆ. ### **ನೆಲೆಯ ಮಹತ್ವ ಮತ್ತು ನಿರ್ಲಕ್ಷ್ಯ:** - ಹಿರೇಬೆಣಕಲ್ ನೆಲೆಯು **ಕಬ್ಬಿಣದ ಬಳಕೆಯನ್ನು ಮೊದಲು ಆವಿಷ್ಕರಿಸಿದ** ಪ್ರಾಗೈತಿಹಾಸಿಕ ಸ್ಥಳಗಳಲ್ಲಿ ಒಂದು. ಇದು ಮಾನವನ ಬದುಕನ್ನು ಉನ್ನತ ಮಟ್ಟಕ್ಕೆ ಏರಿಸಿತು. - ನೂರಾರು ಬಾರಿ ಈ ಮಾರ್ಗದಲ್ಲಿ ಓಡಾಡಿದ ಸಚಿವರು, ನೆಲೆಯನ್ನು **ಈವರೆಗೂ ಭೇಟಿ ಮಾಡಿಲ್ಲ** ಅಥವಾ ಅದರ ಸಂರಕ್ಷಣೆಗೆ ಯಾವುದೇ ಆದೇಶ ನೀಡಿಲ್ಲ. - ಗ್ರಾಮಸ್ಥರು ಮತ್ತು ಅಭಿಮಾನಿಗಳು ಹಲವಾರು ಬಾರಿ **ಸಚಿವರನ್ನು ಆಹ್ವಾನಿಸಿ, ರಕ್ಷಣಾ ಕ್ರಮಗಳನ್ನು ಕೋರಿದ್ದರೂ**, ಕೇವಲ *"ಬರುತ್ತೇನೆ"* ಎಂದು ಆಶ್ವಾಸನೆ ನೀಡಿ ನಿರ್ಲಕ್ಷ್ಯ ತೋರಿದ್ದಾರೆ. ### **ಇತ್ತೀಚಿನ ಘಟನೆ:** ಕಳೆದ ದಿನಗಳಲ್ಲಿ **ಕೊಪ್ಪಳ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ**ದಲ್ಲಿ ಸಚಿವರು ಭಾಗವಹಿಸಿದ ಸಂದರ್ಭದಲ್ಲಿ, ಸ್ಥಳೀಯರು ಮತ್ತು ಇತಿಹ...

ಗಂಗಾವತಿಯ ಸಾಹಿತಿಗಳಾದ ಅರಳಿ ನಾಗಭೂಷಣ ಮತ್ತು ವಾಣಿಶ್ರೀ ಪಾಟೀಲ್ ರಿಗೆ 'ಗುರು ಚರಂತೇಶ್ವರ ಶ್ರೀ' ಪ್ರಶಸ್ತಿ**

Image
**ಗಂಗಾವತಿಯ ಸಾಹಿತಿಗಳಿಗೆ 'ಗುರು ಚರಂತೆಶ್ವರ ಶ್ರೀ' ಪ್ರಶಸ್ತಿ** ** ಕಿಷ್ಕಿಂದ ಪ್ರಭಸುದ್ದಿ ಬೆಂಗಳೂರು:** ಶಿವಾನಂದ ಸರ್ಕಲ್ನ ಗಾಂಧಿ ಭವನದ ಆವರಣದಲ್ಲಿ 4 ಏಪ್ರಿಲ್ 2025 ರಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಂಗಾವತಿಯ ಸಾಹಿತಿ **ನಾಗಭೂಷಣ ಅರಳಿ** ಮತ್ತು **ಶ್ರೀಮತಿ ವಾಣಿಶ್ರೀ ಪಾಟೀಲ್ ರಿಗೆ**'ಗುರು ಚರಂತೇಶ್ವರ ಶ್ರೀ ಪ್ರಶಸ್ತಿ ಲಭಿಸಿದೆ. ನಾಗಭೂಷಣ ಅರಳಿಯವರ **'ನಾಗ ಜಯನ ಚೌಪದಿಗಳು'** ಮತ್ತು **'ಸಾವಿಲ್ಲದ ಪ್ರಶ್ನೆ'** (ಕವನ ಸಂಕಲನ) ಕೃತಿಗಳನ್ನು ಗಮನಿಸಿ, ಅವರ ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ನೀಡಲಾಗಿದೆ. **ಶ್ರೀ ಗುರು ದೊಡ್ಡಬಸವೇಶ್ವರ ಫೌಂಡೇಶನ್** ಮತ್ತು **ಶ್ರೀ ಗುರು ದೊಡ್ಡಬಸವೇಶ್ವರ ಸೇವಾ ಸಮಿತಿ, ಬೆಂಗಳೂರು** ಇವರ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ **ಜ್ಞಾನಪೀಠ ಪ್ರಶಸ್ತಿ** ವಿಜೇತ **ಡಾ. ಚಂದ್ರಶೇಖರ್ ಕಂಬಾರ**, ಪ್ರಾಧ್ಯಾಪಕ **ಶ್ರೀಮತಿ ಸಂಪದಾ** ಮತ್ತು ಧಾರವಾಡದ **ಪ್ರದೀಪ ಗುಡ್ಡದ** ಅವರಿಗೂ ಸಹ ಇದೇ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯ ನೇತೃತ್ವವನ್ನು **ನಂದಿಪುರದ ಖುಷಿ ಋಷಿ ಡಾ. ಮಹೇಶ್ವರ ಮಹಾಸ್ವಾಮಿಗಳು** ವಹಿಸಿದ್ದರು. **ಶ್ರೀ ಸೋಮಶಂಕರ ಮಹಾಸ್ವಾಮಿಗಳು**, **ಕೆಂಚೂರಿನ ಸವಿತಾಂದ ಮಹಾಸ್ವಾಮಿಗಳು**, **ಆಂಧ್ರದ ಅಬಾಜಾ ಶಂಭುಲಿಂಗ ಶಿವ...

ಚಿಗುರು ಚೈತನ್ಯ-3" ಮಕ್ಕಳ ಬೇಸಿಗೆ ಶಿಬಿರ - 2025**

Image
* *ಶ್ರೀ ಚನ್ನಮಲ್ಲಿಕಾರ್ಜುನ ಮಠದಿಂದ ವಿಶೇಷ ಶೈಕ್ಷಣಿಕ ಕಾರ್ಯಕ್ರಮ** ** ಕಿಸ್ಕಿಂದ ಪ್ರಭ ಸುದ್ದಿ ಗಂಗಾವತಿ, : ಶ್ರೀ ಗುರು ಕಾಯಕಯೋಗಿ ಶ್ರೀ ಚನ್ನಬಸವಸ್ವಾಮಿಯವರ ಆಶೀರ್ವಾದದೊಂದಿಗೆ, **ಶ್ರೀ ಚನ್ನಮಲ್ಲಿಕಾರ್ಜುನ ಮಠ ಟ್ರಸ್ಟ್ ಕಮೀಟಿ, ಗಂಗಾವತಿ**ಯವರು **"ಚಿಗುರು ಚೈತನ್ಯ-3"** ಎಂಬ ವಾರ್ಷಿಕ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದಾರೆ. **6ನೇ ತರಗತಿಯಿಂದ 8ನೇ ತರಗತಿ ಪಾಸಾದ ಮಕ್ಕಳಿಗಾಗಿ** ಈ ಶಿಬಿರವು **5 ಮೇ 2025**ರಿಂದ **18 ಮೇ 2025**ರ ವರೆಗೆ ನಡೆಯಲಿದೆ. **ಶಿಬಿರದ ವಿಶೇಷತೆಗಳು:** - **ಸ್ಥಳ:** ಶ್ರೀ ಚನ್ನಮಲ್ಲಿಕಾರ್ಜುನ ಮಠ, ಗಂಗಾವತಿ. - **ಸಮಯ:** ಪ್ರತಿದಿನ ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:30 ರವರೆಗೆ. - **ತರಬೇತಿ ಉಚಿತ** (ನೊಂದಣಿ ಶುಲ್ಕ: ₹100 ಮಾತ್ರ). ### **ಶಿಬಿರದ ಉದ್ದೇಶ:** ಮಕ್ಕಳ **ಮಾನಸಿಕ, ಬೌದ್ಧಿಕ, ನೈತಿಕ ವಿಕಾಸಕ್ಕಾಗಿ** ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಸೇರಿವೆ: - ಯೋಗ, ಧ್ಯಾನ, ಪ್ರಾರ್ಥನೆ. - ಚಿತ್ರಕಲೆ, ಅಭಿನಯ, ನೀತಿಕಥೆಗಳು. - ಒಗಟುಗಳು, ಹಾಡು, ಕಥೆಗಳ ಮೂಲಕ ಕಲಿಕೆ. - ಸ್ವಾವಲಂಬನೆ, ಪರಿಸರ ಪ್ರಜ್ಞೆ, ರಾಷ್ಟ್ರಭಕ್ತಿ ಮತ್ತು ಶಿಸ್ತುಬದ್ಧ ಜೀವನದ ತರಬೇತಿ. - ಪ್ರತಿದಿನ **ಬೆಳಗಿನ ಉಪಹಾರ**ದ ವ್ಯವಸ್ಥೆ. ### **ಪಾಲಕರ ಗಮನಕ್ಕೆ:** 1. **ನೊಂದಾಯಿಸಲು:** 1 ಮೇ 2025ರೊಳಗೆ ಸಂಚ...

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ: ಸಮಾಜದ ಪ್ರಗತಿಗೆ ಅವರ ವಿಚಾರಗಳು ಮಾರ್ಗದರ್ಶಿ

Image
ಕಿಷ್ಕಿಂದಪ್ರಭ ಸುದ್ದಿ ಗಂಗಾವತಿ : ಭಾರತದ ಸಂವಿಧಾನ ಶಿಲ್ಪಿ ಮತ್ತು ಸಮಾಜಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜಯಂತಿ ಗಂಗಾವತಿಯಲ್ಲಿ ವಿಶೇಷ ಶ್ರದ್ಧೆ-ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲೆಯರ್ಪಣೆ ಮಾಡಿ, ಅವರ ಕೊಡುಗೆಗಳನ್ನು ಸ್ಮರಿಸಿದರು. **" ಸಂವಿಧಾನದ ಬುನಾದಿಗೆ ಅಮರವಾದ ಕೊಡುಗೆ "** ಪರಣ್ಣ ಮುನವಳ್ಳಿ ಅವರು ಭಾಷಣದಲ್ಲಿ, *"ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಭಾರತದ ಸಂವಿಧಾನ, ಸಮಾನತೆ ಮತ್ತು ನ್ಯಾಯದ ಮೂಲಸ್ತಂಭವಾಗಿದೆ. ಅವರು ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳು ಮತ್ತು ಶೋಷಿತರ ಉನ್ನತಿಗಾಗಿ ನೀಡಿದ ತ್ಯಾಗ ಜಗತ್ತಿಗೆ ಮಾದರಿಯಾಗಿದೆ"* ಎಂದು ಹೇಳಿದರು. ಸಂವಿಧಾನ ರಚನೆಯ ಸಮಯದಲ್ಲಿ ಅಂಬೇಡ್ಕರ್ ನೀಡಿದ ತಾತ್ತ್ವಿಕ ಮಾರ್ಗದರ್ಶನವನ್ನು ಗೌರವಿಸಿದರು. ** ಸಮುದಾಯದ ಒಗ್ಗಟ್ಟಿನ ಸಂದೇಶ** ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಕುಂಟೋಜಿ ಮರಿಯಪ್ಪ, ಭೋಜಪ್ಪ, ನಗರಸಭಾ ಅಧ್ಯಕ್ಷ ಮೌಲಾಸಾಬ್, ಉಪಾಧ್ಯಕ್ಷ ಪಾರ್ವತಮ್ಮ ದುರ್ಗೇಶ್, ಸದಸ್ಯರು ಪರಶುರಾಮ ಮಡ್ಡೇರ್, ವಾಸುದೇವ ನವಲಿ, ಶರಬೋಜಿ ಗಾಯಕ್ವಾಡ್, ಜೋಗದ್ ಹನುಮಂತಪ್ಪ ನಾಯಕ್, ಶಿವಪ್ಪ ಮಾದಿಗ್, ಕೆ.ಅಂಬಣ್ಣ ಚಲವಾದಿ, ಕಾಶಿನಾಥ್ ಚಿತ್ರಗಾರ್, ಟಿ.ಆರ್.ರಾಯಬಾಗಿ, ಯು.ಲಕ್ಷ್ಮಣ್, ಹುಸೇನಪ್ಪ ಹಂಚಿನಾಳ್, ರೇಖ...

ಹೆಮ್ಮೆಯ ಗಂಗಾವತಿ ಚಿತ್ರದ ನಿರ್ದೇಶಕ ಸಚಿನ್ ಬೆಂಗಳೂರರವರಿಗೆ ಸನ್ಮಾನ**

Image
*ಗಂಗಾವತಿ, ಕಿಸ್ಕಿಂದ ಪ್ರಭಸುದ್ದಿ* 'ಹೆಮ್ಮೆಯ ಗಂಗಾವತಿ' ಚಿತ್ರದ ನಿರ್ದೇಶಕ ಸಚಿನ್ ಬೆಂಗಳೂರು ಅವರನ್ನು ಗಂಗಾವತಿಯ ಖಾಸಗಿ ಕಾರ್ಯಾಲಯದಲ್ಲಿ ರವಿವಾರ ಸಿಹಿ ತಿನ್ನಿಸಿ ಗೌರವಿಸಲಾಯಿತು. ಖ್ಯಾತ ವಕೀಲ ಶರದ್ ದಂಡಿನ ಮತ್ತು ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಗುಡ್ಲಾನೂರ್ ಅವರು ಸಚಿನ್ ಅವರಿಗೆ ಸನ್ಮಾನ ಮಾಡಿ ಗೌರವಿಸಿದ್ರು. ಈ ವೇಳೆ ಪತ್ರಕರ್ತ ಮಂಜುನಾಥ್ ಗುಡ್ಲಾನೂರ್ ಮಾತನಾಡುತ್ತಾ ಗಂಗಾವತಿ ಎನ್ನುವ ಚಲನಚಿತ್ರದ ಶೀರ್ಷಿಕೆ ತೆಗೆದುಕೊಂಡು ಈ ಭಾಗದಲ್ಲಿ ಚಿತ್ರಿಕರಣ ಮಾಡುತ್ತಿರುವ ಸಚಿನ್ ರವರಿಗೆ ಗಂಗಾವತಿಯ ಜನರ ಪರವಾಗಿ ಅಭಿನಂದನೆಗಳು ಎಂದರು ಸಚಿನ್ ಬೆಂಗಳೂರು ಅವರು ' ಗಂಗಾವತಿ' ಚಿತ್ರದ ಶೀರ್ಷಿಕೆ ಆಯ್ಕೆ ಮಾಡಿದ್ದಲ್ಲದೇ, ಈ ಪ್ರದೇಶದಲ್ಲಿ ಸ್ಥಳಗಳನ್ನು ಗುರುತಿಸಿ ಬೇರೆ ಬೇರೆ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಶರತ್ ದಂಡಿನವರ ಚಿರಂಜೀವಿ ಸೇರಿದಂತೆ ಹಲವು ಕಲಾವಿದರು ಹಾಜರಿದ್ದರು.

ಹನುಮ ಜಯಂತಿ; ಅಂಜನಾದ್ರಿಗೆ ಹರಿದು ಬಂದ ಜನಸಾಗರ ಶಾಸಕ ಜನಾರ್ಧನರೆಡ್ಡಿ ಭೇಟಿ,

Image
ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಕೆ ಗಂಗಾವತಿ: ಹನುಮ ಜಯಂತಿಯ ಅಂಗವಾಗಿ ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಶನಿವಾರದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರಕ್ಕೆ ಬೆಳಿಗ್ಗೆಯಿಂದಲೇ ರಾಜ್ಯ ಹೊರರಾಜ್ಯದಿಂದ ತಂಡ ತಡೋಪವಾಗಿ ಜನಸಾಗರವೇ ಹರಿದುಬಂದಿದೆ. ಹನುಮ ಮಾಲಾಧರಿಗಳ ಹಾಗೂ ಭಕ್ತರ ಹನುಮ ನಾಮ ಜಯಘೋಷ ಮುಗಿಲು ಮಟ್ಟಿತ್ತು. ಈ ಭಾರಿಯ ಹನುಮ ಜಯಂತಿ ಸರ್ಕಾರಿ ರಜೆ ದಿನವಾದ ಎರಡನೇ ಶನಿವಾರ ಬಂದಿರುವುದರಿAದ ಪ್ರತಿ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹನುಮ ಭಕ್ತರು ಬೆಟ್ಟಕ್ಕೆ ಬಂದಿದ್ದಾರೆ. ಬೆಳಗಿನ ಜಾವದಿಂದ ಅಪಾರ ಸಂಖ್ಯಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದಾರೆ. ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ನೂರಾರು ಬೆಟ್ಟದ ಪಾವಟಿಗೆಗಳನ್ನು ಹತ್ತಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಹನುಮ ಜಯಂತಿಯ ಹಿನ್ನೆಲೆ ಅಂಜನಾದ್ರಿಯಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲಾ ಜನವೇ ಜನ. ಅತ್ಯಂತ ಉತ್ಸಾಹದಿಂದ ಭಕ್ತರು ಆಂಜನೇಯನ ನಾಮಸ್ಮರಣೆ ಮಾಡುತ್ತಾ ಬೆಟ್ಟ ಹತ್ತುವ ದೃಶ್ಯ ಕಂಡುಬAದಿತು. ಆಗಮಿಸಿದ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಸ್ಥಳೀಯ ಪೊಲೀಸ್ ಇಲಾಖೆ ಅಗತ್ಯ ಬಂದೂಬಸ್ತ್ ಒದಗಿಸಲಾಗಿತ್ತು. ಶಾಸಕ ರೆಡ್ಡಿ ಭೇಟಿ : ಹನುಮ ಜಯಂತಿ ಪ್ರಯುಕ್ತ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಅಂಜನಾದ್ರಿ...

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

Image
ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಪತ್ರಿಕಾಗೋಷ್ಠಿ ಸಂಘದ ಕಚೇರಿಯಲ್ಲಿ ನಡೆಯಿತು. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡುತ್ತ ಏಪ್ರಿಲ್ 17ರಂದು ಉದ್ಯೋಗ ಮೇಳವನ್ನು ಕೊಟ್ಟೂರೇಶ್ವರ ಕ್ಯಾಂಪಸ್ ನಲ್ಲಿ ಯೋಜಿಸಲಾಗಿದೆ. ನಿರುದ್ಯೋಗಿ ಯುವಜನರು ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಿ ಎಂದು ಕರೆ ನೀಡಿದರು. ಉದ್ಯೋಗ ಮೇಳದ ಪ್ರಮುಖ ವಿವರಗಳು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ - ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯ ಕಲ್ಕರ ಶ್ರೀ ಚನ್ನಬಸವೇಶ್ವರ ಸ್ವಾಮಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಸಹಯೋಗದಲ್ಲಿ ನಡೆಯಲಿದೆ ದಿನಾಂಕ: 17 ಏಪ್ರಿಲ್ 2025 ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 ವರೆಗೆ ಸ್ಥಳ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕ್ಯಾಂಪಸ್ ಗಂಗಾವತಿನಲ್ಲಿ ಭಾಗವಹಿಸುವ ಕಂಪನಿಗಳು: ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಬಳ್ಳಾರಿ, ಹಾಸನ, ಶಿವಮೊಗ್ಗ ಮುಂತಾದ ಪ್ರದೇಶಗಳ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಅರ್ಹತೆ:- ಶೈಕ್ಷಣಿಕ: ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೊಮಾ, ಪದವೀಧರರು, ಕಂಪ್ಯೂಟರ್ ತರಬೇತಿ ಪಡೆದವರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ವಯೋಮಿತಿ: 18 ರಿಂದ 3...

ಗಂಗಾವತಿಯಲ್ಲಿ ಬೃಹತ್ ಉದ್ಯೋಗ ಮೇಳ: 17 ಏಪ್ರಿಲ್ 2025 ರಂದು

Image
ಗಂಗಾವತಿ, 12 ಏಪ್ರಿಲ್ 2025:** ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ **17 ಏಪ್ರಿಲ್ 2025**ರಂದು ಗಂಗಾವತಿಯಲ್ಲಿ ನಡೆಯಲಿರುವ **ಬೃಹತ್ ಉದ್ಯೋಗ ಮೇಳ**ದ ಪೂರ್ವಭಾವಿ ಪತ್ರಿಕಾಗೋಷ್ಠಿ ಇಂದು ಸಂಘದ ಕಚೇರಿಯಲ್ಲಿ ನಡೆಯಿತು. *ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡುತ್ತ ಉದ್ಯೋಗ ಮೇಳವನ್ನು ಯೋಜಿಸಲಾಗಿದೆ. ನಿರುದ್ಯೋಗಿ ಯುವಜನರು ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಲಿ"* ಎಂದು ಹೇಳಿದರು. - ಉದ್ಯೋಗ ಅಭಿವೃದ್ಧಿ ನಿರ್ವಾಹಕ ಹನುಮೇಶ್,** ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶರಣೇಗೌಡ , ಹೆಚ್.ಎಂ. ಮಂಜುನಾಥ್, ಸುರೇಶ ಸಿಂಗನಾಳ, ಲಿಂಗಪ್ಪ ಹಿರಾಳ ಕಮತಗಿ, ಪ್ರಾಚಾರ್ಯರಾದ ಬಸವರಾಜ ಅಯೋಧ್ಯ ಮತ್ತು ಮುಂತಾದ ಗಣ್ಯರು ಉಪಸ್ಥಿತರಿದ್ದರು. **ಉದ್ಯೋಗ ಮೇಳದ ಪ್ರಮುಖ ವಿವರಗಳು:** ✅ **ಸಹಯೋಗ** - ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ - ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯ - ಕಲ್ಕರ ಶ್ರೀ ಚನ್ನಬಸವೇಶ್ವರ ಸ್ವಾಮಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ 📅 **ದಿನಾಂಕ:** 17 ಏಪ್ರಿಲ್ 2025 (ಗುರುವಾರ) ⏰ **ಸಮಯ:** ಬೆಳಿಗ್ಗೆ 10:00 ರಿಂದ ಸಂಜೆ 4:00 ವರೆಗೆ 📍 **ಸ್ಥಳ:** ಗಂಗಾವತಿ 🏢 **ಭಾಗವಹಿಸುವ ಕಂಪನಿಗಳು:** ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಬಳ್ಳಾರಿ, ಹಾಸನ, ಶಿವಮೊಗ್ಗ ...

ನಮ್ಮ ಹೆಮ್ಮೆ‌; B.K. ಭೂತೆ  ನಮ್ಮ ವಕೀಲರು.'

Image
ಕಿಷ್ಕಿಂದ ಪ್ರಭ ಸುದ್ದಿ ಕೊಪ್ಪಳ ' ನಮ್ಮ ಹೆಮ್ಮೆ ವಕೀಲರು, ವ್ಯಾಪಾರ, ಒಕ್ಕುಲುತನ ಕಟುಂಬ, ಒಕ್ಕಲಿಗ ಬೇರುಗಳೊಂದಿಗೆ ಬೆಳೆದ ಮಣ್ಣಿನ ಮಗ, ಅಪ್ಪಟ ದೇಸಿ ಪ್ರತಿಭೆ, 'ಎನಗಿಂತ ಕಿರಿಯರಿಲ್ಲ' ಎಂದೇ‌, ಬದುಕುತ್ತಿರುವ ನಮ್ಮಗಳ ನಡುವಿನ ಹಿರಿಯ ಜೀವ ಇವರು. ನ್ಯಾಯಾಧೀಶರಾಗಿ ನ್ಯಾಯ ಪೀಠದ ಮೇಲೆ ಕುಳಿತು, ನ್ಯಾಯವಾದಿಯಾಗಿ ಪೀಠದ ಮುಂದೆ ನಿಂತು, ನ್ಯಾಯ ದೇವತೆ ಸೇವೆ ನಿರಂತರ, ತಮ್ಮ ಕಾನೂನು ದೀರ್ಘ ತಪಸ್ಸಿಗೆ ನಮ್ಮಗಳ ಗೌರವ ಪೂರ್ವಕ ಚಪ್ಪಾಳೆ. ದೇಹ ಮಾಗಿದರೂ ಕಾಯವೇ ಕೈಲಾಸ ಅಂತಲೂ, ಕಾಯಕವೂ ಕೈಲಾಸ ಎಂದು, ನಿತ್ಯ ನಮ್ಮ ನಡುವೆ ನಿಲಂಜನ ದೀಪದಂತೆ ಓಡಾಡುವ ಪ್ರಕಾಶಮಾನವಾದ ದಾರಿದೀಪ, ಸ್ಪಷ್ಟ ಜ್ಞಾನದ ಚಿಲುಮೆಯ ಚಿರ ಯುವಕ ಇವರು. ಅದೇ ಕಾನೂನುನ್ನು ಪೀಠಕ್ಕೆ ಹೇಳುವ, ಕಕ್ಷೆದಾರರಿಗೆ ತಿಳಿಸುವ, ಜೂನಿಯರ್ ವಕೀಲರುಗಳಿಗೆ ಕಲಿಸುವ ಬಗೆ ಮಾತ್ರ ಬೇರೆ, ಪ್ರತಿಯೊಬ್ಬರ ಕಿವಿಗೂ ಹೊಂದಿಕೊಳ್ಳುವಂತೆ ತಿಳಿಸುವ, ಅನುಮಾನ ಭಯವನ್ನು ಹೋಗಲಾಡಿಸುವ ಅದ್ಭುತವಾಗಿ ಮಲದಟ್ಟ ಮಾಡುವ ಕಲೆ ಇವರದು. ಇಳಿ‌ ಸಂಜೆಯಲ್ಲಿ ಕಲ್ಲು ಬೆಂಚಿನ ಮೇಲೆ ಲೂಧಿ‌ ಗಾರ್ಡನಲ್ಲಿ ಹಾಯಾಗಿದ್ದ ಮೂರು ಜೀವಗಳಲ್ಲಿ ಒಂದು ಜೀವದಂತೆ ತೋರುತಿಹರು,‌ ನಮ್ಮಗಳ ಜೀವನ ಪ್ರೀತಿಗೆ ಓಂಕಾರ ಹಾಕಿವದರು, ಒಲವಿನಂತೆ ಬದಕನ್ನ ಸಣ್ಣ ಸ್ಟೀಲ್ ಡಬ್ಬಿಯಲ್ಲಿಯ ಲವಂಗ, ಯಾಲಕ್ಕಿ ಸವಿಯುತ್ತಿರುವ ನಮ್ಮ ನಡುವಿನ 'ಮಿಸ್ಟರ್ ಪರ್ಫೆಕ್ಟ್' ಇವರು. - ವಿಜಯ ಅಮ...

ಕೊಪ್ಪಳದ ಸಂಚಾರಿಗಳ ಸುರಕ್ಷತೆಗೆ ಸರ್ಕಲ್ ನಲ್ಲಿ ತಾತ್ಕಾಲಿಕ ಮೇಲ್ಚಾವಣಿ ನಿರ್ಮಾಣ: ಬಿಸಿಲಿನ ತಾಪದಿಂದ ಪಾರಾಗಲು ವ್ಯವಸ್ಥೆ

Image
ಕಿಷ್ಕಿಂದ ಪ್ರಭ ನ್ಯೂಸ್ ಕೊಪ್ಪಳ:** ಕೊಪ್ಪಳ ನಗರದಲ್ಲಿ ಮತ್ತು ಪ್ರಮುಖ ಸರ್ಕಲ್ಗಳಲ್ಲಿ ಸಂಚಾರಿಗಳ ಸುರಕ್ಷತೆಗೆ ತಾತ್ಕಾಲಿಕ ಮೇಲ್ಚಾವಣಿ ನಿರ್ಮಾಣ ಮಾಡಲಾಗಿದೆ. ಟ್ರಾಫಿಕ್ ನಿಯಮಗಳಲ್ಲಿ ನಿಲುಗಡೆ ಸಮಯದಲ್ಲಿ ಸಂಚಾರಿಗಳು ಬಿಸಿಲಿನ ತಾಪದಿಂದ ಬಳಲುವುದನ್ನು ತಪ್ಪಿಸಲು ಈ ಹೊಸ ವ್ಯವಸ್ಥೆ ಕೊಪ್ಪಳ ನಗರದಲ್ಲಿ ಜಾರಿಗೆ ಬಂದಿದೆ. ಸಂಚಾರಿಗಳು ನಿಲುಗಡೆಯ ಸಮಯದಲ್ಲಿ ತೀವ್ರ ಬಿಸಿಲಿನಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಿತ ಇಲಾಖೆಯು ಪ್ರಮುಖ ಸರ್ಕಲ್ಗಳಲ್ಲಿ ಮೇಲ್ಚಾವಣಿ ನಿರ್ಮಿಸಿ ಸಂಚಾರಿಗಳಿಗೆ ರಕ್ಷಣೆ ನೀಡಿದೆ. ಈ ಕ್ರಮವು ಸಾರ್ವಜನಿಕರಿಂದ ಸ್ವಾಗತಾರ್ಹವಾಗಿದ್ದು, ಸಂಚಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. "ಬಿಸಿಲಿನ ತಾಪದಿಂದ ರಕ್ಷಣೆ ಪಡೆದುಕೊಳ್ಳಲು ಈಗ ಸುಲಭವಾಗಿದೆ. ಈ ವ್ಯವಸ್ಥೆಗೆ ಕಾರಣರಾದ ಇಲಾಖೆಗೆ ನಮ್ಮ ಧನ್ಯವಾದಗಳು," ಎಂದು ಸ್ಥಳೀಯರು ಹೇಳಿದ್ದಾರೆ. ಈ ಮಾರ್ಪಾಡು ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಮಹತ್ವದ ಕೊಡುಗೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಆಡಳಿತ ಭವನವು ಜಿಲ್ಲೆಯ ಪ್ರವಾಸೋದ್ಯಮದ ಸಂಪತ್ತನ್ನು ಪ್ರದರ್ಶಿಸುವ ಒಂದು ವಸ್ತುಪ್ರದರ್ಶನಾಲಯವಾಗಿ ರೂಪುಗೊಂಡಿದೆ.

Image
ಕೊಪ್ಪಳ ಜಿಲ್ಲೆಯ ಆಡಳಿತ ಭವನವು ಜಿಲ್ಲೆಯ ಪ್ರವಾಸೋದ್ಯಮದ ಸಂಪತ್ತನ್ನು ಪ್ರದರ್ಶಿಸುವ ಒಂದು ವಸ್ತುಪ್ರದರ್ಶನಾಲಯವಾಗಿ ರೂಪುಗೊಂಡಿದೆ. ಕಿಷ್ಕಿಂದ ಪ್ರಭ ಸುದ್ದಿ ಕೊಪ್ಪಳ: ಕೊಪ್ಪಳ ಜಿಲ್ಲೆಯ ಆಡಳಿತ ಭವನವು ಜಿಲ್ಲೆಯ ಪ್ರವಾಸೋದ್ಯಮದ ಸಂಪತ್ತನ್ನು ಪ್ರದರ್ಶಿಸುವ ಒಂದು ವಸ್ತುಪ್ರದರ್ಶನಾಲಯವಾಗಿ ರೂಪುಗೊಂಡಿದೆ. ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಪ್ರವಾಸೋದ್ಯಮ ಇಲಾಖೆಯ ನಾಗರಾಜ್ ರವರ ನೇತೃತ್ವದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಭವನದ ಪ್ರವೇಶದಿಂದಲೇ ತಾಲೂಕುಗಳ ಪ್ರಮುಖ ಪ್ರವಾಸಿ ಸ್ಥಳಗಳ ಸಚಿತ್ರ ಮಾಹಿತಿ, ಐತಿಹಾಸಿಕ ಕುರುಹುಗಳು ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುವ ವಾಲ್ ಬೋರ್ಡ್ಗಳು ಸಂದರ್ಶಕರನ್ನು ಆಕರ್ಷಿಸುತ್ತವೆ . ಪ್ರಮುಖ ಪ್ರದರ್ಶನಗಳು ಮತ್ತು ಪ್ರವಾಸಿ ತಾಣಗಳು: 1. **ಗವಿಮಠ ದೇವಸ್ಥಾನ**: ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ವಾರ್ಷಿಕ ಗವಿಸಿದ್ಧೇಶ್ವರ ಜಾತ್ರೆ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ . 2. **ಅಂಜನಾದ್ರಿ ಪರ್ವತ ಮತ್ತು ಆನೆಗೊಂದಿ**: ಹನುಮಂತನ ಜನ್ಮಸ್ಥಳ ಎಂದು ಪರಿಗಣಿಸಲ್ಪಟ್ಟಿದೆ ಮತ್ತು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಅವಶೇಷಗಳನ್ನು ಹೊಂದಿದೆ . ಬೃಹತ್ ಶಿಲಾಯುಗದ ನೆಲೆ ಅಥವಾ ಮೆಘಾಲೆಥಿಕ್ ಸೈಟ್ ಹಿರೇಬೆಣಕಲ್ ಮೂರರಿಂದ ನಾಲ್ಕು ಸಾವಿರ ವರ್ಷಗಳ ಪುರಾತನ ಐತಿಹಾಸಿಕ ಸ್ಥಳ ಆದಿಮಾನವನ ನೆಲೆಯಾಗಿರತಕ್ಕಂತಹ ಹಿರೆಬಣಕಲ್ ನೆಲೆಯಲ್ಲಿ ಗವಿ ವರ್ಣ ಚಿತ್ರ, ಬೃಹತ...

ಪ್ರತಿಷ್ಠಿತ ಗಂಗಾವತಿ ಲೈನ್ಸ್ ಕ್ಲಬ್‌ಗೆ ಡಾ. ಶಿವಕುಮಾರ್ ಮಾಲಿಪಾಟೀಲ್ ಅಧ್ಯಕ್ಷರಾಗಿ ಆಯ್ಕೆ**

Image
**ಪ್ರತಿಷ್ಠಿತ ಗಂಗಾವತಿ ಲೈನ್ಸ್ ಕ್ಲಬ್‌ಗೆ ಡಾ. ಶಿವಕುಮಾರ್ ಮಾಲಿಪಾಟೀಲ್ ಅಧ್ಯಕ್ಷರಾಗಿ ಆಯ್ಕೆ** ** ಕಿಷ್ಕಿಂದ ಪ್ರಭ ಗಂಗಾವತಿ:** ಸಮಾಜಸೇವೆ, ಪರಿಸರ ರಕ್ಷಣೆ ಮತ್ತು ಪ್ರಾಣಿ ಕಾಳಜಿಯಲ್ಲಿ ಸಕ್ರಿಯವಾಗಿರುವ ಡಾ. ಶಿವಕುಮಾರ್ ಮಾಲಿಪಾಟೀಲ್ ರವರನ್ನು ಪ್ರತಿಷ್ಠಿತ ಗಂಗಾವತಿ ಲೈನ್ಸ್ ಕ್ಲಬ್ ಅಧ್ಯಕ್ಷರಾಗಿ ಏಕಮತದಿಂದ ಆಯ್ಕೆ ಮಾಡಲಾಗಿದೆ. ಡಾ. ಮಾಲಿಪಾಟೀಲ್ ರವರು ಒಬ್ಬ ನಿಷ್ಣಾತ ದಂತವೈದ್ಯರಾಗಿದ್ದು, ವೃತ್ತಿಯ ಜೊತೆಗೆ ಸಾಮಾಜಿಕ ಹಾಗೂ ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಪ್ರಾಣಿಗಳ ಕಾಳಜಿ, ಪರಿಸರ ಸಂರಕ್ಷಣೆ ಮತ್ತು ಚಾರಣ ಸಂಸ್ಕೃತಿಯ ಪ್ರಚಾರದಲ್ಲಿ ಅವರ ಸಮರ್ಪಣೆ ಹಲವಾರು ಸಂಘಟನೆಗಳಿಂದ ಮನ್ನಣೆ ಪಡೆದಿದೆ. ಇದರ ಜೊತೆಗೆ, ಅವರು ಸ್ಥಳೀಯ ಚಾರಣ ಬಳಗದ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಲೈನ್ಸ್ ಕ್ಲಬ್‌ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡಾ. ಮಾಲಿಪಾಟೀಲ್ ರವರು, *"ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಸಹಕರಿಸಿ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಮತ್ತು ಶಿಸ್ತುಬದ್ಧ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವುದು ನಮ್ಮ ಗುರಿ"* ಎಂದು ಹೇಳಿದ್ದಾರೆ. ಸಮುದಾಯ ನಾಯಕತ್ವ, ಸೇವಾ ಭಾವನೆ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬಲಪಡಿಸುವಲ್ಲಿ ಅವರು ಮಾಡಿರುವ ಕೆಲಸವನ್ನು ಗಮನಿಸಿದ ಕ್ಲಬ್ ಸದಸ್ಯರು, ಅವರ ನೇತೃತ್ವದಲ್ಲಿ ಸಂಸ್ಥೆಯು ಹೊಸ ಮಟ್ಟದ ಸಾಧನೆ...